ನವದೆಹಲಿ: ದೇಶದ ಪ್ರಮುಖ ದೂರಸಂಪರ್ಕ ಕಂಪನಿ ಜಿಯೋ ಜು. 3ರಿಂದ ತನ್ನ ಮೊಬೈಲ್ ಸೇವಾ ದರಗಳನ್ನು ಶೇ. 12ರಿಂದ 27ರವರೆಗೆ ಏರಿಸಲು ನಿರ್ಧರಿಸಿದೆ. ಅದಲ್ಲದೆ 5ಜಿ ಅನ್ಲಿಮಿಟೆಡ್ ಉಚಿತ ಸೇವೆಯನ್ನು ಮಿತಿಗೆ ಒಳಪಡಿಸಲು ತೀರ್ವನಿಸಿದೆ. ಎರಡೂವರೆ ವರ್ಷಗಳ ಬಳಿಕ ಇದೇ ಮೊದಲ ಸಲ ಜಿಯೋ ದರ ಏರಿಸುತ್ತಿದೆ.

ಎರಡು ಹೊಸ ಆಪ್ಗಳು
ಜಿಯೋ ತನ್ನ ಡಿಜಿಟಲ್ ಸೌಲಭ್ಯದ ವ್ಯಾಪ್ತಿಯನ್ನೂ ವಿಸ್ತರಿಸಿದೆ. ಜಿಯೋ ಸೇಫ್ ಮತ್ತು ಜಿಯೋ ಟ್ರಾನ್ಸ್ಲೇಟ್ ಎಂಬ ಎರಡು ಅಪ್ಲಿಕೇಷನ್ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಸೇಫ್ ತಿಂಗಳ ದರ 199 ರೂ. ಇದ್ದು, ಸುರಕ್ಷಿತ ಕರೆ, ಮೆಸೇಜಿಂಗ್ ಮತ್ತು ಫೈಲ್ ಟ್ರಾನ್ಸ್ಫರ್ ಸೇವೆಯನ್ನು ಒದಗಿಸುತ್ತದೆ. ಕೃತಕ ಬುದ್ಧಿಮತ್ತೆಯಿಂದ ಚಾಲಿತವಾದ ಜಿಯೋ ಟ್ರಾನ್ಸ್ಲೇಟ್ ಆಪ್ ತಿಂಗಳಿಗೆ 99 ರೂ. ಪಾವತಿಸಿದರೆ, ವಾಯ್ಸ್, ಕಾಲ್, ಮೆಸೇಜ್, ಟೆಕ್ಸ್ಟ್ ಮತ್ತು ಇಮೇಜ್ಗಳನ್ನು ಟ್ರಾನ್ಸ್ಲೇಟ್ ಮಾಡುತ್ತದೆ. ಜಿಯೋ ಬಳಕೆದಾರರಿಗೆ ಒಂದು ವರ್ಷದವರೆಗೆ ಈ ಎರಡೂ ಆಪ್ಗಳು ಉಚಿತವಾಗಿರಲಿವೆ.