ಬದಿಯಡ್ಕ: ಸಾಂದೀಪನಿ ಯೋಗಕೇಂದ್ರ ಬದಿಯಡ್ಕ ಇವರ ನೇತೃತ್ವದಲ್ಲಿ ಜೂನ್.21 ರಂದು ವಿಶ್ವಯೋಗದಿನದ ಪ್ರಯುಕ್ತ ಕಾಸರಗೋಡು ತಾಲೂಕಿನಲ್ಲಿರುವ ಶಾಲೆಗಳನ್ನು ಕೇಂದ್ರೀಕರಿಸಿ ನೀರ್ಚಾಲು ಮಹಾಜನ ವಿದ್ಯಾಲಯದಲ್ಲಿ ವಿಶ್ವಯೋಗಾನುಷ್ಠಾನ ನಡೆಯಲಿದೆ.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಅನುಗ್ರಹದಿಂದ ಯೋಗಪಟುಗಳ ಯೋಗಪ್ರಾತ್ಯಕ್ಷಿಕೆ, ಸಾಮೂಹಿಕ ಸೂರ್ಯನಮಸ್ಕಾರ, ಪ್ರಾಣಾಯಾಮದೊಂದಿಗೆ ಸÀರ್ಕಾರಿ ಅಧಿಕಾರಿಗಳು ರಾಜಕೀಯ ಮುಖಂಡರು, ವಿವಿಧ ಸಂಘಸಂಸ್ಥೆಗಳು, ಶಾಲೆಯ ಮಕ್ಕಳು, ಹೆತ್ತವರು, ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ತಿಳಿಸಿದ್ದಾರೆ.