ಲಾಹೋರ್: ಐಸಿಸ್, ಟಿಟಿಪಿ ಮತ್ತು ಇತರ ನಿಷೇಧಿತ ಸಂಘಟನೆಗಳ 22 ಮಂದಿ ಶಂಕಿತ ಭಯೋತ್ಪಾದಕರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಈ ವಾರ ಪಂಜಾಬ್‌ನ ವಿವಿಧ ಜಿಲ್ಲೆಗಳಲ್ಲಿ ಗುಪ್ತಚರ ಮಾಹಿತಿ ಆಧರಿಸಿ 152 ಕಾರ್ಯಾಚರಣೆ ನಡೆಸಲಾಗಿದೆ.
ಲಾಹೋರ್, ಅಟ್ಟೊಕ್, ಶೇಖುಪುರ, ಮುಜಾಫರ್‌ಗಢ, ನಂಕಾನಾ ಸಾಹಿಬ್, ಬಹವಲ್ಪುರ್, ಡಿಜಿ ಖಾನ್, ಫೈಸಲಾಬಾದ್, ಮುಲ್ತಾನ್, ಬಹವಲ್‌ನಗರ ಮತ್ತು ರಾವಲ್ಪಿಂಡಿಯಲ್ಲಿ ಈ ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಬಂಧಿತರಿಂದ 1,645 ಗ್ರಾಂ ತೂಕದ ಸ್ಫೋಟಕಗಳು, 3 ಹ್ಯಾಂಡ್ ಗ್ರೆನೇಡ್‌ಗಳು, ಒಂದು ಐಇಡಿ ಬಾಂಬ್, 12 ಡಿಟೋನೇಟರ್‌ಗಳು, ಒಂದು ಪಿಸ್ತೂಲ್ ಹಾಗೂ ನಿಷೇಧಿತ ಪುಸ್ತಕವನ್ನು ವಶಪಡಿಸಿಕೊಳ್ಳಲಾಗಿದೆ. ಪಂಜಾಬ್‌ನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯೋಜಿಸಿದ್ದರು. ಪ್ರಮುಖ ಕಟ್ಟಡ ಮತ್ತು ವ್ಯಕ್ತಿಗಳೇ ಇವರ ಗುರಿ ಎಂದು ವಕ್ತಾರರು ತಿಳಿಸಿದ್ದಾರೆ.
ಇವರ ವಿರುದ್ಧ ಪೊಲೀಸರು 19 ಪ್ರಕರಣಗಳನ್ನು ದಾಖಲಿಸಿದ್ದಾರೆ. ವಿಚಾರಣೆಗಾಗಿ ಅವರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.