ಕನ್ಯಾಕುಮಾರಿ: ಲೋಕಸಭೆ ಚುನಾವಣೆಯ ಅಬ್ಬರದ ಪ್ರಚಾರದ ಬಳಿಕ ಕನ್ಯಾಕುಮಾರಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಧ್ಯಾನದಲ್ಲಿ ಮಗ್ನರಾಗಿದ್ದರು.
ಕನ್ಯಾಕುಮಾರಿಯಲ್ಲಿ 45 ತಾಸಿನ ಧ್ಯಾನ ಪೂರ್ಣಗೊಳಿಸಿದ ಪ್ರಧಾನಿ ಮೋದಿ
0
ಜೂನ್ 01, 2024
Tags
ಕನ್ಯಾಕುಮಾರಿ: ಲೋಕಸಭೆ ಚುನಾವಣೆಯ ಅಬ್ಬರದ ಪ್ರಚಾರದ ಬಳಿಕ ಕನ್ಯಾಕುಮಾರಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಧ್ಯಾನದಲ್ಲಿ ಮಗ್ನರಾಗಿದ್ದರು.
ಲೋಕಸಭೆಗೆ ಏಳನೇ ಹಂತದ ಮತದಾನ ಇಂದು ನಡೆಯುತ್ತಿರುವಂತೆಯೇ ಎರಡು ದಿನಗಳ ಕಾಲ ಪ್ರಧಾನಿ ಧ್ಯಾನದಲ್ಲಿ ಮಗ್ನರಾಗಿರುವುದು ಮತದಾರರನ್ನು ಸೆಳೆಯುವ ಪ್ರಚಾರ ತಂತ್ರವಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಆದರೆ ಆರೋಪವನ್ನು ಆಡಳಿತಾರೂಢ ಬಿಜೆಪಿ ನಿರಾಕರಿಸಿತ್ತು.
ಪ್ರಧಾನಿ ಮೋದಿ ಅವರ ಭೇಟಿಯನ್ನು ವಿರೋಧಿಸಿ ಮದುರೈನಲ್ಲಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಲವರು 'ಗೋಬ್ಯಾಕ್‌ಮೋದಿ' ಹ್ಯಾಷ್‌ಟ್ಯಾಗ್ ಇದ್ದ ಪೋಸ್ಟ್‌ಗಳನ್ನು ಪ್ರಕಟಿಸಿದ್ದರು. ಮತ್ತೊಂದೆಡೆ ಮೋದಿ ಧ್ಯಾನದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು.