HEALTH TIPS

ಕಾಸರಗೋಡು ಜಿಲ್ಲೆಯ ರಸ್ತೆ, ಕಟ್ಟಡ ನಿರ್ಮಾಣಕ್ಕೆ 20ಕೋಟಿ ರೂ.ಮೊತ್ತದ ಯೋಜನೆಗೆ ಆಡಳಿತಾನುತಿ

                   ಕಾಸರಗೋಡು : ಕೇರಳದ ವಿವಿಧ ಜಿಲ್ಲೆಗಳಲ್ಲಿ 117 ರಸ್ತೆಗಳ ಪುನ: ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ 269.19 ಕೋಟಿ ರೂ.,  ಎರಡು ಕಿರುಸೇತುಎಗಳ ನಿರ್ಮಾಣಕ್ಕೆ ರೂ.7.12 ಕೋಟಿ ಹಾಗೂ ವಿವಿಧ ಇಲಾಖೆಗಳಿಗೆ 19 ಕಟ್ಟಡಗಳ ನಿರ್ಮಾಣಕ್ಕೆ ರೂ.37 ಕೋಟಿ ರೂ. ಮಂಜೂರು ಮಾಡಲಾಗಿದೆ.  ರಸ್ತೆಗಳ ನವೀಕರಣ, ನಿರ್ವಹಣೆ ಮತ್ತು ಬಿಎಂಬಿಸಿ ಗುಣಮಟ್ಟದೊಂದಿಗೆ ಮೇಲ್ದರ್ಜೆಗೇರಿಸುವ ನಿಟ್ಟನಲ್ಲಿ ಈ ಮೊತ್ತ ಮಂಜೂರುಗೊಳಿಸಿರುವುದಾಗಿ ಲೋಕೋಪಯೋಗಿ ಇಲಾಖೆ ಸಚಿವ ಪಿ.ಎ. ಮುಹಮ್ಮದ್ ರಿಯಾಜ್ ಮಾಹಿತಿ ನೀಡಿದ್ದಾರೆ.

               ಕಾಸರಗೋಡು ಜಿಲ್ಲೆಯಲ್ಲಿ ಮೂರು ರಸ್ತೆಗಳು ಮತ್ತು ನಾಲ್ಕು ಕಟ್ಟಡಗಳ ನಿರ್ಮಾಣಕ್ಕಾಗಿ 20 ಕೋಟಿ ರೂ. ಮೊತ್ತದ ಯೋಜನೆಗೆ ಆಡಳಿತಾನುಮತಿ ನೀಡಲಾಗಿದೆ. ಕಾಸರಗೋಡು ಕ್ಷೇತ್ರದ ಚೌಕಿ-ಉಳಿಯತ್ತಡ್ಕ-ಎಸ್‍ಪಿ ನಗರ-ಹಿದಾಯತ್ ನಗರ-ಕೋಪಾ ರಸ್ತೆಗೆ 5 ಕೋಟಿ ಮತ್ತು ಕಾಞಂಗಾಡು ಕ್ಷೇತ್ರದ ಪಾಣತ್ತೂರು-ಪಾರಕ್ಕಡವ್ ರಸ್ತೆಗೆ 4 ಕೋಟಿ, ಉದುಮ ಕ್ಷೇತ್ರದಲ್ಲಿ ಎರುಮಕುಳಂ-ತಾನ್ನಿಯಾಡಿ ರಸ್ತೆಗೆ 5 ಕೋಟಿ ರೂ. ಮಂಜೂರಾಗಿದೆ. 

              ಮಂಜೇಶ್ವರ ಮಂಡಲದ ಉಪ್ಪಳ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ 1.5 ಕೋಟಿ, ಕಾಞಂಗಾಡ್ ಮಂಡಲದ ಹೊಸದುರ್ಗ ವಿಶ್ರಾಂತಿಗೃಹದ ಹೊಸ ಬ್ಲಾಕ್ ನಿರ್ಮಾಣಕ್ಕೆ 1.5 ಕೋಟಿ ಮತ್ತು ತ್ರಿಕರಿಪುರ ಮಂಡಲದ ಚಿಮೇನಿಯಲ್ಲಿ ಹೊಸ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ 3 ಕೋಟಿ ರೂ. ಮಂಜೂರುಗೊಳಿಸಲಾಗಿದೆ..



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries