HEALTH TIPS

ದೇಶದ ಪ್ರಮುಖ ಜಲಾಶಯಗಳಲ್ಲಿ ನೀರು ಸಂಗ್ರಹ: ಶೇ 21ಕ್ಕೆ ಕುಸಿತ

          ವದೆಹಲಿ: ಉತ್ತರ ಭಾರತದ ರಾಜ್ಯಗಳಲ್ಲಿ ಬಿಸಿಲ ಆಘಾತ ಹಾಗೂ ದೇಶದೆಲ್ಲೆಡೆ ಮುಂಗಾರು ಮಳೆಯ ಕೊರತೆಯಿಂದಾಗಿ ದೇಶದ ಪ್ರಮುಖ ಜಲಾಶಯಗಳಲ್ಲಿ ಅವುಗಳ ಗರಿಷ್ಠ ಸಂಗ್ರಹಣ ಸಾಮರ್ಥ್ಯದ ಶೇ 21ರಷ್ಟು ಮಾತ್ರ ನೀರು ಲಭ್ಯ ಇದೆ.

            ದೇಶದ 150 ಪ್ರಮುಖ ಜಲಾಶಯಗಳ ನೀರಿನ ಸಂಗ್ರಹಣಾ ಸಾಮರ್ಥ್ಯದ ಮಾಹಿತಿಯನ್ನೊಳಗೊಂಡಿರುವ ವಾರದ ಬುಲೆಟಿನ್ ಅನ್ನು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಗುರುವಾರ ಬಿಡುಗಡೆ ಮಾಡಿದೆ.

           ಪ್ರಮುಖ 150 ಜಲಾಶಯಗಳ ಗರಿಷ್ಠ ಸಂಗ್ರಹ ಸಾಮರ್ಥ್ಯ 178.784 ಬಿಸಿಎಂ (ಶತಕೋಟಿ ಘನ ಮೀಟರ್‌ಗಳು). ಸದ್ಯ, ಒಟ್ಟು ಸಾಮರ್ಥ್ಯದ ಶೇ 21ರಷ್ಟು ಅಂದರೆ, 37.662 ಬಿಸಿಎಂನಷ್ಟು ನೀರು ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಜಲಾಶಯಗಳಲ್ಲಿ 46.883 ಬಿಸಿಎಂನಷ್ಟು ನೀರು ಸಂಗ್ರಹ ಇತ್ತು. ಈ ವರ್ಷ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಜಲ ಆಯೋಗ ಹೇಳಿದೆ.

              ಪ್ರಸ್ತುತ ಸಂಗ್ರಹವು 10 ವರ್ಷಗಳ ಸರಾಸರಿ (ಸಾಮಾನ್ಯ) 41.446 ಬಿಸಿಎಂಗಿಂತ ಕಡಿಮೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಜಲಾಶಯಗಳಲ್ಲಿ ಒಟ್ಟು ಸಾಮರ್ಥ್ಯದ ಶೇ 22ರಷ್ಟು ನೀರಿತ್ತು. ಅದಕ್ಕಿಂತ ಹಿಂದಿನ ವಾರ ಶೇ 23ರಷ್ಟಿತ್ತು.

               ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಲ್ಲಿನ 42 ಪ್ರಮುಖ ಜಲಾಶಯಗಳಲ್ಲಿ ಗರಿಷ್ಠ ನೀರಿನ ಸಂಗ್ರಹಣಾ ಸಾಮರ್ಥ್ಯ 53.334 ಬಿಸಿಎಂನಷ್ಟಾಗಿದೆ. ಇವುಗಳಲ್ಲಿ ಪ್ರಸ್ತುತ 8.508 ಬಿಸಿಎಂನಷ್ಟು (ಶೇ 16) ಮಾತ್ರ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 21ರಷ್ಟು ನೀರಿನ ಸಂಗ್ರಹ ಇತ್ತು ಎಂದು ಆಯೋಗದ ಅಂಕಿ ಅಂಶಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries