ನವದೆಹಲಿ: ಗುರುವಾರ ಷೇರುಪೇಟೆಯ ಉತ್ಕರ್ಷದ ನಡುವೆ ಸರ್ವೋಟೆಕ್ ಪವರ್ ಸಿಸ್ಟಮ್ಸ್ ಲಿಮಿಟೆಡ್ ಷೇರುಗಳ ಬೆಲೆ ಶೇ. 4.18ರಷ್ಟು ಏರಿಕೆ ಕಂಡು 87.21 ರೂ. ಮುಟ್ಟಿದೆ. ಅಂದಾಜು 1970 ಕೋಟಿ ರೂ.ಗಳ ಮಾರುಕಟ್ಟೆ ಕ್ಯಾಪ್ ಇರುವ ಸರ್ವೋಟೆಕ್ ಪವರ್ ಸಿಸ್ಟಮ್ಸ್ ಷೇರುಗಳ 52 ವಾರಗಳ ಗರಿಷ್ಠ ಬೆಲೆ ರೂ 107.55 ಮತ್ತು ಕನಿಷ್ಠ ಬೆಲೆ ರೂ 69.50 ಇದೆ.
ಸರ್ವೋಟೆಕ್ ಪವರ್‌ನ ಷೇರುಗಳ ಬೆಲೆ ಕಳೆದ ಕೆಲವು ದಿನಗಳಿಂದ ದೌರ್ಬಲ್ಯವನ್ನು ಅನುಭವಿಸುತ್ತಿವೆ. ಆದರೆ ಕಳೆದ 6 ತಿಂಗಳಲ್ಲಿ ಹೂಡಿಕೆದಾರರಿಗೆ 15 ಪ್ರತಿಶತದಷ್ಟು ಲಾಭವನ್ನು ನೀಡಿದೆ.
ಕಳೆದ 3 ವರ್ಷಗಳಲ್ಲಿ, ಸರ್ವೋಟೆಕ್ ಪವರ್‌ನ ಷೇರುಗಳು ಹೂಡಿಕೆದಾರರಿಗೆ ಶೇಕಡಾ 5470 ರಷ್ಟು ಬಂಪರ್ ಲಾಭ ನೀಡಿವೆ. ಸರ್ವೋಟೆಕ್ ಪವರ್ ಸಿಸ್ಟಮ್ ಹೂಡಿಕೆದಾರರಿಗೆ 5 ಪ್ರತಿಶತದಷ್ಟು ಲಾಭಾಂಶವನ್ನು ನೀಡಲಿದೆ. ಕಂಪನಿಯ ಷೇರುಗಳ ಮುಖಬೆಲೆ ರೂ. 1 ಆಗಿದ್ದು, ಅದರ ಪ್ರಕಾರ ಹೂಡಿಕೆದಾರರು ಪ್ರತಿ ಷೇರಿಗೆ ಐದು ಪೈಸೆಯ ಲಾಭಾಂಶವನ್ನು ಪಡೆಯಲಿದ್ದಾರೆ.
ಸರ್ವೋಟೆಕ್ ಪವರ್‌ನಲ್ಲಿ ಪ್ರವರ್ತಕರ ಪಾಲು 13.30 ಕೋಟಿ ಷೇರುಗಳಿವೆ. ಪ್ರವರ್ತಕರು ಕಂಪನಿಯಲ್ಲಿ 59.70 ಪ್ರತಿಶತ ಪಾಲನ್ನು ಹೊಂದಿದ್ದಾರೆ. ಇದರ ಪ್ರಕಾರ ಸರ್ವೋಟೆಕ್ ನ ಪ್ರವರ್ತಕರು 66.53 ಲಕ್ಷ ರೂಪಾಯಿ ಲಾಭಾಂಶವನ್ನು ಪಡೆಯಲಿದ್ದಾರೆ.
ದೇಶದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಹೆಚ್ಚುತ್ತಿದೆ, ಆದ್ದರಿಂದ ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಬೇಡಿಕೆಯೂ ಹೆಚ್ಚುತ್ತಿದೆ. ಸರ್ವೋಟೆಕ್ ಪವರ್ ಸಿಸ್ಟಮ್ಸ್ ದೇಶದ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಮೂಲಸೌಕರ್ಯ ವ್ಯವಹಾರದಲ್ಲಿ ಪ್ರಮುಖ ಕಂಪನಿಯಾಗಿದ್ದು, ತನ್ನ ಹೂಡಿಕೆದಾರರಿಗೆ ಅಲ್ಪಾವಧಿಯಲ್ಲಿ ಮತ್ತು ದೀರ್ಘಾವಧಿಯಲ್ಲಿ ಮಲ್ಟಿಬ್ಯಾಗರ್ ಆದಾಯ ನೀಡಿದೆ. ಸರ್ವೋಟೆಕ್ ಪವರ್ ಸಿಸ್ಟಮ್ಸ್ ಲಿಮಿಟೆಡ್ ಅದಾನಿ ಗ್ರೂಪ್ ಜತೆಗೆ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ದೊಡ್ಡ ಕಂಪನಿಗಳಿಗೆ ದೇಶದಾದ್ಯಂತ ವಿದ್ಯುತ್ ವಾಹನ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲಿದೆ.