HEALTH TIPS

ಹೊಸ ದಾಖಲೆ ಸೃಷ್ಟಿಸಿದ ನೋಟಾ : ಅಭ್ಯರ್ಥಿಗಳನ್ನು ತಿರಸ್ಕರಿಸಿದ 2 ಲಕ್ಷಕ್ಕೂ ಹೆಚ್ಚು ಮತದಾರರು

          ಭೋಪಾಲ್: ಮಧ್ಯಪ್ರದೇಶದ 29 ಲೋಕಸಭಾ ಸ್ಥಾನಗಳಲ್ಲಿ ಇಂದೋರ್ ಲೋಕಸಭಾ ಕ್ಷೇತ್ರವೂ ಒಂದು. ಇಂದೋರ್ ಲೋಕಸಭಾ ಕ್ಷೇತ್ರದ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದಕ್ಕೆಲ್ಲಾ ಕಾರಣ 2024ರ ಲೋಕಸಭಾ ಚುನಾವಣೆಯಲ್ಲಿ ಇಂದೋರ್​​ ಕ್ಷೇತ್ರದಲ್ಲಿ 2,02,212 ಮತಗಳನ್ನು ನೋಟಾ ಗಳಿಸಿದ್ದರೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಶಂಕರ್ ಲಾಲ್ವಾನಿ ಅವರು 11,60,627 ಮತಗಳನ್ನು ಗಳಿಸಿದ್ದಾರೆ.

         ಅಸಲಿಗೆ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಅಕ್ಷಯಕಾಂತಿ ಕೊನೆಯ ಕ್ಷಣದಲ್ಲಿ ಬಿಜೆಪಿಗೆ ಸೇರಿ, ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ಹಾದಿಯನ್ನು ಸುಲಭಗೊಳಿಸಿದ್ದರು. ಅಕ್ಷಯಕಾಂತಿ ಅವರು ಏಪ್ರಿಲ್ 29ರಂದು ಬಿಜೆಪಿ ಸಚಿವ ಕೈಲಾಶ್ ವಿಜಯವರ್ಗಿಯಾ ಮತ್ತು ಶಾಸಕ ರಮೇಶ್ ಮೆಂಡೋಲಾ ಅವರೊಂದಿಗೆ ಇಂದೋರ್ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದರು. ನಂತರ ಕಾಂಗ್ರೆಸ್​, ಕಣದಲ್ಲಿರುವ ಯಾವುದೇ ಅಭ್ಯರ್ಥಿಗಳನ್ನು ಬೆಂಬಲಿಸದೆ, ನೋಟಾಗೆ ಮತ ಹಾಕುವಂತೆ ಜನರನ್ನು ಕೇಳುವುದರ ಜತೆಗೆ ಪ್ರಚಾರ ಕೂಡ ಮಾಡಿತು.

ನೋಟಾಗೆ ಮತ ಚಲಾಯಿಸಿದ ಇಂದೋರ್ ಮತದಾರರಿಗೆ ಕಾಂಗ್ರೆಸ್​ ಧನ್ಯವಾದ ತಿಳಿಸಿದೆ. ಮತ ಚಲಾವಣೆ ವೇಳೆ ನೋಟಾ ಮತದಾರರಿಗೆ ಒಂದು ಕ್ಷೇತ್ರದಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಆಯ್ಕೆಯನ್ನು ನೀಡುತ್ತದೆ. ಪ್ರಸ್ತುತ ಇಂದೋರ್ ಚುನಾವಣೆ ಇಡೀ ದೇಶದಲ್ಲಿ ಚರ್ಚೆಯ ವಿಷಯವಾಗಿದೆ. ನೋಟಾ ಗರಿಷ್ಠ ಮತಗಳನ್ನು ಪಡೆದಿದ್ದು, ಎದುರಾಳಿಯೇ ಇಲ್ಲದೆ ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ದೇಶದ ಅತಿದೊಡ್ಡ ಗೆಲುವಿನತ್ತ ಸಾಗುತ್ತಿರುವುದೇ ಅದಕ್ಕೆ ಕಾರಣವಾಗಿದೆ.

                   ಸದ್ಯ ದೇಶದಲ್ಲೇ ಅತಿ ಹೆಚ್ಚು ನೋಟಾಕ್ಕೆ ಮತ ಪಡೆದಿರುವ ದಾಖಲೆ ಬಿಹಾರದ ಗೋಪಾಲಗಂಜ್ ಹೆಸರಿನಲ್ಲಿದೆ. 2019ರ ಚುನಾವಣೆಯಲ್ಲಿ 51,660 ನೋಟಾಕ್ಕೆ ಹೆಚ್ಚು ಮತಗಳನ್ನು ಪಡೆಯು ಮೂಲಕ ಬಿಹಾರದ ಗೋಪಾಲಗಂಜ್​ ದಾಖಲೆ ಮಾಡಿತ್ತು. ಈ ಬಾರಿ ಇಂದೋರ್​ ಗೋಪಾಲಗಂಜ್​ ದಾಖಲೆ ಮುರಿಯುತ್ತದೆ ಎನ್ನಲಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries