HEALTH TIPS

ವಲ್ಲರಪದವಿನಲ್ಲಿ ಒಂದೇ ತಿಂಗಳಲ್ಲಿ ಅಕ್ರಮ ಸಾಗಾಟದ 4 ಕೋಟಿ ಮೌಲ್ಯದ ಅಕ್ಕಿ ವಶ

              ಕೊಚ್ಚಿ: ವಲ್ಲರ್ ಪದಂ ಕಂಟೈನರ್ ಟರ್ಮಿನಲ್‍ನಿಂದ ಒಂದು ತಿಂಗಳಲ್ಲಿ 4 ಕೋಟಿ ಮೌಲ್ಯದ ವಿವಿಧ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

             ಈ ಅವಧಿಯಲ್ಲಿ ಇಲ್ಲಿ 13 ಕಂಟೈನರ್ ಗಳನ್ನು ಕಸ್ಟಮ್ ವಶಪಡಿಸಿಕೊಂಡಿದೆ. ಕೇಂದ್ರ ಹಣಕಾಸು ಸಚಿವಾಲಯದ ರಫ್ತು ನಿಯಂತ್ರಣವನ್ನು ಉಲ್ಲಂಘಿಸಿ ಸುಂಕ ಪಾವತಿಸದೆ ಇವುಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿವೆ.

           ಶನಿವಾರವಷ್ಟೇ  3 ಕಂಟೈನರ್ ಬಿರಿಯಾನಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಇದಕ್ಕೇ ಸುಮಾರು ಒಂದು ಕೋಟಿ ರೂ.ಮೌಲ್ಯ ಎಂದು ಅಂದಾಜಿಸಲಾಗಿದೆ. ರಫ್ತು ದಾಖಲೆಗಳಲ್ಲಿ ಅಕ್ಕಿಯನ್ನು ಉಪ್ಪು ಎಂದು ಬರೆಯಲಾಗಿತ್ತು. ಎದುರಿನ ಮೂಟೆಗಳಲ್ಲಿ ಉಪ್ಪು ಇದ್ದರೂ ಒಳಗಿನ ಮೂಟೆಗಳಲ್ಲಿ ಅಕ್ಕಿ ಸಂಗ್ರಹವಾಗಿತ್ತು. ಲಂಡನ್‍ಗೆ ಸಾಗಿಸಲು ತಮಿಳುನಾಡಿನ ವ್ಯಾಪಾರಿಯೊಬ್ಬರ ಹೆಸರಿನಲ್ಲಿ ಕೆಜಿಗೆ 160 ರೂಪಾಯಿ ಮೌಲ್ಯದ ಬಾಸ್ಮತಿ ಬಿರಿಯಾನಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ವಲ್ಲರ್‍ಪದಂ ಟ್ರಾನ್ಸ್‍ಶಿಪ್‍ಮೆಂಟ್‍ನಲ್ಲಿರುವ ಕಸ್ಟಮ್ಸ್ ತಂಡವು ಕಂಟೈನರ್‍ಗಳಲ್ಲಿ ಅಕ್ಕಿಯನ್ನು ಹೊಂದಿತ್ತು ಎಂಬ ಗುಪ್ತಚರ ವರದಿಯನ್ನು ಈ ಹಿಂದೆ ಪಡೆದಿತ್ತು.

            ಭಾರತದಲ್ಲಿ ಉತ್ಪಾದನೆಯಾಗುವ ಅಕ್ಕಿ ವಿದೇಶಕ್ಕೆ ತಲುಪಿದರೆ ನಾಲ್ಕು ಪಟ್ಟು ಬೆಲೆಗೆ ಮಾರಾಟವಾಗುತ್ತದೆ. ಇದರ ಲಾಭ ಪಡೆದು ನಾನಾ ಬಗೆಯ ಅಕ್ಕಿಯನ್ನು ವ್ಯಾಪಕವಾಗಿ ಕಳ್ಳಸಾಗಣೆ ಮಾಡಲಾಗುತ್ತಿದೆ. ಪ್ರಸ್ತುತ, ಡಿ.ಜಿ.ಎಫ್.ಟಿ ತೆರಿಗೆ ಮುಕ್ತ ಸೀಮಿತ ಪ್ರಮಾಣದ ಭತ್ತದ ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಿದೆ. ದೇಶದಲ್ಲಿ ಅಕ್ಕಿ ಸಿಗದ ಪರಿಸ್ಥಿತಿ ಉಂಟಾಗಲಿದ್ದು, ಇದರಿಂದ ಭಾರೀ ಬೆಲೆ ಏರಿಕೆಯಾಗಲಿದೆ ಎಂಬ ಕಾರಣಕ್ಕೆ ರಪ್ತಿಗೆ ನಿಷೇಧ ಹೇರಲಾಗಿದೆ.

       ಈ ಹಿಂದೆ ವಿವಿಧ ಸಮಯಗಳಲ್ಲಿ 10 ಕಂಟೈನರ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳ ಬೆಲೆ ಸುಮಾರು ಮೂರು ಕೋಟಿ.ರೂ.ಗಳು. ಚೆನ್ನೈ ಮತ್ತು ಕೋಯಿಕ್ಕೋಡ್ ನ ವ್ಯಾಪಾರಿಗಳು ವಿವಿಧ ಹಂತಗಳಲ್ಲಿ ಅಕ್ಕಿ ರಫ್ತು ಮಾಡಲು ಪ್ರಯತ್ನಿಸಿದರು. ಕಂಟೈನರ್ ದೇಶದ ಹೊರಗೆ ತಲುಪಿದರೆ 1 ಕೋಟಿ ಬೆಲೆಯ ಅಕ್ಕಿಯ ಬೆಲೆ 4 ಕೋಟಿಗೆ ಏರಬಹುದು.

         ಅಕ್ಕಿ ವಶಪಡಿಸಿಕೊಂಡಲ್ಲಿ ವ್ಯಾಪಾರಿಗಳ ಮಾಹಿತಿಯನ್ನು ತಕ್ಷಣವೇ ಗುಪ್ತಚರ ಇಲಾಖೆಗೆ ಹಸ್ತಾಂತರಿಸಲಾಗುವುದು. ಅಕ್ಕಿ ಬೆಲೆ ಏರಿಕೆಗೆ ಕಾರಣವಾಗುವ ಇಂತಹ ಕಾನೂನು ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries