HEALTH TIPS

ಮಧ್ಯಪ್ರದೇಶ: ಸಚಿವರ ಆದಾಯ ತೆರಿಗೆ 52 ವರ್ಷಗಳ ಹಿಂದಿನ ನಿಯಮ ರದ್ದು

         ಭೋಪಾಲ್‌: ಮಧ್ಯಪ್ರದೇಶದ ಸಚಿವರು ಇನ್ನು ಮುಂದೆ ತಾವು ಪಡೆಯುವ ವೇತನ ಮತ್ತು ಸವಲತ್ತುಗಳಿಗೆ ತಾವೇ ಆದಾಯ ತೆರಿಗೆ ಪಾವತಿಸಬೇಕು. ಇಲ್ಲಿಯವರೆಗೆ ಈ ಹೊರೆಯನ್ನು ರಾಜ್ಯ ಸರ್ಕಾರ ಭರಿಸುತ್ತಿತ್ತು.

 ‌          ಈ ಸಂಬಂಧ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರ ನೇತೃತ್ವದ ಸಂಪುಟ ಸಭೆ ಮಂಗಳವಾರ ನಿರ್ಧಾರ ತೆಗೆದುಕೊಂಡಿದೆ.

            1972ರ ನಿಯಮದ ಪ್ರಕಾರ ಸಚಿವರ ವೇತನ ಮತ್ತು ಸವಲತ್ತುಗಳ ಮೇಲಿನ ಆದಾಯ ತೆರಿಗೆಯನ್ನು ರಾಜ್ಯ ಸರ್ಕಾರ ಭರಿಸುತ್ತಿತ್ತು. ಈ ನಿಯಮವನ್ನು ರದ್ದುಗೊಳಿಸಲು ಸಂಪುಟ ನಿರ್ಧರಿಸಿದೆ. ಅಲ್ಲದೆ, ಎಲ್ಲ ಸಚಿವರು ತಮ್ಮ ಆದಾಯ ತೆರಿಗೆಯನ್ನು ತಾವೇ ಪಾವತಿಸುವುದಕ್ಕೆ ಸಮ್ಮತಿ ಸೂಚಿಸಿದೆ ಎಂದು ಮುಖ್ಯಮಂತ್ರಿ ಯಾದವ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries