HEALTH TIPS

ಜುಲೈ 21ರಿಂದ ಸೆಪ್ಟಂಬರ್ 18ರ ತನಕ ಎಡನೀರು ಶ್ರೀಗಳ ನಾಲ್ಕನೇ ಚಾತುರ್ಮಾಸ್ಯ ವ್ರತಾಚರಣೆ: ಸಮಿತಿ ರೂಪೀಕರಣ ಸಭೆ

              ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನಮ್ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ನಾಲ್ಕನೇ ಚಾತುರ್ಮಾಸ್ಯ ವ್ರತಾಚರಣೆ ಜುಲೈ 21ರಿಂದ ಸೆಪ್ಟಂಬರ್ 18ರ ತನಕ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಎಡನೀರು ಮಠದಲ್ಲಿ ಜರಗಲಿರುವುದು. ಒಟ್ಟು 62 ದಿನಗಳ ಕಾಲ ನಡೆಯುವ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ಭಾಗವತ ಸಪ್ತಾಹ, ದೇವಿ ಭಾಗವತ, ತಾಳಮದ್ದಳೆ ನವಾಹ, ಯಕ್ಷಗಾನ ಬಯಲಾಟ, ಸಂಗೀತ, ನೃತ್ಯ, ಗಾನವೈಭÀವ ಮೊದಲಾದ ಕಾರ್ಯಕ್ರಮಗಳೊಂದಗೆ ನಡೆಯಲಿರುವುದು.

             ಚಾತುರ್ಮಾಸ್ಯದ ಯಶಸ್ಸಿಗೆ ಸಮಿತಿ ರೂಪೀಕರಣ ಸಭೆ ಭಾನುವಾರ ಶ್ರೀಮಠದ ಭಾರತೀ ಸಭಾಂಗಣದಲ್ಲಿ ಜರಗಿತು. ಮಾರ್ಗದರ್ಶಕರಾಗಿ ಕೊಂಡೆವೂರು ಶ್ರೀಗಳು, ಗೌರವಾಧ್ಯಕ್ಷರಾಗಿ ಟಿ. ಶ್ಯಾಮ ಭಟ್, ಅಧ್ಯಕ್ಷರಾಗಿ ಬಲರಾಮ ಆಚಾರ್ಯ ಪುತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ಕೆಯ್ಯೂರು ನಾರಾಯಣ ಭಟ್, ಕೋಶಾಧಿಕಾರಿಯಾಗಿ ಹಿರಿಯ ವಕೀಲ ಎಂ.ನಾರಾಯಣ ಭಟ್, ಸ್ವಾಗತ ಸಮಿತಿಗೆ ಸುರೇಶ್ ನಾಯಕ್ ಪೂನಾ ಹಾಗೂ ಪ್ರಕಾಶ ಗಟ್ಟಿ ಅವರನ್ನೊಳಗೊಂಡ ಸಮಿತಿಯನ್ನು ರೂಪಿಸಲಾಯಿತು.

            ಸಮಿತಿ ರೂಪೀಕರಣ ಸಭೆಯಲ್ಲಿ ದಿವ್ಯಸಾನ್ನಿಧ್ಯವನ್ನು ವಹಿಸಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಿ, ಯಾವುದೇ ಮೇಲುಕೀಳೆಂಬ ಭಾವನೆಯಿಲ್ಲದೆ ಶ್ರೀಎಡನೀರು ಮಠವು ಧಾರ್ಮಿಕವಾಗಿಯೂ, ಸಾಮಾಜಿಕವಾಗಿಯೂ ಕಾರ್ಯೋನ್ಮುಖವಾಗಿದೆ. ಜನರ ಮನದಲ್ಲಿ ಧಾರ್ಮಿಕ ಚಿಂತನೆಯನ್ನು ಮೂಡಿಸುವಂತಹ ಚಾತುರ್ಮಾಸ್ಯ ವ್ರತಾಚರಣೆಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆಯಿತ್ತರು.

              ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನವನ್ನು ನೀಡಿ ಶ್ರೀಮಠದ ಗುರುಪರಂಪರಂಪರೆಗೆ ಶಿಷ್ಯಂದಿರು ಹಿಂದಿನಿಂದಲೇ ತಮ್ಮ ನಿಷ್ಠೆಯಿಂದ ಎಲ್ಲಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಯಶಸ್ಸಿಗಾಗಿ ದುಡಿಯುತ್ತಾರೆ. ಚಾತುರ್ಮಾಸ್ಯ ವ್ರತಾಚರಣೆಯ ಪವಿತ್ರವಾದ ದಿನಗಳಲ್ಲಿ ಪ್ರತಿಯೋರ್ವ ಶಿಷ್ಯಭಕ್ತನೂ ಪಾಲ್ಗೊಳ್ಳಬೇಕು ಎಂದರು.

              ಟಿ. ಶ್ಯಾಮ ಭಟ್, ಬಲರಾಮ ಆಚಾರ್ಯ ಪುತ್ತೂರು, ಡಾ. ಭಾಸ್ಕರ ಪುತ್ತೂರು, ಕೆಯ್ಯೂರು ನಾರಾಯಣ ಭಟ್, ರವೀಶ ತಂತ್ರಿ ಕುಂಟಾರು, ಎಂ. ನಾರಾಯಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ವಾನ್ ವೆಂಕಟೇಶ್ವರ ಭಟ್ ಹಿರಣ್ಯ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು. ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ವೇಣುಗೋಪಾಲ ಎಡನೀರು ವಂದಿಸಿದರು. ಸೂರ್ಯನಾರಾಯಣ ಭಟ್ ಎಡನೀರು ನಿರೂಪಿಸಿದರು. ಊರಪರವೂರ ಶ್ರೀಮಠದ ಶಿಷ್ಯಂದಿರು ಪಾಲ್ಗೊಂಡಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries