ಅಲಪ್ಪುಳ: ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದುವ ಕನಸು ಇರುತ್ತದೆ. ಆಲಪ್ಪುಳ ಮನ್ನಂಚೇರಿ ಮೂಲದ ಗವೇಶಿ ಕೂಡ ಸ್ಥಗಿತಗೊಂಡಿರುವ ಮನೆ ಕೆಲಸವನ್ನು ಪೂರ್ಣಗೊಳಿಸಲು ಕನಸುಕಂಡವಳೆ.
ಗವೇಶಿ ಅವರ ಕನಸುಗಳಿಗೆ ಶಕ್ತಿ ನೀಡುತ್ತಿರುವುದು ಅವರ ಒಂಬತ್ತು ವರ್ಷದ ಮಗಳು ಗೌರಿ. ಮನೆಯಲ್ಲಿ ಕಷ್ಟದ ನಡುವೆಯೂ ತಂದೆಗೆ ಆಸರೆಯಾಗಿ, ನೆರಳಾಗಿ ಬಲ್ಬ್ ಗಳನ್ನು ತಯಾರಿಸುತ್ತಿದ್ದಾಳೆ ಈ ಪುಟ್ಟ ಪ್ರತಿಭೆ. ಆದರೆ ಆಕೆ ಮಾಡುವ ಬಲ್ಬ್ ಗಳಿಗಿಂತಲೂ ಆಕೆಯ ಮನದಾಳದ ಮನೆಯ ಕನಸು ಹೆಚ್ಚು ಬೆಳಕು ನೀಡುವಂತ ಶಕ್ತಿಯದ್ದು.
ಗೌರಿ ಮನ್ನಂಚೇರಿ ಪೊನ್ನಾಡ್ ಎಲ್ ಪಿ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ. ಈಕೆ ವಿ.ಜಿ. ಗವೇಶ್ ಮತ್ತು ಅದಿರಾ ದಂಪತಿಯ ಪುತ್ರಿ. ಎಲೆಕ್ಟ್ರಿಕಲ್ ಕೆಲಸ ಮಾಡುತ್ತಾ ಕುಟುಂಬಕ್ಕೆ ಆಸರೆಯಾಗಿದ್ದ ಗವೇಶ್ ಇತ್ತೀಚೆಗೆ ಹೊಟ್ಟೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಭಾರೀ ಕೆಲಸದಲ್ಲಿ ತೊಡಗದಂತೆ ವೈದ್ಯರು ಸೂಚಿಸಿದ್ದಾರೆ. ನಂತರ ಸಣ್ಣ ಪ್ರಮಾಣದ ಉದ್ಯಮವಾಗಿ ಎಲ್ ಇಡಿ ಬಲ್ಬ್ ತಯಾರಿಕಾ ಘಟಕ ಆರಂಭಿಸಿದರು.
ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು, ಅವರು ಸಣ್ಣ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದ್ದರು. ಆದರೆ ದುಡಿಯಲು ಸಾಧ್ಯವಾಗದ ಕಾರಣ ಮನೆಗೆಲಸವೂ ನಿಂತುಹೋಯಿತು. ಬಲ್ಬ್ ಮಾರಿ ಬಂದ ಹಣದಲ್ಲಿ ಮನೆಯ ನಿತ್ಯ ಖರ್ಚುಗಳಷ್ಟನ್ನೇ ಸಾಕಾಗುವ ಕಾರಣ ಹೊಸ ಮನೆ ಯಾವಾಗ ತಯಾರುಗೊಳ್ಳುತ್ತದೆಯಪ್ಪ ಎಂಬ ಗೌರಿಯ ಪ್ರಶ್ನೆಗೆ ಗವೇಶ್ ನಿರುತ್ತರರಾಗಿದ್ದರು. ಇದರೊಂದಿಗೆ ಗೌರಿ ಕೂಡ ತನ್ನ ತಂದೆಯೊಂದಿಗೆ ಬಲ್ಬ್‍ಗಳನ್ನು ತಯಾರಿಸಲು ತೊಡಗಿಸಿಕೊಂಡ|ಳು.
ತಂದೆ ಮಾಡುವುದು, ಹೇಳುವುದನ್ನು ನೋಡಿ ಕೇಳಿ ಕಲಿತ ಗೌರಿ ಮೊದಲು ನಾಲ್ಕು ಬಲ್ಬ್ ತಯಾರಿಸಿದಳು. ನಂತರ ರಜಾ ದಿನಗಳಲ್ಲಿ ಬಲ್ಬ್ಗ ಗಳ ಸಂಖ್ಯೆ ಹೆಚ್ಚಾಗತೊಡಗಿತು. ಇಂದು 30 ಬಲ್ಬ್‍ಗಳನ್ನು ತಯಾರಿಸುತ್ತಾಳೆ ಎನ್ನುತ್ತಾರೆ ಗವೇಶ್. ಮನೆಯ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತಿದ್ದೇನೆ ಎಂದೂ ಗೌರಿ ಮುಗ್ದತೆಯಿಂದ ಕನಸುಗಳನ್ನು ನಗುತ್ತಾ ಹೇಳುತ್ತಾಳೆ.