ದುಬೈ: ಗಾಜಾದ ಕೇಂದ್ರ ಭಾಗದಲ್ಲಿರುವ ಅಲ್-ನುಸೇರಿಯಾತ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಶನಿವಾರ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 274 ಮಂದಿ ಮೃತಪಟ್ಟಿದ್ದಾರೆ.
ದುಬೈ: ಗಾಜಾದ ಕೇಂದ್ರ ಭಾಗದಲ್ಲಿರುವ ಅಲ್-ನುಸೇರಿಯಾತ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಶನಿವಾರ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 274 ಮಂದಿ ಮೃತಪಟ್ಟಿದ್ದಾರೆ.
ಈ ಕುರಿತು ಭಾನುವಾರ ಮಾಹಿತಿ ನೀಡಿರುವ ಗಾಜಾದ ಆರೋಗ್ಯ ಇಲಾಖೆ, 698 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.
ಗಾಜಾದ ಮೇಲೆ 2023ರ ಅಕ್ಟೋಬರ್ 7ರಿಂದ ಇದುವರೆಗೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 37,084 ಪ್ಯಾಲೆಸ್ಟೀನಿಯರು ಮೃತಪಟ್ಟು, 84,494 ಮಂದಿ ಗಾಯಗೊಂಡಿದ್ದಾರೆ ಎಂದೂ ಹೇಳಿದೆ.
ಯುದ್ಧದಿಂದಾಗಿ ನೆಲೆ ಕಳೆದುಕೊಂಡಿರುವವರಿಗಾಗಿ ವಿಶ್ವಸಂಸ್ಥೆಯು ಗಾಜಾದ ನುಸೀರತ್‌ನಲ್ಲಿ ತೆರೆದಿರುವ ಶಾಲೆಯನ್ನು ಗುರಿಯಾಗಿಸಿ ಇಸ್ರೇಲ್ ಬುಧವಾರ (ಜೂನ್ 5) ವಾಯುದಾಳಿ ನಡೆಸಿತ್ತು. ದಾಳಿಯಲ್ಲಿ 33 ಮಂದಿ ಮೃತಪಟ್ಟಿದ್ದರು.
ದಾಳಿಯನ್ನು ಸಮರ್ಥಿಸಿಕೊಂಡಿದ್ದ ಇಸ್ರೇಲ್, 'ಮೃತರೆಲ್ಲ ಹಮಾಸ್ ಉಗ್ರರು' ಎಂದಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದಾಗಿ ನೆಲೆ ಕಳೆದುಕೊಂಡಿರುವವರಿಗೆ ಶಾಲಾ ಆವರಣದಲ್ಲಿ ಆಶ್ರಯ ನೀಡಲಾಗಿತ್ತು ಎಂದು ಗಾಜಾ ಹೇಳಿತ್ತು.