ವಾಟ್ಸಪ್ (WhatsApp) ಬಳಕೆದಾರರಿಗೆ ಇದು ದೊಡ್ಡ ಶಾಕಿಂಗ್ ನ್ಯೂಸ್. ಹೌದು, ಆಫಲ್, ಸ್ಯಾಮ್‌ಸಂಗ್, ಮೊಟೊ, ಸೋನಿ, ಹುವಾವೇ ಮತ್ತು ಎಲ್‌ಜಿ ನಂತಹ ಉನ್ನತ ಬ್ರಾಂಡ್‌ಗಳ 35 ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್ ಶೀಘ್ರದಲ್ಲೇ ಕೆಲಸ ಮಾಡುವುದನ್ನು ನಿಲ್ಲಿಸಲಿದೆ.
ವಿಶ್ವದಲ್ಲೇ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಇನ್‌ಸ್ಟಂಟ್ ಮೆಸೆಜ್ ಆಪ್ ವಾಟ್ಸಪ್ ಇದೀಗ ತನ್ನ ಬಳಕೆದಾರರಿಗೆ ಶಾಕಿಂಗ್ ಸುದ್ದಿ ನೀಡಿದೆ. ಜನಪ್ರಿಯ ವಾಟ್ಸಪ್ ಹೊಸ ಫೀಚರ್‌ಗಳನ್ನು ಬಳಕೆದಾರರಿಗೆ ನೀಡುತ್ತಲೇ ಬರುತ್ತಿದೆ. ಆದರೆ, ಅದಕ್ಕೆ ತಕ್ಕ ಹಾರ್ಡ್‌ವೇರ್ ಬೆಂಬಲ ಇಲ್ಲದೇ ಹೋದರೆ, ನಿಮ್ಮ ಫೋನ್‌ನಲ್ಲಿ ವಾಟ್ಸಪ್ ಕೆಲಸ ಮಾಡುವುದಿಲ್ಲ. ಹೀಗಾಗಿ, ಹಳೆಯ ಓಎಸ್ ಹೊಂದಿರುವ ಮತ್ತು ಆಂಡ್ರಾಯ್ಡ್, ಐಫೋನ್ ಮತ್ತು ವಿಂಡೋಸ್ ಫೋನ್‌ಗಳಲ್ಲಿ ವಾಟ್ಸಪ್ ಕೆಲಸ ಮಾಡುವುದನ್ನು ನಿಲ್ಲಿಸಲಿದೆ.
ಈ ಮಹತ್ವದ ಬದಲಾವಣೆಯು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಸುರಕ್ಷತೆ ದೃಷ್ಟಿಯಿಂದ ವಾಟ್ಸಪ್‌ನ ನಿಯಮಿತ ಅಪ್ಡೇಟ್‌ಗಳ ಭಾಗವಾಗಿದೆ. ಹಳೆಯ ಫೋನ್‌ಗಳು ಹೊಸ ಫೀಚರ್ಸ್ ಮತ್ತು ಭದ್ರತಾ ಅಪ್ಡೇಟ್‌ಗಳನ್ನು ಬೆಂಬಲಿಸಲು ಅಗತ್ಯವಾದ ಹಾರ್ಡ್‌ವೇರ್ ಸಾಮರ್ಥ್ಯಗಳನ್ನು ಹೊಂದಿರುವುದಿಲ್ಲ. ಅಪ್ಲಿಕೇಶನ್ ಆಂಡ್ರಾಯ್ಡ್ 5.0 ಅಥವಾ ನಂತರದ ಮತ್ತು iOS 12 ಅಥವಾ ಬೇರೆ ಮೊಬೈಲ್‌ಗಳನ್ನು ಮಾತ್ರ ಬೆಂಬಲಿಸುತ್ತದೆ. ಹೊಸ ಆಂಡ್ರಾಯ್ಡ್ ಆವೃತ್ತಿಯ ಅಪ್ಡೇಟ್ ಲಭ್ಯವಿಲ್ಲದಿದ್ದರೆ, ಬಳಕೆದಾರರು ಹೊಸ ಸ್ಮಾರ್ಟ್ಫೋನ್ ಕೊಳ್ಳುವುದು ಅನಿವಾರ್ಯ.
ಇನ್ನು, ಯಾವ್ಯಾವ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್ ತನ್ನ ಬೆಂಬಲವನ್ನು ನಿಲ್ಲಿಸಲಿದೆ ಗೊತ್ತಾ..? ಆ 35 ಮೊಬೈಲ್‌ಗಳ ಪಟ್ಟಿ ಇಲ್ಲಿದೆ ನೋಡಿ.
ಸ್ಯಾಮ್‌ಸಂಗ್‌ನ ಈ ಫೋನ್‌ಗಳಲ್ಲಿ ವಾಟ್ಸಪ್ ಕೆಲಸ ಮಾಡಲ್ಲ
- ಸ್ಯಾಮ್‌ಸಂಗ್ ಗ್ಯಾಲಕ್ಸಿ ಏಸ್ ಪ್ಲಸ್
- ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್
- ಸ್ಯಾಮ್‌ಸಂಗ್ ಗ್ಯಾಲಕ್ಸಿ Express 2
- ಸ್ಯಾಮ್‌ಸಂಗ್ ಗ್ಯಾಲಕ್ಸಿ Grand
- ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 3
- ಸ್ಯಾಮ್‌ಸಂಗ್ ಗ್ಯಾಲಕ್ಸಿ S3 ಮಿನಿ
- ಸ್ಯಾಮ್‌ಸಂಗ್ ಗ್ಯಾಲಕ್ಸಿ S4 Active
- ಸ್ಯಾಮ್‌ಸಂಗ್ ಗ್ಯಾಲಕ್ಸಿ S4 ಮಿನಿ
- ಸ್ಯಾಮ್‌ಸಂಗ್ ಗ್ಯಾಲಕ್ಸಿ S4 ಜೂಮ್
ಮೊಟೊರೊಲಾನ ಯಾವ ಫೋನ್‌ಗಳಲ್ಲಿ ವಾಟ್ಸಪ್ ಬಂದ್?
- ಮೊಟೊ G
- ಮೊಟೊ X
ಹುವಾವೇನ 5 ಫೋನ್‌ಗಳಲ್ಲಿಯೂ ವಾಟ್ಸಪ್ ಕೆಲಸ ಸ್ಟಾಪ್
- ಹುವಾವೇ Ascend P6
- ಹುವಾವೇ Ascend G525
- ಹುವಾವೇ C199
- ಹುವಾವೇ GX1s
- ಹುವಾವೇ Y625
ಸೋನಿಯ ಈ ಫೋನ್‌ಗಳಲ್ಲಿ ಇನ್ಮುಂದೆ ವಾಟ್ಸಪ್ ವರ್ಕ್ ಆಗಲ್ಲ?
- ಸೋನಿ ಎಕ್ಸ್‌ಪೀರಿಯಾ Z1
- ಸೋನಿ ಎಕ್ಸ್‌ಪೀರಿಯಾ E3
ಎಲ್‌ಜಿ (LG) ಯ ಈ ಫೋನ್‌ಗಳಲ್ಲಿಯೂ ವಾಟ್ಸಪ್ ಬಂದ್
- ಎಲ್‌ಜಿ ಆಪ್ಟಿಮಸ್ 4X HD
- ಎಲ್‌ಜಿ ಆಪ್ಟಿಮಸ್ G
- ಎಲ್‌ಜಿ ಆಪ್ಟಿಮಸ್ G ಪ್ರೊ
- ಎಲ್‌ಜಿ ಆಪ್ಟಿಮಸ್ L7
ಆಪಲ್‌ನ 4 ಫೋನ್‌ಗಳಲ್ಲಿ ವಾಟ್ಸಪ್ ಸ್ಟಾಪ್
- ಐಫೋನ್ 5
- ಐಫೋನ್ 6
- ಐಫೋನ್ 6S
- ಐಫೋನ್ 6S ಪ್ಲಸ್
ನಿಮ್ಮ ಮೊಬೈಲ್ ಈ ಪಟ್ಟಿಯಲ್ಲಿದ್ದರೆ ಏನು ಮಾಡಬೇಕು? ಎಂಬ ಕುತೂಹಲ ಮೂಡುವುದು ಸಹಜ. ಭಯ ಬೇಡ.. ನೀವು ಹೊಸ ಫೋನ್ ಖರೀದಿಸುವ ಮೊದಲು ನಿಮ್ಮ ಚಾಟ್ ಹಿಸ್ಟರಿಯನ್ನು ಬ್ಯಾಕಪ್ ಮಾಡಬಹುದು. ನಿಮ್ಮ ಚಾಟ್ ಇತಿಹಾಸವನ್ನು ಬ್ಯಾಕಪ್ ಮಾಡಲು, WhatsAppನಲ್ಲಿ ಸೆಟ್ಟಿಂಗ್‌ಗಳು > ಚಾಟ್‌ಗಳು > ಚಾಟ್ ಬ್ಯಾಕಪ್‌ಗೆ ಹೋಗಿ. ಹೀಗೆ ಮಾಡಿದರೆ ನೀವು, ಪ್ರಮುಖ ಮೆಸೇಜ್‌ಗಳು ಅಥವಾ ಮೀಡಿಯಾ ಫೈಲ್‌ಗಳನ್ನು ಕಳೆದುಕೊಳ್ಳುವುದಿಲ್ಲ.
ಈ ಸುದ್ದಿ ಓದಿದ್ದೀರಾ?:
ನಿಮ್ಮ ಫೋನ್‌ನಲ್ಲಿ ಈ ಓಎಸ್ ಇದ್ರೆ ಭಯ ಬೇಡ
ಆಪಲ್ ಐಓಎಸ್ 9 ಅಥವಾ ಆಂಡ್ರಾಯ್ಡ್ 4.0.3 ಓಎಸ್ ಗಿಂತ ಹಿಂದಿನ ಓಸ್‌ಎನಲ್ಲಿ ಕಾರ್ಯನಿರ್ವಹಿಸುವ ಫೋನ್‌ಗಳಲ್ಲಿ ವಾಟ್ಸಪ್ ಕೆಲಸ ಮಾಡಲ್ಲ. ಹೀಗಾಗಿ, 4.1 ಓಎಸ್ ಅಥವಾ ಅದಕ್ಕಿಂತ ಮೇಲ್ಪಟ್ಟ ಓಎಸ್‌ನ ಆಂಡ್ರಾಯ್ಡ್ ಫೋನ್‌ಗಳನ್ನು ಮತ್ತು ಐಓಎಸ್ 10 ಮತ್ತು ಅದಕ್ಕಿಂತ ಮೇಲ್ಪಟ್ಟ ಐಫೋನ್ ಮಾಡೆಲ್‌ಗಳನ್ನು ಬಳಸುವ ಬಳಕೆದಾರರಿಗೆ ಮಾತ್ರ ವಾಟ್ಸಪ್ ಲಭ್ಯವಾಗಲಿದೆ.
ಶೀಘ್ರದಲ್ಲೇ ಬರಲಿವೆ 10 ಹೊಸ ಚಾಟ್ ಥೀಮ್‌ಗಳು!
ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್, ಚಾಟ್‌ನ ಅನುಭವವನ್ನು ಮತ್ತಷ್ಟು ವಿಶೇಷವಾಗಿಸಲು ಹೊಸ ಚಾಟ್ ಥೀಮ್‌ಗಳನ್ನು ಪರಿಚಯಿಸಲಿದೆ. ಆರಂಭದಲ್ಲಿ iOS ಬಳಕೆದಾರರಿಗಾಗಿ ಈ ಫೀಚರ್‌ಗಳನ್ನು ಹೊರತರುತ್ತಿದೆ. ಭವಿಷ್ಯದಲ್ಲಿ ಎಲ್ಲಾ Android ಬಳಕೆದಾರರಿಗೆ ವಿಸ್ತರಿಸಲಿದೆ. ಐಓಎಸ್ ಬೀಟಾ ಬಳಕೆದಾರರು ಡಿಫಾಲ್ಟ್ ಗ್ರೀನ್ ಚಾಟ್ ಥೀಮ್‌ನೊಂದಿಗೆ ಹೊಸ ಚಾಟ್ ಥೀಮ್‌ಗಳನ್ನು ಸ್ವೀಕರಿಸಿರುವುದನ್ನು ಕಾಣಬಹುದಾಗಿದೆ. ಇದರಲ್ಲಿ ಹಸಿರು, ಕಪ್ಪು, ನೇರಳೆ, ನೀಲಿ ಮತ್ತು ಗುಲಾಬಿ ಬಣ್ಣಗಳನ್ನು ಒಳಗೊಂಡಿರುವ ಥೀಮ್‌ನಲ್ಲಿ ವಿಭಿನ್ನ ಬಣ್ಣದ ಆಯ್ಕೆಗಳು ಮತ್ತು ವಾಲ್‌ಪೇಪರ್‌ಗಳನ್ನು ಲಭ್ಯವಿರುತ್ತದೆ.