HEALTH TIPS

'ಕಾನಿಷ್ಕ' ಬಾಂಬ್‌ ಸ್ಫೋಟಕ್ಕೆ 39ನೇ ವರ್ಷ: ಜೂನ್‌ 23ಕ್ಕೆ ಸ್ಮರಣೆ

         ಟ್ಟಾವಾ: ಕೆನಡಾದ ಮಾಂಟ್ರಿಯಲ್‌ನಿಂದ ನವದೆಹಲಿಗೆ ಸಂಚರಿಸುತ್ತಿದ್ದ ಏರ್‌ ಇಂಡಿಯಾದ 'ಕಾನಿಷ್ಕ' ವಿಮಾನವನ್ನು ಸಿಖ್ ಉಗ್ರಗಾಮಿಗಳು ಸ್ಫೋಟಿಸಿ ಇದೇ 23ಕ್ಕೆ 39 ವರ್ಷಗಳಾಗಲಿವೆ. ಉಗ್ರರ ಈ ದಾಳಿಯಲ್ಲಿ ಅಗಲಿದವರನ್ನು ಸ್ಮರಿಸುವ ಉದ್ದೇಶದಿಂದ ಕೆನಡಾದ ವ್ಯಾಂಕೋವರ್‌ನಲ್ಲಿರುವ ಭಾರತದ ಕಾನ್ಸುಲೇಟ್‌ ಜನರಲ್‌ ಇದೇ 23ರಂದು ಕಾರ್ಯಕ್ರಮ ಹಮ್ಮಿಕೊಂಡಿದೆ.

            1985ರ ಜೂನ್‌ 23ರಂದು ವಿಮಾನವು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿಯುವ 45 ನಿಮಿಷಗಳ ಮುನ್ನ ಸ್ಫೋಟಿಸಲಾಗಿತ್ತು. ವಿಮಾನದಲ್ಲಿದ್ದ 89 ಮಕ್ಕಳು ಸೇರಿ ಎಲ್ಲ 329 ಜನರು ಮೃತಪಟ್ಟಿದ್ದರು. ಅವರಲ್ಲಿ ಹೆಚ್ಚಿನವರು ಭಾರತೀಯ ಮೂಲದ ಕೆನಡಾದವರು.

         1984ರಲ್ಲಿ 'ಗೋಲ್ಡನ್‌ ಟೆಂಪಲ್‌'ನಿಂದ ಉಗ್ರರನ್ನು ಹೊರಹಾಕಲು ನಡೆಸಿದ 'ಆಪರೇಷನ್‌ ಬ್ಲೂಸ್ಟಾರ್‌'ಗೆ ಪ್ರತೀಕಾರವಾಗಿ ಸಿಖ್‌ ಉಗ್ರರು ಈ ಬಾಂಬ್‌ ದಾಳಿ ನಡೆಸಿದ್ದರು.

             'ಭಾರತವು ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ಮುಂಚೂಣೆಯಲ್ಲಿದೆ ಮತ್ತು ಈ ಜಾಗತಿಕ ಪಿಡುಗನ್ನು ಎದುರಿಸಲು ಎಲ್ಲ ರಾಷ್ಟ್ರಗಳೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತದೆ' ಎಂದು ಭಾರತದ ಕಾನ್ಸುಲೇಟ್‌ ಜನರಲ್‌ ಕಚೇರಿ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದೆ.

               ವ್ಯಾಂಕೋವರ್‌ನಲ್ಲಿ ಇರುವ ಸ್ಟಾನ್ಲಿ ಪಾರ್ಕ್‌ನ ಸೆಪರ್ಲಿ ಮೈದಾನದ ಏರ್‌ ಇಂಡಿಯಾ ಸ್ಮಾರಕದಲ್ಲಿ ಸ್ಮರಣಾ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ. ಭಯೋತ್ಪಾದನೆ ವಿರುದ್ಧದ ಒಗ್ಗಟ್ಟಿನ ಪ್ರದರ್ಶನದಲ್ಲಿ ಭಾಗವಹಿಸಲು ಭಾರತೀಯ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕಾನ್ಸುಲೇಟ್‌ ಕರೆ ನೀಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries