ಕುಂಬಳೆ: ಪುತ್ತಿಗೆ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಅಷ್ಟಮಂಗಲ ದೈವ ಚಿಂತನೆಯ ಪ್ರಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಇದರಂತೆ ಬ್ರಹ್ಮಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ತಾಂತ್ರಿಕ ಕಾರ್ಯಕ್ರಮಗಳು ಜರಗಲಿದೆ. ಜೂ.3ಕ್ಕೆ ಬೆಳಗ್ಗೆ 7 ರಿಂದ ಶತರುದ್ರಾಭಿಷೇಕ, ಏಕಾದಶ ಆರಾಧನೆ,ಬಲಿವಾಡು ಕೂಟ ಹಾಗೂ ನಿಧಿ ಸಮರ್ಪಣಾ ಕಾರ್ಯಕ್ರಮ ಜರಗಲಿದೆ. ಎಡನೀರು ಮಠಾಧೀಸ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಗಮಿಸಲಿದ್ದಾರೆ. 11.30ರಿಂದ ಸ್ವಾಮೀಜಿಗಳ ಪಾದಪೂಜೆ,ಆಶೀರ್ವಚನ ನಡೆಯಲಿದೆ. ಸಂಜೆ 6.30ರಿಂದ ದುರ್ಗಾಪೂಜೆ,ಸುದರ್ಶನ ಹವನ ನಡೆಯಲಿದೆ.