ಈಗ ಬ್ಯಾಂಕ್ ವ್ಯವಹಾರ ನಡೆಸುವವರು ಎಟಿಎಂ ಬಳಸಿಯೇ ಬಳಸುತ್ತಾರೆ. ಹಿಂದಿನ ರೀತಿ ಬ್ಯಾಂಕ್‌ನಲ್ಲಿ ಚೆಕ್ ಬರೆದು, ಚಲನ್ ಬರೆದು ಹಣ ವಿಥ್ ಡ್ರಾ ಮಾಡುವುದು ಹಣ ಜಮಾ ಮಾಡುವುದು ತುಂಬಾ ಅಪರೂಪ ಎನ್ನುವಂತಾಗಿದೆ. ಈಗಂತು ಬ್ಯಾಂಕ್ ಮುಚ್ಚಿದ್ದರು ಎಟಿಎಂ ತೆರೆದೇ ಇರುತ್ತದೆ. ಹೀಗಾಗಿ ಎಲ್ಲರೂ ಏಟಿಎಂ ಬಳಸಲು ಕಲಿತಿರುತ್ತಾರೆ.
ಆದರೆ ನೀವು ಎಟಿಎಂ ಬಳಸಬೇಕಾದರೆ ಅದರ ಪಿನ್ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಬರಿ ಎಟಿಎಂ ಅಷ್ಟೇ ಅಲ್ಲ ನೀವು ಬಳಸುವ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ಗಳಿಗೂ ಒಂದೊಂದು ಪಿನ್ ನೀಡಲಾಗುತ್ತದೆ. ಈ ಯಂತ್ರಗಳು ನಮ್ಮ ನಿತ್ಯ ಜೀವನವನ್ನು ಮತ್ತಷ್ಟು ಸರಾಗವಾಗಿಸಿವೆ. ಪಟ್ಟಣದಲ್ಲಿ ನೀವು ಯಾವುದೇ ಎಟಿಎಂ ಮುಂದೆ ಹೋದರು ಅಲ್ಲಿ ಜನರು ಇರುತ್ತಾರೆ. ಹೀಗಾದ್ರೆ ಈ ಯಂತ್ರಗಳಿಂದ ಎಷ್ಟು ಅನುಕೂಲವಾಗಿದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.
ಆದ್ರೆ ನೀವು ಎಂದಾದ್ರು ಆಲೋಚಿಸಿದ್ದೀರಾ? ನಿಮ್ಮ ಎಟಿಎಂ ಪಿನ್ ಏಕೆ 4 ಸಂಖ್ಯೆಯಿಂದ ಕುಡಿರುತ್ತದೆ ಎಂದು.! ಈ ಪ್ರಶ್ನೆ ಒಂಥರ ತಮಾಷೆಯಾಗಿದ್ದರು ಇದೊಂದು ಅಚ್ಚರಿ ಮೂಡಿಸುವ ವಿಚಾರವಾಗಿದೆ. ಏಕೆಂದರೆ ನಿಮ್ಮ ಯಾವುದೇ ಬ್ಯಾಂಕ್‌ನ ಎಟಿಎಂ ಪಿನ್ 4 ಗುಪ್ತ ಸಂಖ್ಯೆಗಳ ಹೊಂದಿರುತ್ತದೆ.
ಮೊದಲ ಎಟಿಎಂ ಯಂತ್ರದ ಸಂಶೋಧಕ ಜಾನ್ ಶೆಪರ್ಡ್-ಬ್ಯಾರನ್ ಮೊದಲ ಯಂತ್ರವನ್ನು ವಿನ್ಯಾಸಗೊಳಿಸಿದಾಗ, ಅವರು ಪಿನ್ ಸಂಖ್ಯೆಯನ್ನು ಆರು ಅಂಕೆಗಳ ಪಿನ್ ನೀಡಿದ್ದರು. ಇದರಿಂದಾಗಿ ಸಂಖ್ಯೆ ಸಂಯೋಜನೆಗಳು ದೊಡ್ಡದಾಗಿರುತ್ತವೆ ಮತ್ತು ಸಂಕೀರ್ಣವಾಗಿರುತ್ತವೆ.
ಅವರ ಪತ್ನಿ ಕ್ಯಾರೊಲಿನ್ ಮುರ್ರೆ ಅವರು 6 ಅಂಕೆಗಳು ತುಂಬಾ ಹೆಚ್ಚು ಮತ್ತು ಜನರು ತಮ್ಮ ಪಿನ್ ಸಂಖ್ಯೆಯನ್ನು ಮರೆತುಬಿಡುತ್ತಾರೆ ಎಂದು ದೂರು ಹೇಳುತ್ತಿದ್ದರು. ಏಕೆಂದರೆ ಅವರೇ ಪಿನ್ ನಂಬರ್ ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು, ಹಾಗಾಗಿ ಪಿನ್ ನಂಬರ್ ಅನ್ನು 4 ಅಂಕಿಗಳಿಗೆ ಮೊಟಕುಗೊಳಿಸಿದರು, ಅದು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಾಯಿತು.
ಅಂದರೆ ಎಲ್ಲರು ಸುಲಭವಾಗಿ ನೆನಪಿಟ್ಟುಕೊಳ್ಳಲಿ ಎಂಬ ಕಾರಣಕ್ಕೆ 4 ಸಂಖ್ಯೆಯ ಪಿನ್ ನೀಡಲಾಗುತ್ತದೆ. ಮಾನವರು ಮೆದುಳು ಒಮ್ಮೆಗೆ 4ರಿಂದ 5 ಸಂಖ್ಯೆಗಳನ್ನು ಒಮ್ಮೆ ನೋಡಿದಾಗ ಸ್ಮೃತಿ ಪಟದಲ್ಲಿ ಉಳಿಯುತ್ತದೆ. ಅದಕ್ಕಿಂತ ದೊಡ್ಡ ಸಂಖ್ಯೆಯಾಗಿದ್ದರೆ ಅದನ್ನು ನೀವು ಬಾಯಿ ಪಾಠ ಮಾಡಬೇಕಾಗುತ್ತದೆ.
ಎಟಿಎಂ ಯಂತ್ರ ಕಳ್ಳತನವಾದರೆ?
ನಮ್ಮ ದೇಶದಲ್ಲಿ ಎಟಿಎಂ ಕಳುವಾಗುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಹಣ ತುಂಬಿದ ಎಟಿಎಂ ಅನ್ನೇ ಎಗರಿಸಿಬಿಡುತ್ತಾರೆ. ಆದರೆ ಕಳ್ಳರಿಗೆ ಈ ಎಟಿಎಂ ಕದ್ದರೆ ಸಿಕ್ಕಿಬೀಳುತ್ತೇವೆ ಎಂಬ ಪರಿವೇ ಇರುವುದಿಲ್ಲ. ಏಕೆಂದರೆ ದೇಶದಲ್ಲಿರುವ ಪ್ರತಿಯೊಂದು ಎಟಿಎಂಗಳು ಸಹ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಹೊಂದಿರುತ್ತದೆ, ಎಟಿಎಂ ಯಂತ್ರ ಹೊತ್ತೊಯ್ದರೆ ಕಳ್ಳರು ಇರುವ ಜಾಗ ಪತ್ತೆ ಮಾಡುವುದು ಸುಲಭವಾಗುತ್ತದೆ. ಇನ್ನು ಈಗಂತು ಎಲ್ಲಾ ಎಟಿಎಂನಲ್ಲು ಸಿಸಿಟಿವಿ ಹಾಗೂ ಸೆಕ್ಯೂರಿಟಿ ಇರುತ್ತಾರೆ.
ಇನ್ನು ಬ್ಯಾಂಕ್‌ಗಳು ಕ್ಲೋಸ್ ಆಗಿರುವ ದಿನಗಳಲ್ಲಿ ಎಟಿಎಂಗಳ ವ್ಯವಹಾರ ಹೆಚ್ಚಾಗಿರುತ್ತದೆ ಎಂದು ನೀವು ಭಾವಿಸಿರಬಹುದು ಆದರೆ ಇದು ತಪ್ಪು. ಶುಕ್ರವಾರದಂದು ಎಟಿಎಂ ಬಳಕೆ ಅಧಿಕವಾಗಿರುತ್ತದೆ ಎಂಬ ವರದಿಗಳಾಗಿವೆ. ಏಕೆಂದರೆ ಮುಂದಿನ ಎರಡು ದಿನ ಕೆಲವೊಮ್ಮೆ ಒಂದು ದಿನ ಬ್ಯಾಂಕ್ ರಜೆ ಇರುವ ಕಾರಣ ಹಣ ಹಿಂಪಡೆಯುವುದು ಹಾಗೂ ಜಮಾ ಮಾಡಲು ಶುಕ್ರವಾರ ಹೆಚ್ಚು ಜನ ಎಟಿಎಂ ಬಳಸುತ್ತಾರಂತೆ.
ಬ್ರೆಜಿಲ್‌ನಲ್ಲಿ ಪಿನ್ ಇಲ್ಲದ ಎಟಿಎಂಗಳಿವೆ
ಹೌದು ಬ್ರೆಜಿಲ್‌ನಲ್ಲಿರುವ ಎಟಿಎಂಗಳು ಈ ರೀತಿ ಪಿನ್‌ಗಳಿಂದ ಕೆಲಸ ಮಾಡುವುದಿಲ್ಲ. ಬದಲಾಗಿ ಅಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇರಲಿದೆ.