ತೈಪೆ: ಶನಿವಾರ ಬೆಳಗ್ಗಿನವರೆಗಿನ 24 ಗಂಟೆ ಅವಧಿಯಲ್ಲಿ ತೈವಾನ್ ದ್ವೀಪದ ಸುತ್ತಲೂ ಚೀನಾ ಮಿಲಿಟರಿಗೆ ಸೇರಿದ 41 ಯುದ್ಧವಿಮಾನಗಳನ್ನು ಪತ್ತೆಹಚ್ಚಿರುವುದಾಗಿ ತೈವಾನ್‍ನ ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ.
ತೈಪೆ: ಶನಿವಾರ ಬೆಳಗ್ಗಿನವರೆಗಿನ 24 ಗಂಟೆ ಅವಧಿಯಲ್ಲಿ ತೈವಾನ್ ದ್ವೀಪದ ಸುತ್ತಲೂ ಚೀನಾ ಮಿಲಿಟರಿಗೆ ಸೇರಿದ 41 ಯುದ್ಧವಿಮಾನಗಳನ್ನು ಪತ್ತೆಹಚ್ಚಿರುವುದಾಗಿ ತೈವಾನ್‍ನ ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ.
ತೈವಾನ್ ಸ್ವಾತಂತ್ರ್ಯದ ಬಗ್ಗೆ ಪಟ್ಟುಬಿಡದೆ ಪ್ರತಿಪಾದಿಸುವವರು ಮರಣದಂಡನೆಗೆ ಗುರಿಯಾಗಲಿದ್ದಾರೆ ಎಂದು ಚೀನಾ ಎಚ್ಚರಿಕೆ ನೀಡಿದ ಬಳಿಕದ ಬೆಳವಣಿಗೆ ಇದಾಗಿದೆ.
ಚೀನಾದ 41 ಯುದ್ಧವಿಮಾನಗಳು ಹಾಗೂ ನೌಕಾಪಡೆಯ 7 ನೌಕೆಗಳು ತೈವಾನ್ ಸುತ್ತ ಕಂಡುಬಂದಿವೆ. ಇದರಲ್ಲಿ 32 ಯುದ್ಧವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಾಗುವುದು ಎಂದು ತೈವಾನ್‍ನ ವಿದೇಶಾಂಗ ಸಚಿವಾಲಯ ಶನಿವಾರ ಹೇಳಿದೆ. ಚೀನಾದಿಂದ ತೈವಾನನ್ನು ಬೇರ್ಪಡಿಸುವ 180 ಕಿ.ಮೀ ಜಲಮಾರ್ಗವನ್ನು ವಿಭಜಿಸುವ ರೇಖೆಯನ್ನು ಮಧ್ಯದ ರೇಖೆಯೆಂದು ಗುರುತಿಸಲಾಗಿದೆ.