HEALTH TIPS

ಮತ್ತೆ ಕಾಣಿಸಿಕೊಂಡ ಬಜಾಜ್ ಸಿಎನ್‌ಜಿ ಬೈಕ್.. ಜುಲೈ 5ಕ್ಕೆ ಬರಲಿದೆ, 120 ಕಿ.ಮೀ ಮೈಲೇಜ್?

Top Post Ad

Click to join Samarasasudhi Official Whatsapp Group

Qries

 ದೇಶದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಬಜಾಜ್ ಆಟೋ (Bajaj Auto), ಜುಲೈ 5ರಂದು ಇತಿಹಾಸವನ್ನು ಸೃಷ್ಟಿಸಲಿದೆ. ಅಂದು ವಿಶ್ವದ ಮೊದಲ ಸಿಎನ್‌ಜಿ ಬೈಕ್‌ (World First Cng Bike) ಅನ್ನು ಪರಿಚಯಿಸಲಿದ್ದು, ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಹೊಚ್ಚ ಹೊಸ ಮೋಟಾರ್‌ಸೈಕಲ್‌ನ್ನು ಪ್ರದರ್ಶಿಸಲಾಗುತ್ತದೆ.

ಈ ಮೋಟಾರ್‌ಸೈಕಲ್‌ ಬರುವುವಿಕೆವನ್ನು ಸಾವಿರಾರು ಗ್ರಾಹಕರು ಎದುರು ನೋಡುತ್ತಿದ್ದಾರೆ. ಸದ್ಯ ನೂತನ ಬೈಕ್ ಪ್ರಾಯೋಗಿಕ ಸಂಚಾರವನ್ನು ನಡೆಸುವಾಗ ಕಂಡುಬಂದಿದ್ದು, ಆ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.


ಹೊಸ ಫೋಟೋಗಳು ಬಜಾಜ್ ಸಿಎನ್‌ಜಿ ಬೈಕ್ (Bajaj Cng Bike) ಅತ್ಯಾಧುನಿಕ ವಿನ್ಯಾಸವನ್ನು ಹೊಂದಿರುವುದನ್ನು ಖಚಿತಪಡಿಸುತ್ತವೆ. ಜೊತೆಗೆ ಅಲಾಯ್ ವೀಲ್‌ಗಳು ಹಾಗೂ ಸ್ಪೋರ್ಟ್ ಸೈಲೆನ್ಸರ್ ಹೊಂದಿರುವುದನ್ನು ಕಾಣಬಹುದು. ನೂತನ ಬೈಕ್‌ನ ಸೀಟ್‌ ಕೆಳಭಾಗದಲ್ಲಿ ಸಿಎನ್‌ಜಿ ಫ್ಯುಯೆಲ್ (ಇಂಧನ) ಟ್ಯಾಂಕ್‌ ಇರಲಿದ್ದು, ಪೆಟ್ರೋಲ್ ಟ್ಯಾಂಕ್‌ನ್ನು ಕೂಡ ಹೊಂದಿರಬಹುದು ಎನ್ನಲಾಗಿದೆ. ಆದಾಗ್ಯೂ ಸ್ಪಷ್ಟ ವಿವರಗಳು ಲಭ್ಯವಾಗಿಲ್ಲ.

ಈ ಹಿಂದೆ ಬಜಾಜ್ ಸಿಎನ್‌ಜಿ ಮೋಟಾರ್‌ಸೈಕಲ್‌ನ ಎರಡು ರೂಪಾಂತರ (ವೇರಿಯೆಂಟ್)ಗಳನ್ನು ಪರೀಕ್ಷಾರ್ಥ ಓಡಾಟದ ಸಂದರ್ಭದಲ್ಲಿ ಗುರುತಿಸಲಾಗಿತ್ತು. ಇವುಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶದ ಖರೀದಿದಾರರಿಗೆ ಹೊಂದಿಕೊಳ್ಳುವಂತೆ ವಿನ್ಯಾಸ ಮಾಡಿದಂತೆ ತೋರುತ್ತಿತ್ತು. ಸಾಮಾನ್ಯ ರೂಪಾಂತರವು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಿಂಗಲ್-ಪೀಸ್ ಸೀಟ್, ಹ್ಯಾಂಡ್ ಗಾರ್ಡ್‌ಗಳು, ಎಲ್‌ಇಡಿ ಹೆಡ್‌ಲೈಟ್‌ಗಳು, ಬಲ್ಬ್ ಇಂಡಿಕೇಟರ್‌ಗಳು ಹಾಗೂ ಎಂಜಿನ್ ಸೈಡ್ ಲೆಗ್ ಗಾರ್ಡ್‌ಗಳನ್ನು ಪಡೆದಿತ್ತು.

ಮತ್ತೊಂದು ಮಾದರಿ (ಮಾಡೆಲ್)ಯು ಕಾಂಪ್ಯಾಕ್ಟ್ ವಿಂಡ್‌ಸ್ಕ್ರೀನ್ ಮತ್ತು ಸ್ಲೀಕ್ ಮಿರರ್‌ನ್ನು ಹೊಂದಿತ್ತು. ಇದರ ಬಹುತೇಕ ವಿನ್ಯಾಸ (ಡಿಸೈನ್) ಬಜಾಜ್ ಸಿಟಿ 125ಎಕ್ಸ್ (Bajaj CT 125X) ಮೋಟಾರ್‌ಸೈಕಲ್‌ಗೆ ಹೋಲಿಕೆಯಾಗುತ್ತಿತ್ತು. 'ಬಜಾಜ್ ಆಟೋ' ನೂತನ ಸಿಎನ್‌ಜಿ ಬೈಕ್‌ಗೆ ಪ್ಲಾಟಿನಾ (Platina) ಎಂಬ ಹೆಸರನ್ನು ಇಡಬಹುದು ಎಂದು ಹೇಳಲಾಗಿದೆ.

ಸಿಎನ್‌ಜಿ ಫ್ಯುಯೆಲ್ ಟ್ಯಾಂಕ್‌ನ್ನು ತಯಾರಿಸಲು ಹೆಚ್ಚಿನ ಹಣ ವ್ಯಯಿಸಬೇಕಾಗಿರುವುದರಿಂದ ನೂತನ ಬೈಕ್ ಬೆಲೆ ಸ್ವಲ್ಪ ಅಧಿಕವಿರಬಹುದು ಎನ್ನಲಾಗಿದೆ. ಹೊಸ ಮೋಟಾರ್‌ಸೈಕಲ್‌, ರೂ.70,000 ದಿಂದ ರೂ.80,000 (ಎಕ್ಸ್ ಶೋರೂಂ) ಬೆಲೆಯಲ್ಲಿ ದೊರೆಯಬಹುದು ಎಂದು ತಿಳಿದುಬಂದಿದೆ. 1 ಕೆಜಿ ಸಿಎನ್‌ಜಿ ಇಂಧನ (ಫ್ಯುಯೆಲ್) ದಹಿಸಿ, 100 ರಿಂದ 120 ಕಿಲೋಮೀಟರ್ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

ಬಜಾಜ್ ಕಂಪನಿಯು ಸಿಎನ್‌ಜಿ ಚಾಲಿತ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರಗತಿಯನ್ನು ಸಾಧಿಸಿದೆ. ಅದನ್ನು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿಯೂ ಮುಂದುವರಿಸಲು ಬಯಸಿದ್ದು, ನೂತನ ಸಿಎನ್‌ಜಿ ಬೈಕ್ ಮೂಲಕ ಸಾಕಾರಗೊಳಿಸಿಕೊಳ್ಳಲು ನಿರ್ಧರಿಸಿದಂತೆ ಕಾಣುತ್ತಿದೆ. ಮೊದಲಿಗೆ ವಾರ್ಷಿಕ 1 ರಿಂದ 1.20 ಲಕ್ಷ ಸಿಎನ್‌ಜಿ ಮೋಟಾರ್‌ಸೈಕಲ್‌ಗಳನ್ನು ಕಂಪನಿಯು ಉತ್ಪಾದಿಸಲಿದ್ದು, ಗ್ರಾಹಕರಿಂದ ಬೇಡಿಕೆ ಹೆಚ್ಚಾದರೆ ಸುಮಾರು 2 ಲಕ್ಷ ಯುನಿಟ್‌ವರೆಗೂ ತಯಾರಿಸಲು ಯೋಜಿಸಿದೆ ಎಂದು ವರದಿಯಾಗಿದೆ.

ಜುಲೈ 5ರಂದು ಪರಿಚಯಿಸಲಾಗುವ ಈ ಸಿಎನ್‌ಜಿ ಚಾಲಿತ ಬೈಕ್ ಮೇಲೆ ಗ್ರಾಹಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಜಾಜ್ ಕಂಪನಿಯು ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ನೂತನ ಮೋಟಾರ್‌ಸೈಕಲ್‌ನ್ನು ತಯಾರಿಸುತ್ತಿದ್ದು, ಸಿಎನ್‌ಜಿ ಇಂಧನ ಪೆಟ್ರೋಲ್‌ಗಿಂತ ಅಗ್ಗವಾಗಿರುವುದರಿಂದ ಜನರಿಗೆ ಹೆಚ್ಚಿನ ಹಣ ಉಳಿತಾಯವಾಗಲಿದೆ. ಹೊಸ ಬೈಕ್ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ, ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries