ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ತೆರವಾಗಿರುವ ಸೀಟುಗಳಿಗೆ ಸ್ಪಾಟ್ ಅಡ್ಮಿಷನ್ ನಡೆಯಲಿದೆ. ಹಿಂದಿ, ಗಣಿತ ವಿಭಾಗಕ್ಕೆ ಜೂನ್ 26, ಮಲಯಾಳ ವಿಭಾಗಕ್ಕೆ ಜೂನ್ 27, ಯೋಗ, ಶಿಕ್ಷಣಕ್ಕೆ ಜೂನ್ 26, 27, ಕನ್ನಡ ವಿಭಾಗಕ್ಕೆ ಜೂನ್ 29ರಂದು ಸ್ಪಾಟ್ ಅಡ್ಮಿಷನ್ ನಡೆಸಲಾಗುವುದು. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ವಿಭಾಗಗಳಿಗೆ ಬೆಳಿಗ್ಗೆ 10ಕ್ಕೆ ತಲುಪಬೇಕು. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್‍ಸೈಟ್ www.cukerala.ac.in ಗೆ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.