ಚೆನ್ನೈ: ಪಶ್ಚಿಮ ಆಫ್ರಿಕಾದ ಘಾನಾದಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರೊಬ್ಬರಿಂದ ಸುಮಾರು ₹21 ಕೋಟಿ ಮೌಲ್ಯದ 2 ಕೆ.ಜಿಗೂ ಹೆಚ್ಚು ಪ್ರಮಾಣದ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ ಇಲಾಖೆ ತಿಳಿಸಿದೆ.

ಜೂನ್ 26ರಂದು ಪಶ್ಚಿಮ ಆಫ್ರಿಕಾ ದೇಶದಿಂದ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯನ್ನು ಗುಪ್ತಚರ ಅಧಿಕಾರಿಗಳು ತಡೆದು ವಿಚಾರಣೆ ನಡೆಸಿದರು.
ಬಂಧಿತ ಮಹಿಳೆಯಿಂದ 2095 ಗ್ರಾಮ್ ಕೊಕೇನ್ ವಶಪಡಿಸಿಕೊಳ್ಳಲಾಗಿದ್ದು, ಸದ್ಯ ಪುಝಲ್ ಕೇಂದ್ರ ಕಾರಾಗೃಹದಲ್ಲಿ ಆಕೆಯನ್ನು ಇರಿಸಲಾಗಿದೆ.