ಮುಂಬೈ: ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಕಂಪನಿಗಳು ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿವೆ. ಈ ಷೇರುಗಳಲ್ಲಿ ಒಂದು ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ (Mazagon Dock Shipbuilders). ಆದರೆ, ಈಗ ಈ ಷೇರುಗಳಲ್ಲಿ ಭಾರಿ ಮಾರಾಟ ಕಂಡುಬರುವ ಸಾಧ್ಯತೆ ಇದೆ.
ಮುಂಬೈ: ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಕಂಪನಿಗಳು ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿವೆ. ಈ ಷೇರುಗಳಲ್ಲಿ ಒಂದು ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ (Mazagon Dock Shipbuilders). ಆದರೆ, ಈಗ ಈ ಷೇರುಗಳಲ್ಲಿ ಭಾರಿ ಮಾರಾಟ ಕಂಡುಬರುವ ಸಾಧ್ಯತೆ ಇದೆ.
ಬ್ರೋಕರೇಜ್ ಷೇರಿನ ಗುರಿ ಬೆಲೆಯನ್ನು ರೂ. 900 ನಿಗದಿಪಡಿಸಿದೆ. ಈ ಬೆಲೆ ಷೇರಿನ ಪ್ರಸ್ತುತ ಬೆಲೆಗಿಂತ ಅಂದಾಜು 75 ಪ್ರತಿಶತದಷ್ಟು ಭಾರಿ ಕುಸಿತವನ್ನು ಸೂಚಿಸುತ್ತದೆ. ಬುಧವಾರ ಈ ಷೇರಿನ ಬೆಲೆ 2900 ರೂ. ಆಗಿದೆ. ಬುಧವಾರದ ವಹಿವಾಟಿನ ಸಮಯದಲ್ಲಿ ಈ ಸ್ಟಾಕ್ ಶೇಕಡಾ 5 ರಷ್ಟು ಏರಿಕೆ ಕಂಡಿತು.
ಬ್ರೋಕರೇಜ್ ಹೇಳಿದ್ದೇನು?:
'ನಮ್ಮ ದೃಷ್ಟಿಯಲ್ಲಿ, ಜಲಾಂತರ್ಗಾಮಿ ನೌಕೆಗಳ ಸಂಭಾವ್ಯ ಆರ್ಡರ್ಗಳನ್ನು ಮತ್ತು ಹತ್ತಿರದ ಅವಧಿಯಲ್ಲಿ ಹೆಚ್ಚಿನ ಲಾಭವನ್ನು ಪರಿಗಣಿಸಿ ಸ್ಟಾಕ್ ಈಗಾಗಲೇ ಸಾಕಷ್ಟು ಏರಿಕೆಯಾಗಿದೆ' ಎಂದು ದೇಶೀಯ ಬ್ರೋಕರೇಜ್ ಹೇಳಿದೆ.
ಈ ಸ್ಟಾಕ್ ಕಳೆದ ವರ್ಷದಲ್ಲಿ 171% ಹೆಚ್ಚಳದೊಂದಿಗೆ ಮಲ್ಟಿಬ್ಯಾಗರ್ ಆದಾಯವನ್ನು ನೀಡಿದೆ. 2024 ರ ವರ್ಷದ ಮೇ ತಿಂಗಳಲ್ಲಿ 35.5% ಮತ್ತು ಏಪ್ರಿಲ್‌ನಲ್ಲಿ 26% ರಷ್ಟು ಏರಿಕೆ ಕಂಡಿದೆ. ಈ ಹೆಚ್ಚಳಕ್ಕೆ ಮುಂಚಿತವಾಗಿ ಸತತ ಎರಡು ತಿಂಗಳ ಷೇರುಗಳ ಬೆಲೆ ಕುಸಿತ ಕಂಡಿದೆ. ಫೆಬ್ರವರಿಯಲ್ಲಿ 9% ಮತ್ತು ಮಾರ್ಚ್‌ನಲ್ಲಿ 10.5% ಕುಸಿತ ಕಂಡುಬಂದಿದೆ. 0.4% ರಷ್ಟು ಸ್ವಲ್ಪ ಏರಿಕೆಯೊಂದಿಗೆ ಜನವರಿಯಲ್ಲಿ ಷೇರುಗಳ ಬೆಲೆ ಫ್ಲಾಟ್ ಆಗಿತ್ತು.
ಮೇ 30, 2024 ರಂದು ಸ್ಟಾಕ್ ಈಗ ದಾಖಲೆಯ ಗರಿಷ್ಠ ಬೆಲೆ 3478 ರೂಪಾಯಿ ಮುಟ್ಟಿತ್ತು. ಇದು ಜೂನ್ 8, 2023 ರಂದು ತನ್ನ 52 ವಾರಗಳ ಕನಿಷ್ಠ ಬೆಲೆಯಾದ ರೂ. 990.00 ಕ್ಕಿಂತ 170 ಪ್ರತಿಶತ ಏರಿಕೆಯಾಗಿದೆ.
ಭಾರತೀಯ ಕೋಸ್ಟ್ ಗಾರ್ಡ್‌ಗಾಗಿ ರೂ. 1,070 ಕೋಟಿ ಮೌಲ್ಯದ 14 ಫಾಸ್ಟ್ ಪೆಟ್ರೋಲ್ ವೆಸೆಲ್‌ಗಳನ್ನು (ಎಫ್‌ಪಿವಿ) ನಿರ್ಮಿಸುವ ಗುತ್ತಿಗೆಯನ್ನು ಕಂಪನಿ ಪಡೆದುಕೊಂಡಿದೆ. ಕಂಪನಿಯ ಮಂಡಳಿಯು ಪ್ರಸ್ತುತ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 12.11 ರೂ. ಅಂತಿಮ ಲಾಭಾಂಶವನ್ನು ಶಿಫಾರಸು ಮಾಡಿದೆ.