ಕಾಸರಗೋಡು: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಜೂನ್ 21ರ ವರೆಗೆ ಅವಕಾಶ ಕಲ್ಪಿಸಲಾಗಿದೆ. 2024 ಜನವರಿ ಒಂದು ಅಥವಾ ಮೊದಲ 18 ವರ್ಷ ಪೂರ್ತಿಯಾದವರಿಗೆ ಹೆಸರು ನೋಂದಾಯಿಸಬಹುದು. ಉಪಚುನಾವಣೆ ನಡೆಯಲಿರುವ 50 ವಾರ್ಡುಗಳ ಸಹಿತ ರಾಜ್ಯದ ಎಲ್ಲಾ ಸ್ಥಳೀಯ ಆಡಳಿತ ಸಂಸ್ಥೆಗಳ ಮತದಾರರ ಪಟ್ಟಿಯನ್ನು ನವೀಕರಿಸಲಾಗುವುದು.
ಉಪಚುನಾವಣೆ ನಡೆಯುವ ವಾರ್ಡುಗಳ ಪ್ರವಾಸಿ ಭಾರತೀಯರ ಮತದಾರರ ಪಟ್ಟಿಯನ್ನು ತಯಾರಿಸಲಾಗುತ್ತದೆ. ಅಂತಿಮ ಪಟ್ಟಿಯನ್ನು ಜುಲೈ 1 ರಂದು ಪ್ರಕಟಿಸಲಾಗುವುದು. ಸ್ವಯಂ ಆಡಳಿತ ಸಂಸ್ಥೆಗಳ ಮತದಾರರ ಪಟ್ಟಿಯ ಕರಡು ಪ್ರತಿ seಛಿ.ಞeಡಿಚಿಟಚಿ.gov.iಟಿ ಎಂಬ ಅಂತರ್ಜಾಲ ವಿಳಾಸದಲ್ಲಿಯೂ ಆಯಾ ಸ್ಥಳಿಯಾಡಳಿತ ಸಂಸ್ಥೆಗಳಲ್ಲಿ, ಗ್ರಾಮ ಕಛೇರಿಗಳಲ್ಲಿ ಮತ್ತು ತಾಲೂಕು ಕಛೇರಿಗಳಲ್ಲಿಯೂ ಪರಿಶೀಲನೆಗೆ ಲಭ್ಯವಿರಲಿದೆ.
ಹೊಸದಾಗಿ ಹೆಸರು ಸೇರ್ಪಡೆಗೆ (ಫಾರ್ಮ್ 4), ನಮೂದುಗಳ ತಿದ್ದುಪಡಿ (ಫಾರ್ಮ್ 6) ಮತ್ತು ಸ್ಥಾನ ಬದಲಾವಣೆ (ಫಾರ್ಮ್ 7) ಗಾಗಿ ಆನ್‍ಲೈನ್‍ನಲ್ಲಿ seಛಿ.ಞeಡಿಚಿಟಚಿ.gov.iಟಿ ನಲ್ಲಿ ಅರ್ಜಿ ಸಲ್ಲಿಸಬೇಕು. ನಾಗರಿಕರು ಅರ್ಜಿದಾರರ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿಯನ್ನು ನೋಂದಾಯಿಸಬೇಕು ಮತ್ತು ಸಲ್ಲಿಸಬೇಕು. ಜಿಲ್ಲೆ, ಸ್ಥಳೀಯ ಸಂಸ್ಥೆ, ವಾರ್ಡ್, ಮತದಾನ ಕೇಂದ್ರ, ಮತದಾರರ ಹೆಸರು ಮತ್ತು ಇತರ ವಿವರಗಳನ್ನು ನಮೂದಿಸಬೇಕು. ಅರ್ಜಿಯೊಂದಿಗೆ ಭಾವಚಿತ್ರವನ್ನು ಅಪ್‍ಲೋಡ್ ಮಾಡಲು ಸಾಧ್ಯವಾಗದವರು ನೇರವಾಗಿ ವಿಚಾರಣೆಯ ಸಮಯದಲ್ಲಿ ಸಲ್ಲಿಸಬಹುದಾಗಿದೆ.