HEALTH TIPS

ಜಿಲ್ಲೆಯಲ್ಲಿ ಡಿಜಿಟಲ್ ಸರ್ವೆ ಪ್ರಕ್ರಿಯೆ ಚುರುಕು-20 ಸಾವಿರ ಹೆಕ್ಟೇರ್ ಭೂಮಿ ಅಳತೆ


              ಕಾಸರಗೋಡು: ಎಲ್ಲಾ ಭೂಮಿ ಹಾಗೂ ಭೂಮಿಗೆ ಸಂಬಂಧಿಸಿ ದಾಖಲೆ, ಸೇವೆಗಳನ್ನು ಸ್ಮಾರ್ಟ್ ಮಾಡುವ ಉದ್ದೇಶದಿಂದ ಕೇರಳ ಸರ್ಕಾರ ಜಾರಿಗೆ ತಂದಿರುವ ಡಿಜಿಟಲ್ ಸಮೀಕ್ಷೆ ಚಟುವಟಿಕೆಗಳಿಗೆ ಜಿಲ್ಲೆಯಲ್ಲಿ ಚುರುಕುಮುಟ್ಟಿಸಲಾಗಿದೆ. 

             ಮೊದಲ ಹಂತದಲ್ಲಿ ಎಲ್ಲ 18 ಗ್ರಾಮಗಳು ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಇದರಲ್ಲಿ 17 ಗ್ರಾಮಗಳ ಸರ್ವೇ ದಾಖಲೆ ಕಂದಾಯ ಆಡಳಿತಕ್ಕೆ ಹಸ್ತಾಂತರವಾಗಬೇಕಾಗಿದೆ. 

         ಮೊದಲ ಹಂತದಲ್ಲಿ ಕಾಸರಗೋಡು ಗ್ರಾಮ ಹಾಗೂ ಎರಡನೇ ಹಂತದಲ್ಲಿ ಪೇರಾಲ್, ಕುಂಜತ್ತೂರು, ಬಾರ, ಇಚ್ಲಂಗೋಡು, ಉದ್ಯಾವರ, ಬೇಕೂರು ಮತ್ತು ಚೆಮೇನಿ-2 ಗ್ರಾಮಗಳಲ್ಲಿ ಸರ್ವೆ ಪೂರ್ಣಗೊಳಿಸಿ 9(2) ಪ್ರಕಟಿಸಲಾಗಿದೆ.  ನಂತರ ಸಾರ್ವಜನಿಕರಿಗೆ ದಾಖಲೆಗಳನ್ನು ಪರಿಶೀಲಿಸಲು ಅವಕಶ ಕಲ್ಪಿಸಲಾಘಿದ್ದು, ಈ ಬಗ್ಗೆ ದೂರುಗಳಿದ್ದಲ್ಲಿ, ಪರಿಹಾರ ಕಂಡುಕೊಂಡು ಸರ್ವೇ ಕಾರ್ಯ ಪೂರ್ತಿಗೊಳಿಸುವುದು ಗುರಿಯಾಗಿದೆ. 

              ಭೂಮಾಲೀಕರು ದಾಖಲೆಗಳನ್ನು ಪರಿಶೀಲಿಸಿ ಸಂಪೂರ್ಣವಾಗಿ ದೋಷರಹಿತವಾಗಿರುವುದಾಗಿ ಸ್ಪಷ್ಟಪಡಿಸಬೇಕು ಮತ್ತು ಕಂದಾಯ ಆಡಳಿತಕ್ಕೆ ಹಸ್ತಾಂತರಿಸಬೇಕು. ರಾಜ್ಯದ ಇನ್ನಷ್ಟು ಗ್ರಾಮಗಳು ಮೊದಲ ಹಂತದ ಸರ್ವೇ ಪೂರ್ತಿಗೊಂಡು ಕಂದಾಯ ಆಡಳಿತಕ್ಕೆ ಹಸ್ತಾಂತರಕ್ಕೆ ಸಿದ್ಧವಾಗಿದೆ. ನಂತರ ಎಲ್ಲಾ ಭೂಮಿಗೆ ಸಂಬಂಧಿಸಿದ ಸೇವೆಗಳು ಆನ್‍ಲೈನ್‍ನಲ್ಲಿ ಮಾತ್ರ ಲಭ್ಯವಿರಲಿದೆ.  ಜಿಲ್ಲೆಯ ಎರಡನೇ ಹಂತದಲ್ಲಿ ಸೇರ್ಪಡೆಗೊಂಡ 14 ಗ್ರಾಮಗಳಲ್ಲಿ ಡಿಜಿಟಲ್ ಸಮೀಕ್ಷೆ ಆರಂಭಿಸಲಾಗಿದೆ. ಪಾಡಿ, ಕಿನಾನೂರು, ಚಿಮೇನಿ, ಪೆರಿಯ, ಕಿದೂರು, ನೆಕ್ರಾಜೆ, ಮಡಿಕೈ ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಗ್ರಾಮಗಳ ಭೂ ಮಾಲೀಕರು 'ಮೈ ಲ್ಯಾಂಡ್' ಪೆÇೀರ್ಟಲ್ ಮೂಲಕ ನಾಗರಿಕರ ಲಾಗಿನ್ ಮೂಲಕ ಸಮೀಕ್ಷೆ ಮಾಹಿತಿಯನ್ನು ಪರಿಶೀಲಿಸಬಹುದು. ಶಿಬಿರ ಕಚೇರಿಗೆ ಭೇಟಿ ನೀಡಿ ಅಥವಾ ಉಸ್ತುವಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಶೀಲಿಸಬಹುದಾಗಿದೆ. ನನ್ನ ಭೂಮಿ ಪೆÇೀರ್ಟಲ್ ಲಾಗಿನ್ ವಿಳಾಸ(hಣಠಿಠಿ://eಟಿಣebhoomi.ಞeಡಿಚಿಟಚಿ.gov.)ದ ಮೂಲಕ ಸಮೀಕ್ಷೆ ಮಾಹಿತಿ ಪಡೆದುಕೊಳ್ಳಬಹುದಗಿದೆ.  ಇನ್ನು ಡಿಜಿಟಲ್ ಸರ್ವೆ ನಡೆಯುವ ಗ್ರಾಮಗಳಲ್ಲಿರುವ ಜಮೀನು ಮಾಲೀಕರು ಜಮೀನು ಹೊಂದಿರುವವರು ತಮ್ಮ ಜಾಗದ ಗಡಿ ತೋರಿಸಿ, ನಿವೇಶನದ ಹಕ್ಕು ದಾಖಲೆ, ಮೊಬೈಲ್ ಸಂಖ್ಯೆ ಹಾಗೂ ಪಾಸ್ ಕೋಡ್ ನೀಡಿ ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries