HEALTH TIPS

ಫಾಕ್ಸ್​ಕಾನ್​ನಲ್ಲಿ ವಿವಾಹಿತೆಯರ ಸಂಖ್ಯೆ ಶೇ. 25

              ನವದೆಹಲಿ: ಆಪಲ್ ಐಫೋನ್ ತಯಾರಕ ಫಾಕ್ಸ್​ಕಾನ್ ಕಾರ್ಖಾನೆಯಲ್ಲಿ ವಿವಾಹಿತ ಮಹಿಳೆಯರಿಗೆ ಕೆಲಸ ನೀಡುತ್ತಿಲ್ಲ ಎಂಬ ಮಾಧ್ಯಮ ವರದಿಗಳನ್ನು ಕಂಪನಿ ತಳ್ಳಿಹಾಕಿದೆ. ಒಟ್ಟು ಕಾರ್ವಿುಕರ ಪೈಕಿ ಶೇ.70ರಷ್ಟು ಮಹಿಳೆಯರೇ ಇದ್ದಾರೆ. ಅವರಲ್ಲಿ ಶೇ. 25ರಷ್ಟು ವಿವಾಹಿತ ಮಹಿಳೆಯರಿದ್ದಾರೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ವಿವಾಹಿತ ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿ ಸತ್ಯವಲ್ಲ. ಈ ಕಾರ್ಖಾನೆಯಲ್ಲಿ ಕೆಲಸ ಸಿಗದ ಕೆಲವು ಅತೃಪ್ತರು ಈ ರೀತಿ ವದಂತಿ ಹಬ್ಬಿಸಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಭಾರತೀಯ ಉತ್ಪಾದನಾ ವಲಯವನ್ನು ಇಂತಹ ವರದಿಗಳು ಹಾಳು ಮಾಡುತ್ತವೆ ಎಂದು ಸರ್ಕಾರಕ್ಕೆ ಗುರುವಾರ ಕಳಿಸಿರುವ ಔಪಚಾರಿಕ ಟಿಪ್ಪಣಿಯಲ್ಲಿ ಕಂಪನಿ ಸ್ಪಷ್ಟಪಡಿಸಿದೆ.

             ಅದಲ್ಲದೇ ಮೈಮೇಲೆ ಲೋಹದ ವಸ್ತು (ಆಭರಣ) ಧರಿಸಿರುವ ಹಿಂದು ವಿವಾಹಿತ ಮಹಿಳೆಯರಿಗೆ ಕಾರ್ಖಾನೆಯಲ್ಲಿ ಕೆಲಸ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಕಾರ್ವಿುಕರು ಲೋಹದ ವಸ್ತು ತೆಗೆದಿಡಬೇಕು ಎಂಬುದು ಸುರಕ್ಷತೆಗಾಗಿ ಇರುವ ನಿಯಮ. ಇದು ಇಂತಹ ಎಲ್ಲ ಕಾರ್ಖಾನೆಗಳಲ್ಲಿಯೂ ಇದೆ. ಸರ್ಕಾರಕ್ಕೆ ಮತ್ತು ಉದ್ಯಮ ವಲಯಕ್ಕೆ ಇದು ಗೊತ್ತಿದೆ. ಈ ನಿಯಮವು ಪುರುಷ- ಮಹಿಳೆಯರಿಬ್ಬರಿಗೂ ಅನ್ವಯವಾಗುತ್ತದೆ. ಹಿಂದು, ಕ್ರೖೆಸ್ತ, ಮುಸ್ಲಿಂ ಸೇರಿದಂತೆ ಎಲ್ಲ ಧರ್ವಿುೕಯರಿಗೂ ಅನ್ವಯವಾಗುತ್ತದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

         ಈ ಮಧ್ಯೆ, ತಮಿಳುನಾಡು ಸರ್ಕಾರಕ್ಕೆ ಬುಧವಾರ ಪತ್ರ ಬರೆದಿರುವ ಕೇಂದ್ರ ಕಾರ್ವಿುಕ ಸಚಿವಾಲಯ, ಫಾಕ್ಸ್​ಕಾನ್​ನಲ್ಲಿ ಜಾರಿಯಲ್ಲಿವೆ ಎಂದು ಹೇಳಲಾದ ವಿವಾದಾತ್ಮಕ ನಿಯಮಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದೆ.

ಸೆಬಿಗೆ 25 ಲಕ್ಷ ರೂ. ತೆತ್ತ ಇನ್ಪಿ ಸಿಇಒ

            ಇನ್ಪೋಸಿಸ್ ಎಂಡಿ ಮತ್ತು ಸಿಇಒ ಸಲೀಲ್ ಪಾರೇಖ್ 25 ಲಕ್ಷ ರೂ. ಪಾವತಿಸುವ ಮೂಲಕ ಇನ್ಸೈಡರ್ ಟ್ರೇಡಿಂಗ್ ನಿಯಮ ಉಲ್ಲಂಘನೆ ಪ್ರಕರಣವನ್ನು ಮಾರುಕಟ್ಟೆ ನಿಯಂತ್ರಕ ಸೆಬಿಯೊಂದಿಗೆ ಇತ್ಯರ್ಥಪಡಿಸಿಕೊಂಡಿದ್ದಾರೆ.

         ಒಳಗಿನವರು ವ್ಯಾಪಾರ ಮಾಡುವುದನ್ನು (ಇನ್ಸೈಡರ್ ಟ್ರೇಡಿಂಗ್) ತಡೆಗಟ್ಟುವುದಕ್ಕೆ ಆಂತರಿಕ ವ್ಯವಸ್ಥೆ ರೂಪಿಸುವಲ್ಲಿ ಪಾರೇಖ್ ವಿಫಲರಾಗಿದ್ದಾರೆ ಎಂಬುದು ಸೆಕ್ಯುರಿಟೀಸ್ ಮತ್ತು ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ತನಿಖೆಯ ನಂತರ ದೃಢಪಟ್ಟಿತ್ತು. ಕಂಪನಿಯ ಬಗ್ಗೆ ಗೌಪ್ಯ ಮಾಹಿತಿ ಪಡೆದುಕೊಳ್ಳಲು ಸಾಧ್ಯವಿರುವ ವ್ಯಕ್ತಿಗಳು ಕಂಪನಿಯ ಷೇರುಗಳ ವ್ಯವಹಾರದಲ್ಲಿ ತೊಡಗಿಕೊಳ್ಳುವುದೇ ಇನ್ಸೈಡರ್ ಟ್ರೇಡಿಂಗ್. 2020ರ ಈ ಪ್ರಕರಣವು ಇನ್ಪೋಸಿಸ್ ಮತ್ತು ಅಮೆರಿಕ ಮೂಲದ ಆಸ್ತಿ ನಿರ್ವಾಹಕ ವ್ಯಾನ್​ಗಾರ್ಡ್ ನಡುವಿನ ಪಾಲುದಾರಿಕೆಗೆ ಸಂಬಂಧಿಸಿದೆ.

               ಗುರುವಾರ ಬಿಎಸ್​ಇ ಸೆನ್ಸೆಕ್ಸ್ 79,000 ಅಂಕಗಳ ಗಡಿ ದಾಟಿದರೆ, ನಿಫ್ಟಿ ಮೊದಲ ಬಾರಿಗೆ 24,000 ಗರಿಷ್ಠ ಮಟ್ಟ ತಲುಪುವ ಮೂಲಕ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ದಾಖಲೆಗಳು ಸೃಷ್ಟಿಯಾದವು. ಬಿಎಸ್​ಇ 568.93 ಅಂಕ ಜಿಗಿದು 79,243.18ರ ಹೊಸ ಮುಕ್ತಾಯದ ಗರಿಷ್ಠ ಮಟ್ಟ ತಲುಪಿತು. ದಿನದ ವಹಿವಾಟಿನಲ್ಲಿ ಇದು 721.78 ಅಂಕ ಏರಿಕೆಯಾಗಿ ಹೊಸ ಜೀವಿತಾವಧಿ ಗರಿಷ್ಠ ಮಟ್ಟ 79,396.03 ಅಂಕ ತಲುಪಿತ್ತು. ನಿಫ್ಟಿ 175.70 ಅಂಕ ಏರಿಕೆಯಾಗಿ 24,044.50ರ ಹೊಸ ಗರಿಷ್ಠ ಮಟ್ಟ ಮುಟ್ಟಿತು. ಇಂಟ್ರಾ-ಡೇ ವಹಿವಾಟಿನಲ್ಲಿ, ಇದು 218.65 ಅಂಕ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 24,087.45 ಅಂಕ ತಲುಪಿತು.

           ಪ್ರಮುಖ ಷೇರುಗಳ ಪೈಕಿ, ಅಲ್ಟ್ರಾಟೆಕ್ ಸಿಮೆಂಟ್ ಶೇ. 5ರಷ್ಟು ಏರಿಕೆ ಕಂಡಿತು. ತನ್ನ ಪ್ರತಿಸ್ಪರ್ಧಿ ಇಂಡಿಯಾ ಸಿಮೆಂಟ್ಸ್​ನಲ್ಲಿ ಶೇ. 23 ಪಾಲನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಅದು ಹೇಳಿದ ಹಿನ್ನೆಲೆಯಲ್ಲಿ ಈ ಏರಿಕೆ ಕಂಡುಬಂತು. ಇನ್ಪೋಸಿಸ್, ಟಿಸಿಎಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಬೆಲೆಗಳು ಏರಿಕೆ ದಾಖಲಿಸಿದವು. ಎನ್​ಟಿಪಿಸಿ, ಜೆಎಸ್​ಡಬ್ಲೂಯ ಸ್ಟೀಲ್, ಟಾಟಾ ಮೋಟಾರ್ಸ್, ಭಾರ್ತಿ ಏರ್​ಟೆಲ್, ಪವರ್ ಗ್ರಿಡ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಟೆಕ್ ಮಹೀಂದ್ರಾ ಷೇರುಗಳು ಕೂಡ ಲಾಭ ಗಳಿಸಿದವು. ಲಾರ್ಸನ್ ಆಂಡ್ ಟೂಬ್ರೊ, ಸನ್ ಫಾರ್ವ, ನೆಸ್ಲೆ, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಮಾರುತಿ ಷೇರುಗಳು ನಷ್ಟ ಕಂಡವು.

ಗ್ರಾಹಕ ವಸ್ತುಗಳ ವಿಡಿಯೋ ಜನಪ್ರಿಯ

             ವಿವಿಧ ಗ್ರಾಹಕ ವಸ್ತುಗಳ ಜಾಹೀರಾತಿನ ವಿಡಿಯೋ ನೋಡಿ ನಂತರ ಖರೀದಿಸುವುದಕ್ಕೆ ಮುಂದಾಗುವ ಪರಿಪಾಠ ಭಾರತೀಯರಲ್ಲಿ ಹೆಚ್ಚಾಗುತ್ತಿದೆ ಎಂದು ಫ್ಲಿಪ್​ಕಾರ್ಟ್ ಇ-ಕಾಮರ್ಸ್ ವೇದಿಕೆ ಗುರುವಾರ ತಿಳಿಸಿದೆ. 2023ರ ಜೂನ್​ನಿಂದ 2024ರ ಮೇ ತಿಂಗಳವರೆಗಿನ ಒಂದು ವರ್ಷದ ಅವಧಿಯಲ್ಲಿ ಭಾರತದ ಗ್ರಾಹಕರು ಇಂತಹ ವಿಡಿಯೋಗಳನ್ನು ನೋಡಲು 20 ಲಕ್ಷಕ್ಕೂ ಹೆಚ್ಚು ತಾಸುಗಳನ್ನು ವ್ಯಯಿಸಿದ್ದಾರೆ. ಅಧಿಕ ಇಂಟರ್​ನೆಟ್ ಡೇಟಾ ಬಳಸುವ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ. ಭಾರತೀಯ ಗ್ರಾಹಕರು ಹೆಚ್ಚು ಡಿಜಿಟಲ್ ತಂತ್ರಜ್ಞಾನ ಬಳಸುತ್ತಾರೆ ಎಂದು ಕಂಪನಿ ಹೇಳಿದೆ.

ವಾಣಿಜ್ಯ ವಿಡಿಯೋ ನೋಡುಗರ ಪೈಕಿ ಶೇ. 65ರಷ್ಟು ಜನ 2 ಮತ್ತು 3ನೇ ಸ್ತರದ ಪ್ರದೇಶಗಳಿಗೆ ಸೇರಿದವರು. ಫ್ಯಾಷನ್, ಬ್ಯೂಟಿ, ಪರ್ಸನಲ್ ಕೇರ್, ಮನೆ ಅಲಂಕಾರ, ಪೀಠೋಪಕರಣ ಮುಂತಾದವುಗಳ ಬಗ್ಗೆ ಅವರಿಗೆ ಹೆಚ್ಚು ಒಲವಿದೆ. ಈ ವಿಷಯದಲ್ಲಿ ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತಾ ಟಾಪ್ 5 ಸ್ಥಾನದಲ್ಲಿವೆ ಎಂದು ಫ್ಲಿಪ್​ಕಾರ್ಟ್ ಹೇಳಿದೆ.


ಇಂಡಿಯಾ ಸಿಮೆಂಟ್ಸ್ ಪಾಲು ಖರೀದಿಸಿದ ಅಲ್ಟ್ರಾಟೆಕ್

             ನವದೆಹಲಿ: ದೇಶದ ಪ್ರಮುಖ ಸಿಮೆಂಟ್ ತಯಾರಕ ಕಂಪನಿಯಾದ ಅಲ್ಟ್ರಾಟೆಕ್ ಗುರುವಾರ ತನ್ನ ಚೆನ್ನೈ ಮೂಲದ ಪ್ರತಿಸ್ಪರ್ಧಿ ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್​ನಲ್ಲಿ ಅಂದಾಜು 1,885 ಕೋಟಿ ರೂ.ಗಳ ಒಪ್ಪಂದದ ಮೂಲಕ ಶೇ. 23ರಷ್ಟು ಪಾಲನ್ನು ಪಡೆದುಕೊಳ್ಳುವುದಾಗಿ ಹೇಳಿದೆ. ಅಲ್ಟ್ರಾಟೆಕ್ 7.06 ಕೋಟಿ ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ 267 ರೂ. ಬೆಲೆಗೆ ಸ್ವಾಧೀನಪಡಿಸಿಕೊಳ್ಳಲಿದೆ. ಇದಕ್ಕೆ ಗುರುವಾರ ನಡೆದ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಆದಿತ್ಯ ಬಿರ್ಲಾ ಗ್ರೂಪ್ ತಿಳಿಸಿದೆ. ವಾರ್ಷಿಕ 15.27 ಕೋಟಿ ಟನ್ ಬೂದು ಸಿಮೆಂಟ್​ನ ಸ್ಥಾಪಿತ ಸಾಮರ್ಥ್ಯವಿರುವ ಅಲ್ಟ್ರಾಟೆಕ್ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಉದ್ದೇಶಿಸಿದೆ. ಏ. 20ರಂದು ಮಹಾರಾಷ್ಟ್ರದ ಇಂಡಿಯಾ ಸಿಮೆಂಟ್ಸ್​ನಿಂದ 315 ಕೋಟಿ ರೂ. ಮೊತ್ತಕ್ಕೆ ಗ್ರೖೆಂಡಿಂಗ್ ಘಟಕವನ್ನು ಸ್ವಾಧೀನ ಪಡಿಸಿಕೊಳ್ಳುವುದಾಗಿ ಘೊಷಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries