HEALTH TIPS

ಲೋಕಸಭಾ ಚುನಾವಣೆ ಫಲಿತಾಂಶ: 5,000 ಮತಗಳ ಅಂತರದ ಸುತಮುತ್ತ..

             ವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳು 5000 ಮತಗಳಿಗಿಂತ ಕಡಿಮೆ ಅಥವಾ ಅದಕ್ಕಿಂತ ಕೊಂಚ ಹೆಚ್ಚು ಮತಗಳ ಅಂತರದಿಂದ ಗೆದ್ದು ನಿಟ್ಟುಸಿರು ಬಿಟ್ಟಿದ್ದಾರೆ. ಹಿರಿಯ ನಾಯಕರಾದ ಮನೀಶ್ ತಿವಾರಿ, ರವೀಂದ್ರ ನಾರಾಯಣ್, ಡಿ.ಕೆ.ಅರುಣ ಸೇರಿದಂತೆ ಹಲವರು ಅಲ್ಪ ಅಂತರದಿಂದ ಗೆದ್ದ ಪ್ರಮುಖರು.

             ಈ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಿಂದ ಗೆದ್ದವರು ಶಿವಸೇನಾದ (ಶಿಂದೆ ಬಣ) ರವೀಂದ್ರ ದತ್ತಾರಾಮ್ ವೈಕಾರಾಮ್. ಅವರು ಶಿವಸೇನಾ (ಯುಬಿಟಿ) ಅಭ್ಯರ್ಥಿ ಅಮೋಲ್ ಗಜಾನನ ಕೀರ್ತೀಕರ್ ವಿರುದ್ಧ ಕೇವಲ 48 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

           ವಿಶೇಷ ಎಂದರೆ, ಹೀಗೆ ಸುಮಾರು 5000 ಮತಗಳ ಅಂತರದಲ್ಲಿ ಗೆದ್ದ ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಒಟ್ಟು 5,97,624 ಮತ ಪಡೆದಿರುವ ಛತ್ತೀಸಗಢದ ಕಾಂಕೇರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭೋಜರಾಜ್ ನಾಗ್, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬೀರೇಶ್ ಠಾಕೂರ್‌ಗಿಂತ ಕೇವಲ 1884 ಮತಗಳನ್ನಷ್ಟೇ ಹೆಚ್ಚಾಗಿ ಪಡೆದಿದ್ದಾರೆ.

               ಒಡಿಶಾದ ಜೈಪುರ ಕ್ಷೇತ್ರದಲ್ಲಿ ಬಿಜೆಪಿಯ ರಬೀಂದ್ರ ನಾರಾಯಣ್ ಬೆಹೆರ ಅವರು ಬಿಜೆಡಿಯ ಶರ್ಮಿಷ್ಠ ಸೇತಿ ವಿರುದ್ಧ ಕೇವಲ 1587 ಮತಗಳ ಅಂತರದಿಂದ ಗೆದ್ದಿದ್ದಾರೆ. ಇದೇ ರೀತಿ ಪಶ್ಚಿಮ ಬಂಗಾಳದ ವಿಷ್ಣುಪುರ ಕ್ಷೇತ್ರದಲ್ಲಿ ಬಿಜೆಪಿಯ ಸೌಮಿತ್ರ ಖಾನ್ ಅವರು ಟಿಎಂಸಿಯ ಸುಜಾತಾ ಮೊಂಡಲ್ ವಿರುದ್ಧ ಕೇವಲ 5567 ಮತಗಳ ಅಂತರದಿಂದ ಗೆದ್ದಿದ್ದಾರೆ. ತೆಲಂಗಾಣದ ಬಿಜೆಪಿ ಅಭ್ಯರ್ಥಿ ಡಿ.ಕೆ.ಅರುಣ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಂಶಿ ಚಂದ್ ರೆಡ್ಡಿ ಅವರಿಗಿಂತ 4500 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries