ಕರಾಚಿ: ಬಿಸಿಗಾಳಿಯ ತೀವ್ರತೆಯಿಂದ ಪಾಕಿಸ್ತಾನದ ಅತಿದೊಡ್ಡ ನಗರವಾಗಿರುವ ಕರಾಚಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 450 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರೇತರ ಸಂಸ್ಥೆ ಎಧಿ ಫೌಂಡೇಶನ್ ಬುಧವಾರ ತಿಳಿಸಿದೆ.
ಕರಾಚಿ: ಬಿಸಿಗಾಳಿಯ ತೀವ್ರತೆಯಿಂದ ಪಾಕಿಸ್ತಾನದ ಅತಿದೊಡ್ಡ ನಗರವಾಗಿರುವ ಕರಾಚಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 450 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರೇತರ ಸಂಸ್ಥೆ ಎಧಿ ಫೌಂಡೇಶನ್ ಬುಧವಾರ ತಿಳಿಸಿದೆ.
ಬಂದರು ನಗರವಾಗಿರುವ ಕರಾಚಿಯಲ್ಲಿ ಶನಿವಾರದಿಂದ 40ಕ್ಕಿಂತ ಹೆಚ್ಚು ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಎಧಿ ಫೌಂಡೇಶನ್ ಮುಖ್ಯಸ್ಥ ಫೈಸಲ್ ಎಧಿ, 'ಕರಾಚಿಯಲ್ಲಿ ನಾವು ಶವಾಗಾರವನ್ನು ನಿರ್ವಹಿಸುತ್ತಿದ್ದೇವೆ. ಹೆಚ್ಚುವರಿಯಾಗಿ ಬರುವ ಶವಗಳನ್ನು ಇಡಲು ಶವಾಗಾರದಲ್ಲಿ ಸ್ಥಳಾವಕಾಶವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಶವಗಳ ಪೈಕಿ ಹೆಚ್ಚು ತಾಪಮಾನದ ಹೊರತಾಗಿಯೂ, ವಿದ್ಯುತ್ ಅಭಾವ ಎದುರಿಸುತ್ತಿರುವ ಪ್ರದೇಶಗಳಿಂದ ಬಂದ ಶವಗಳೇ ಹೆಚ್ಚಿವೆ ಎಂಬುದು ಆಘಾತಕಾರಿ' ಎಂದರು.