ನವದೆಹಲಿ: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಇನ್ನೆರಡು ತಿಂಗಳಲ್ಲಿ ಸಂಚಾರ ಆರಂಭಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
'ವಂದೇ ಭಾರತ್ ಸ್ಲೀಪರ್ ರೈಲಿನ ರೈಲುಸೆಟ್ ಅನ್ನು ಪೂರ್ಣಗೊಳಿಸುವ ಕೆಲಸವು ಭರದಿಂದ ಸಾಗುತ್ತಿದೆ. ಮೊದಲ ರೈಲು ಎರಡು ತಿಂಗಳೊಳಗೆ ಟ್ರ್ಯಾಕ್‌ಗೆ ಬರಲಿದೆ.
ವಂದೇ ಭಾರತ್ ಸ್ಲೀಪರ್ ಟ್ರೇನ್ ಅನ್ನು ಉನ್ನತ ದರ್ಜೆಯ ಆಸ್ಟೆನಿಟಿಕ್ ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಿಸಲಾಗಿದೆ. ಕ್ರ್ಯಾಶ್ ಬಫರ್‌ಗಳನ್ನು ಅಳವಡಿಸಲಾಗಿದೆ. ಅತ್ಯಂತ ಸುರಕ್ಷಿತ ಮಾನದಂಡಗಳನ್ನು ಈ ರೈಲಿನಲ್ಲಿ ಅಳವಡಿಸಲಾಗಿದೆ. ಅಗ್ನಿ ನಿರೋಧಕ ಸಾಮರ್ಥ್ಯದ ಪರಿಕರಗಳನ್ನು ಬಳಸಲಾಗಿದೆ ಎಂದಿದ್ದಾರೆ.
ಬಿಇಎಂಎಲ್ ರೈಲಿನ ಒಳವಿನ್ಯಾಸ, ಸ್ಲೀಪರ್ ಕೋಚ್ ಮತ್ತು ಹೊರ ವಿನ್ಯಾಸಗಳನ್ನು ಮಾಡಿದ್ದು, ಆಕರ್ಷಣೆ ಮತ್ತು ಕ್ರಿಯಾತ್ಮಕತೆ ಎರಡಕ್ಕೂ ಅವಕಾಶ ನೀಡಲಾಗಿದೆ ಎಂದರು.
ಈ ರೈಲು ಸುಮಾರು 200 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ರಾಜಧಾನಿ ಎಕ್ಸ್‌ಪ್ರೆಸ್‌ನಂತಹ ದೀರ್ಘ ಪ್ರಯಾಣಕ್ಕೆ ಪರ್ಯಾಯವಾಗಲಿದೆ.
ಇದರಲ್ಲಿ ಜಿಎಫ್‌ಆರ್‌ಪಿ ಪ್ಯಾನಲ್, ಆಟೊಮೆಟಿಕ್ ಪ್ಲಗ್ ಸ್ಲೈಡಿಂಗ್ ಪ್ಯಾಸೆಂಜರ್ ಡೋರ್ಸ್, ಫಸ್ಟ್ ಕ್ಲಾಸ್ ಕೋಚ್‌ನಲ್ಲಿ ಬಿಸಿನೀರಿನ ಶವರ್ ವ್ಯವಸ್ಥೆ, ಉತ್ತಮ ಗುಣಮಟ್ಟದ ಶೌಚಾಲಯ, ವಿಕಲಚೇತನರಿಗಾಗಿಯೇ ವಿಶೇಷ ಕೋಚ್ ಮತ್ತು ಶೌಚಾಲಯ ಇರಲಿವೆ.
1 ಎಸಿ ಫಸ್ಟ್ ಕ್ಲಾಸ್, 4 ಎಸಿ ಟು ಟಯರ್, 11 ಎಸಿ ತ್ರೀ ಟಯರ್ ಕಂಪಾರ್ಟ್‌ಮೆಂಟ್ ಒಳಗೊಂಡ 16 ಬೋಗಿಗಳ ಸ್ಲೀಪರ್ ಕೋಚ್ ರೈಲು ಇದಾಗಿರಲಿದೆ.