HEALTH TIPS

'ಅವರ ಅಹಂಕಾರ ನೋಡಿ ಶ್ರೀರಾಮ 241ಸ್ಥಾನಕ್ಕೆ ನಿಲ್ಲಿಸಿದ್ದಾನೆ': ಬಿಜೆಪಿ ವಿರುದ್ಧ ಕಿಡಿಕಾರಿದ ಆರ್​ಎಸ್​ಎಸ್​ ಮುಖಂಡ!

 ವದೆಹಲಿ: ಇತ್ತೀಚೆಗಷ್ಟೇ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು, ನಿಜವಾದ ಕಾರ್ಯಕರ್ತರು ಎಂದೂ ಅಹಂಕಾರಿ ಆಗಿರುವುದಿಲ್ಲ. ಚುನಾವಣೆ ಪ್ರಚಾರದಲ್ಲಿ ಶಿಸ್ತು ಕಾಪಾಡಲಿಲ್ಲ. ಚುನಾವಣೆಯನ್ನು ಯುದ್ಧದ ರೀತಿಯಲ್ಲಿ ನೋಡಬಾರದು ಎಂದು ಬಿಜೆಪಿಗೆ ತಿವಿದಿದ್ದರು. ಇದೀಗ ಮತ್ತೋರ್ವ ಆರ್​ಎಸ್​ಎಸ್​ ನಾಯಕ ಇಂದ್ರೇಶ್ ಕುಮಾರ್, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ 400ರ ಗಡಿ ದಾಟುತ್ತೇವೆ ಎಂದು ಚುನಾವಣಾ ಪ್ರಚಾರದಲ್ಲಿ ಹೇಳಿಕೊಂಡಿದ್ದ ಬಿಜೆಪಿ ಕನಿಷ್ಠ ಬಹುಮತವನ್ನೂ ಪಡೆಯದೆ ಕೇವಲ 241 ಸ್ಥಾನ ಗಳಿಸಿ ನೀರಸ ಪ್ರದರ್ಶನ ತೋರಿತ್ತು. ಆದರೆ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಎನ್‌ಡಿಎ ನೇತೃತ್ವದ ಸರ್ಕಾರವನ್ನು ರಚಿಸಿತು. ಇದರ ಬೆನ್ನಲ್ಲೇ ಆರೆಸ್ಸೆಸ್ ಮುಖಂಡರು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ರಾಜಾಸ್ತಾನದ ಜೈಪುರ ಸಮೀಪದ ಕನೋಟಾದಲ್ಲಿ ಆಯೋಜಿಸಿದ್ದ ರಾಮರಥ ಅಯೋಧ್ಯೆ ಯಾತ್ರೆ ದರ್ಶನ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ಯಾರ ಹೆಸರನ್ನೂ ಹೇಳದೆ, ಚುನಾವಣಾ ಫಲಿತಾಂಶಗಳು ಬಿಜೆಪಿಯವರ ಮನೋಭಾವವನ್ನು ಬಿಂಬಿಸುತ್ತವೆ. ಅವರು ಅಹಂಕಾರಿಯಾಗಿಬಿಟ್ಟಿದ್ದರು. ಬಿಜೆಪಿ ಮೊದಲು ಭಕ್ತಿ ತೋರಿ ನಂತರ ದುರಹಂಕಾರಿಯಾಯಿತು. ಇದಕ್ಕಾಗಿಯೇ ಭಗವಂತ ರಾಮ ಅವರನ್ನು 241 ರಲ್ಲಿ ನಿಲ್ಲಿಸಿದರು. ಆದರೆ ಅವರನ್ನು ದೊಡ್ಡ ಪಕ್ಷವನ್ನಾಗಿ ಮಾಡಿದರು. ಒಂದೆಡೆ ಶ್ರೀರಾಮನಲ್ಲಿ ನಂಬಿಕೆಯಿಲ್ಲದ 'ಇಂಡಿಯಾ ಮೈತ್ರಿಕೂಟ'ದವರನ್ನು 234ಕ್ಕೆ ನಿಲ್ಲಿಸಲಾಯಿತು ಎಂದು ಅವರು ಹೇಳಿದರು.

ಸಂವಿಧಾನವನ್ನು ನೋಡಿ, ಅವರು ರಾಮನನ್ನು ಪೂಜಿಸಿದರು, ಆದರೆ ಕ್ರಮೇಣ ಅಹಂಕಾರಕ್ಕೆ ಬಂದರು. ಅತಿ ದೊಡ್ಡ ಪಕ್ಷವಾಯಿತು, ಆದರೆ ಸಿಗಬೇಕಾಗಿದ್ದ ಮತಗಳು ಅಹಂಕಾರದಿಂದ ಶ್ರೀರಾಮನಿಂದ ನಿಲ್ಲಿಸಲ್ಪಟ್ಟವು. ರಾಮನನ್ನು ವಿರೋಧಿಸಿದವರಿಗೆ ಅಧಿಕಾರ ಸಿಗುವುದಿಲ್ಲ ಎಂದೂ ಹೇಳಿದರು.

ದೇವರ ನ್ಯಾಯ ಸತ್ಯದ ಕಡೆ ಇರುತ್ತಾನೆ. ಆತನನ್ನು ಪೂಜಿಸುವವರು ವಿನಮ್ರರಾಗಿರಬೇಕು. ವಿರೋಧಿಸುವವರಿಗೆ ದೇವರೇ ವ್ಯವಹರಿಸುತ್ತಾನೆ. ಭಗವಾನ್ ರಾಮನು ತಾರತಮ್ಯ ಮಾಡುವುದಿಲ್ಲ ಅಥವಾ ಶಿಕ್ಷಿಸುವುದಿಲ್ಲ. ರಾಮನು ಯಾರನ್ನೂ ದುಃಖಿಸುವುದಿಲ್ಲ. ರಾಮ ಎಲ್ಲರಿಗೂ ನ್ಯಾಯ ಕೊಡುತ್ತಾನೆ ಮತ್ತು ಕೊಡುತ್ತಲೇ ಇರುತ್ತಾನೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries