ನವದೆಹಲಿ :ಪ್ರಧಾನಿ ನರೇಂದ್ರ ಮೋದಿಯವರ ನೂತನ ಸಂಪುಟದಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ನಾಲ್ಕು ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಎರಡು ಸಚಿವ ಸ್ಥಾನಗಳನ್ನು ಪಡೆಯಲಿವೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ.
ನವದೆಹಲಿ :ಪ್ರಧಾನಿ ನರೇಂದ್ರ ಮೋದಿಯವರ ನೂತನ ಸಂಪುಟದಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ನಾಲ್ಕು ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಎರಡು ಸಚಿವ ಸ್ಥಾನಗಳನ್ನು ಪಡೆಯಲಿವೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ.
ಟಿಡಿಪಿಯ ಸಂಭಾವ್ಯ ಸಚಿವರಲ್ಲಿ ರಾಮ್ ಮೋಹನ್ ನಾಯ್ಡು, ಹರೀಶ್ ಬಾಲಯೋಗಿ ಮತ್ತು ದಗ್ಗುಮಲ್ಲ ಪ್ರಸಾದ್ ರಾವ್ ಸೇರಿದ್ದಾರೆ. ಈ ಪೈಕಿ ಹರೀಶ್ ಬಾಲಯೋಗಿ ಅವರು 12ನೇ ಲೋಕಸಭೆಯ ಸ್ಪೀಕರ್ ಆಗಿದ್ದ, ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಜಿ ಎಂ ಸಿ ಬಾಲಯೋಗಿ ಅವರ ಪುತ್ರ.
ಜೆಡಿಯು ಸಚಿವ ಹುದ್ದೆಗಳಿಗೆ ತನ್ನ ಇಬ್ಬರು ಹಿರಿಯ ನಾಯಕರಾದ ಲಲನ್ ಸಿಂಗ್ ಮತ್ತು ರಾಮನಾಥ ಠಾಕೂರ್ ಅವರ ಹೆಸರುಗಳನ್ನು ಪ್ರಸ್ತಾವಿಸಿದೆ. ಲಲನ್ ಸಿಂಗ್ ಬಿಹಾರದ ಮುಂಗೇರ್ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರೆ ಭಾರತರತ್ನ ಪುರಸ್ಕೃತ ಕರ್ಪೂರಿ ಠಾಕೂರ್ ಅವರ ಪುತ್ರರಾಗಿರುವ ರಾಮನಾಥ ಠಾಕೂರ್ ರಾಜ್ಯಸಭಾ ಸದಸ್ಯರಾಗಿದ್ದಾರೆ.
ಸಂಪುಟ ಸ್ಥಾನಗಳನ್ನು ನಿರ್ಧರಿಸಲು ಶನಿವಾರ ನಡೆದ ಎನ್ಡಿಎ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಮೂಲಗಳ ಪ್ರಕಾರ ಆಂಧ್ರಪ್ರದೇಶದಲ್ಲಿ 16 ಲೋಕಸಭಾ ಸ್ಥಾನಗಳನ್ನು ಗೆದ್ದಿರುವ ಟಿಡಿಪಿ ನಾಲ್ಕು ಸಚಿವ ಹುದ್ದೆಗಳು ಮತ್ತು ಸ್ಪೀಕರ್ ಹುದ್ದೆಗೆ ಹಾಗೂ 12 ಲೋಕಸಭಾ ಸ್ಥಾನಗಳನ್ನು ಗೆದ್ದಿರುವ ಜೆಡಿಯು ಎರಡು ಸಚಿವ ಹುದ್ದೆಗಳಿಗೆ ಬೇಡಿಕೆಯಿಟ್ಟಿದ್ದವು. ಮೋದಿ ರವಿವಾರ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.