HEALTH TIPS

ಮನುಷ್ಯ ಸತ್ತಾಗ ಮೆದುಳಿನಲ್ಲಿ ಏನಾಗಲಿದೆ..? ಆ 2 ನಿಮಿಷದ ಗುಟ್ಟೇನು?

 ಮನುಷ್ಯ ಸತ್ತ ಬಳಿಕ ಏನಾಗುತ್ತಾನೆ ಎನ್ನುವುದಕ್ಕೆ ಹಲವಾರು ಸಿದ್ದಾಂತಗಳಿವೆ. ವೈದ್ಯಕೀಯವಾಗಿ ಒಂದಿಷ್ಟು ಸಿದ್ದಾಂತಗಳಿದ್ದರೆ ಧರ್ಮಗಳ ಸಾರದಲ್ಲಿ ಮತ್ತಷ್ಟು ಸಿದ್ಧಾಂತಗಳು ಅಡಗಿವೆ. ಅಲ್ಲದೆ ಕೆಲವೊಂದು ವಿಚಾರಗಳು ಈಗಲೂ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತವೆ. ಹಿಂದೂ ಧರ್ಮದ ಪ್ರಕಾರ ಒಬ್ಬ ವ್ಯಕ್ತಿ ಸತ್ತ ಬಳಿಕ ಆತನ ಆತ್ಮ ಪರಮಾತ್ಮನಲ್ಲಿ ಲೀನವಾಗುತ್ತದೆ ಎಂದು ನಂಬಲಾಗಿದೆ.


ಜೊತೆಗೆ ಪುನರ್ಜನ್ಮದಂತಹ ಸಿದ್ಧಾಂತಗಳು ಕೇಳುತ್ತಲೇ ಇರುತ್ತೇವೆ. ಆದರೆ ನಾವು ಸತ್ತ ಬಳಿಕ ನಮ್ಮ ಮೆದುಳಿನಲ್ಲಿ ಏನಾಗುತ್ತದೆ. ನಮ್ಮ ಜೊತೆಗೆ ನಮ್ಮ ಮೆದುಳು ಸಹ ಕೊನೆಯಾಗುತ್ತದೆಯೇ? ಉಸಿರು ನಿಂತರೆ ಸಂತಂತಾಗುತ್ತದೆಯೇ? ಎಂಬುದನ್ನು ನ್ಯೂರೋಬಯಾಲಜಿಸ್ಟ್ ಒಬ್ಬರು ವಿವರಿಸಿದ್ದಾರೆ.

ಸಾವು ಎಂದರೆ ಸಾಮಾನ್ಯ ಅರ್ಥದಲ್ಲಿ ಹೃದಯ ಬಡಿತ ಸಂಪೂರ್ಣವಾಗಿ ಸ್ತಬ್ಧವಾಗುವುದು. ಆದರೆ ಸಾವಿನ ನಂತರದ ಆರಂಭಿಕ ಕ್ಷಣಗಳಲ್ಲಿ ನಿಮ್ಮ ಮೆದುಳು ವಿದ್ಯುನ್ಮಾನವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತದೆ ಎಂದು ತಿಳಿದುಬಂದಿದೆ. ನರ ರೋಗ ತಜ್ಞ ಮತ್ತು ನ್ಯೂರೋಬಯಾಲಜಿಸ್ಟ್ ಡಾ ರಾಹುಲ್ ಜಂಡಿಯಲ್ ಅವರು ಡಾ ರಂಗನ್ ಚಟರ್ಜಿ ಅವರ ಪಾಡ್‌ಕ್ಯಾಸ್ಟ್ ಫೀಲ್ ಬೆಟರ್, ಲೈವ್ ಮೋರ್ ಸಂಭಾಷಣೆ ವೇಳೆ ಈ ಕುರಿತು ಮಾತನಾಡಿದ್ದಾರೆ. ಸಾಮಾನ್ಯವಾಗಿ, ECG ಯಲ್ಲಿನ ಗೆರೆಗಳು ಸ್ತಬ್ಧವಾದಾಗ ಹೃದಯಬಡಿತ ನಿಂತಿದೆ ಎಂದು ಹಾಗೂ ಹೃದಯದಿಂದ ಇನ್ನು ಮುಂದೆ ವಿದ್ಯುತ್ ಸಂಕೇತ ಬರುತ್ತಿಲ್ಲ ಎಂದು ಸೂಚಿಸಲಾಗುತ್ತದೆ. ಈ ವೇಳೆ ಸಾವು ಎಂದು ಘೋಷಿಸಲಾಗುತ್ತದೆ. ಆದರೆ ಈ ರೀತಿ ಹೃದಯ ತನ್ನ ಕಾರ್ಯ ಮುಗಿಸಿದ್ದರೂ ಮೆದುಳು ಮಾತ್ರ ಸಾವಿನ ನಂತರದ ಕೆಲವ ಹೊತ್ತಿನವರೆಗೂ ಈ ಪ್ರಕ್ರಿಯೆಗೆ ಒಳಗಾಗುತ್ತದೆ ಎಂದಿದ್ದಾರೆ.

ಸ್ಪಷ್ಟವಾದ ಹೃದಯ ಸಾವಿನ ನಂತರದ ಆರಂಭಿಕ ಕ್ಷಣಗಳಲ್ಲಿ ನಿಮ್ಮ ಮೆದುಳು ವಿದ್ಯುನ್ಮಾನವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತದೆ. ಮಿದುಳಿನ ಶಕ್ತಿಯಲ್ಲಿ ಚಟುವಟಿಕೆಯ ದೊಡ್ಡ ಸ್ಫೋಟವಿದೆ ಎಂದು ಅವರು ಹೇಳಿದರು, ಕನಸು ಅಥವಾ ವಿಸ್ತಾರವಾದ ಸ್ಮರಣೆಯ ಸಮಯದಲ್ಲಿ ಕಂಡುಬರುವ ಮೆದುಳಿನ ತರಂಗಗಳಿಗೆ ಇದು ಹೋಲಿಕೆಯಾಗುತ್ತದೆ.

ನಮ್ಮ ಹೃದಯವು ಬಡಿಯುವುದನ್ನು ನಿಲ್ಲಿಸುವ ಆರಂಭಿಕ ಕೆಲವು ಕ್ಷಣಗಳಲ್ಲಿ ಮೆದುಳು ತನ್ನ ಕೊನೆಯ ಬಹುಶಃ ಅಗ್ರ ಕ್ಷಣಗಳನ್ನು ಅನುಭವಿಸುತ್ತಿದೆ ಎಂದು ಅವರು ಹೇಳಿದರು. ಈ ವೇಳೆ ನಿಮ್ಮ ಮೆದುಳಿನಲ್ಲಿ ಚಟುವಟಿಕೆಯ ಮಹಾಸ್ಫೋಟ ಸಂಭವಿಸಬಹುದು. ಹೃದಯ ಕೊನೆಯ ಬಾರಿಗೆ ರಕ್ತವನ್ನು ಪಂಪ್ ಮಾಡುವ ಪ್ರಕ್ರಿಯೆ ಮೆದುಳಿಗೆ ತಿಳಿಯುತ್ತದೆ, ಈ ವೇಳೆ ಮೆದುಳಿನ ಕಾರ್ಯದಲ್ಲಿ ಶೀಘ್ರ ಬದಲಾವಣೆ ಕಾಣಬಹುದು. ಅಲ್ಲಿ ಚಟುವಟಿಕೆಗಳ ಮಹಾ ಸ್ಟೋಟ ಸಂಭವಿಸಲಿದೆ. ರಕ್ತವು ಗ್ಲೂಕೋಸ್ ಅನ್ನು ಹೊತ್ತೊಯ್ಯುವ ಕಾರಣ, ಇದು ತಾತ್ಕಾಲಿಕವಾಗಿ ನ್ಯೂರಾನ್‌ಗಳಿಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಈ ಪ್ರಕ್ರಿಯೆ ಅಂದರೆ ಮೆದುಳು ಹೃದಯ ಬಡಿತ ನಿಲ್ಲಿಸಿದ ಒಂದು ಅಥವಾ ಎರಡು ನಿಮಿಷಗಳ ಕಾಲ ಜೀವಿಸಲಿದೆಯಂತೆ. ಆದರೆ ಮೆದುಳಿಗೆ ಆಮ್ಲಜನಕದ ಪೂರೈಕೆ ಕಡಿತಗೊಂಡಾಗ ಅದು ಸಂಪೂರ್ಣ ಚಿರನಿದ್ರೆಗೆ ಸಾಗಲಿದೆ. ಆದರೆ ರಕ್ತದಲ್ಲಿರುವ ಆಮ್ಲಜನಕದ ಕಾರಣದಿಂದಾಗಿ ಮೆದುಳು ಕೆಲಕಾಲ ಕಾರ್ಯನಿರ್ವಹಿಸಿದಂತೆ ಇರಲಿದೆ. ಆದರೆ ಅಲ್ಲಿ ವಿಪರೀತ ರಾಸಾಯನಿಕ ಕ್ರಿಯೆಗಳು ಸಹ ಉಂಟಾಗಬಹುದು ಎಂದಿದ್ದಾರೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಗಾಢವಾದ ಕನಸು ಕಾಣುವಾಗ ಆತನ ಮೆದುಳಿನಲ್ಲಿ ಉಂಟಾಗುವ ಪ್ರಕ್ರಿಯಯೇ ಹೃದಯ ಬಡಿತ ನಿಂತ ಎರಡು ನಿಮಿಷ ಅವಧಿಯಲ್ಲಿ ನಡೆಯುತ್ತದೆ. ಬದುಕಿರುವ ವ್ಯಕ್ತಿಯ ಮೆದುಳಿನಲ್ಲಿ ಗಾಮ ಅಲೆಗಳು ಕಾಣಿಸುತ್ತವೆ. ಇದೇ ಅಲೆಗಳು ಹೃದಯ ಬಡಿತ ನಿಂತ ಕೆಲ ಸಮಯ ಮೆದುಳಿನಲ್ಲಿ ಕಾಣಿಸಲಿದೆಯಂತೆ. ಈ ವಿಚಾರದ ಕುರಿತು ಎಷ್ಟು ನಿಗೂಢಗಳು ಹೊರಬಂದರು ವ್ಯಕ್ತಿ ಮರಣದ ನಂತರ ಏನಾಗುತ್ತಾನೆ ಎಂಬುದನ್ನು ಕಂಡುಕೊಳ್ಳುವುದು ಕಷ್ಟಸಾಧ್ಯ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries