ಅಹಮದಾಬಾದ್: ಕೋವಿಡ್ ಸಂದರ್ಭದಲ್ಲಿ ಜನರ ಅನುಕೂಲಕ್ಕೆ ಬಂದ ಪ್ರಾಚೀನ ಯೋಗ ಪದ್ಧತಿಯನ್ನು ಮತ್ತಷ್ಟು ಉತ್ತೇಜಿಸಲು ರಾಜ್ಯದಾದ್ಯಂತ 51 ಯೋಗ ಸ್ಟುಡಿಯೊಗಳನ್ನು ಸ್ಥಾಪಿಸುವುದಾಗಿ ಅಂತರರಾಷ್ಟ್ರೀಯ ಯೋಗ ದಿನದಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘೋಷಿಸಿದ್ದಾರೆ.

ಬನಸ್‌ಕಾಂತಾ ಜಿಲ್ಲೆಯ ನದಾಬೆಟ್‌ನಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಹಕ್ಕೆ ಪರಿಣಾಮಕಾರಿ ವ್ಯಾಯಾಮವಾಗಿರುವ ಯೋಗವು ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದ ಫಲವಾಗಿ ಅಂತರರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿದೆ ಎಂದು ಹೇಳಿದರು.
ಮೊದಲ ಬಾರಿಗೆ ಸರ್ಕಾರ ಮತ್ತು ಬಿಎಸ್‌ಎಫ್‌ನ ಜಂಟಿ ಸಹಯೋಗದಲ್ಲಿ ನದಾಬೆಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪೀಕರ್ ಶಂಕರ್ ಚೌಧರಿ, ಸಚಿವ ಸಂಪುಟದ ಸದಸ್ಯರು ಯೋಗ ಮಾಡಿದರು.
'ಈ ವರ್ಷ ಜನರಿಗೆ ಆರೋಗ್ಯದ ಲಾಭ ಮಾಡಿಕೊಡುವ ದೃಷ್ಟಿಯಿಂದ ರಾಜ್ಯದಾದ್ಯಂತ 51 ಯೋಗ ಸ್ಟುಡಿಯೊ ಸ್ಥಾಪಿಸಲು ಉದ್ದೇಶಿಸಿದ್ದೇವೆ. ರಾಜ್ಯದ ಪ್ರತಿಯೊಂದು ಭಾಗಕ್ಕೂ ಯೋಗವನ್ನು ಪರಿಚಯಿಸಲು ಸರ್ಕಾರ ಬದ್ಧವಾಗಿದೆ'ಎಂದು ಹೇಳಿದರು.
ಒತ್ತಡದಿಂದ ಕೂಡಿದ ಇಂದಿನ ಜೀವನಶೈಲಿಗೆ ಯೋಗ ಉತ್ತಮ ಮಾರ್ಗೋಪಾಯವಾಗಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಯೋಗವು ಒಂದು ಸಾರ್ವಜನಿಕ ಚಳವಳಿಯಾಗಿದೆ ಎಂದರು.
'ಕೋವಿಡ್ ನಂತರ ಜನರ ಗಮನ ಅಭೂತಪೂರ್ವ ಮಟ್ಟದಲ್ಲಿ ಯೋಗದತ್ತ ಹೊರಳಿದೆ. ಕೊರೊನಾ ವಿರುದ್ಧ ಹೋರಾಡಲು ಒಂದು ಪರಿಣಾಮಕಾರಿ ಅಸ್ತ್ರವಾಗಿ ಜಗತ್ತು ಒಪ್ಪಿಕೊಂಡಿದೆ. ಜನ ಮನೆಯಲ್ಲೇ ಇರಬೇಕಾದ ಸ್ಥಿತಿ ಬಂದಾಗ ಯೋಗದ ಆಸನಗಳನ್ನು ಮಾಡಿ ಆರೋಗ್ಯವಾಗಿದ್ದರು. ರೋಗ ನಿರೋಧಕ ಶಕ್ತಿ ಹೆಚ್ಚಳ ಮತ್ತು ಶ್ವಾಸಕೋಶದ ಬಲವರ್ಧನೆಗೆ ಯೋಗ ನೆರವಾಗಿದೆ'ಎಂದಿದ್ದಾರೆ.
ರಾಜ್ಯದಾದ್ಯಂತ ಸುಮಾರು 1.25 ಕೋಟಿ ಜನರು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.