ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಎಎಪಿ ನಾಯಕ ಸೋಮನಾಥ ಭಾರ್ತಿ ಸವಾಲು ಹಾಕಿದ್ದಾರೆ.
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಎಎಪಿ ನಾಯಕ ಸೋಮನಾಥ ಭಾರ್ತಿ ಸವಾಲು ಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಬಹಿರಂಗ ಪೋಸ್ಟ್ ಹಾಕಿದ್ದಾರೆ.
'ನನ್ನ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ.
'ದೆಹಲಿಯಲ್ಲಿ ಎಲ್ಲ ಏಳು ಸ್ಥಾನಗಳಲ್ಲಿ 'ಇಂಡಿಯಾ' ಮೈತ್ರಿಕೂಟ ಜಯ ಗಳಿಸಲಿದೆ. ಮೋದಿ ಭಯದಿಂದಾಗಿ ಅವರು ಸೋಲುವುದನ್ನು ಎಕ್ಸಿಟ್ ಪೋಲ್ ತೋರಿಸಲಿಲ್ಲ. ಹಾಗಾಗಿ ನಾವೆಲ್ಲರೂ ನಿಜವಾದ ಫಲಿತಾಂಶಕ್ಕಾಗಿ ಜೂನ್ 4ರವರೆಗೆ ಕಾಯಬೇಕಿದೆ. ಜನರು ಬಿಜೆಪಿ ವಿರುದ್ಧ ಮತ ಹಾಕಿದ್ದಾರೆ' ಎಂದು ಹೇಳಿದ್ದಾರೆ.
'ಇಂಡಿಯಾ' ಮೈತ್ರಿಕೂಟದ ಅಭ್ಯರ್ಥಿ ಕೂಡ ಆಗಿರುವ ಸೋಮನಾಥ ಭಾರ್ತಿ, ನವದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.