HEALTH TIPS

ನಿಮ್ಮ ಮಗುವನ್ನು ಮೊಬೈಲ್ ಚಟದಿಂದ ತಪ್ಪಿಸಬೇಕೆ? ಈ 5 ಸಲಹೆ ಅನುಸರಿಸಿ

 ಇಂದಿನ ಕಾಲದಲ್ಲಿ ಮಕ್ಕಳು ಹೊರಗಡೆ ಫ್ರೆಂಡ್ಸ್ ಜೊತೆ ಆಟವಾಡುವುದಕ್ಕಿಂತ ಹೆಚ್ಚಾಗಿ ಮೊಬೈಲ್ (Mobile Addiction) ಜೊತೆ ಆಟವಾಡುತ್ತಾರೆ. ಅವರು ಇಡೀ ದಿನ ಟಿವಿ, ಮೊಬೈಲ್ ಎಂದೇ ಕಾಲ ಕಳೆಯುತ್ತಾರೆ. ಇದರಿಂದ ಮಕ್ಕಳು ಕಣ್ಣುಗಳ ಮೇಲೆ ಮಾತ್ರವಲ್ಲ ಅವರ ಒಟ್ಟಾರೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಹಾಗಾಗಿ ನಿಮ್ಮ ಮಗುವನ್ನು ಮೊಬೈಲ್ ಚಟದಿಂದ ಬಿಡಿಸಲು ಈ ಸಲಹೆ ಅನುಸರಿಸಿ.

1. ಸಮಯದ ಮಿತಿಯನ್ನು ಹೊಂದಿಸಿ

ನಿಮ್ಮ ಮಗು ಮೊಬೈಲ್ ಜೊತೆ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸಲು ಇದು ಉತ್ತಮ ಮಾರ್ಗವಾಗಿದೆ. ಹಾಗಾಗಿ ನೀವು ಅವರ ದೈನಂದಿನ ಚಟುವಟಿಕೆಗಳ ಮೇಲೆ ನಿಗಾವಹಿಸಿ. ಸರಿಯಾದ ದಿನಚರಿಯನ್ನು ರೂಪಿಸಿ. ಮೊಬೈಲ್ ಫೋನ್ ಗಳನ್ನು ದಿನದಲ್ಲಿ ಸ್ವಲ್ಪ ಹೊತ್ತು ಮಾತ್ರ ಬಳಸುವಂತೆ ತಿಳಿಸಿ.

2. ಆರೋಗ್ಯಕರ ಆಹಾರ ಕ್ರಮ

ನಿಮ್ಮ ಮಗುವಿನ ಆರೋಗ್ಯಕ್ಕಾಗಿ ಉತ್ತಮ ಆಹಾರ ಕ್ರಮಗಳನ್ನು ಪಾಲಿಸಿ. ಹಾಗೆಯೇ ಮಕ್ಕಳ ಕಣ್ಣು ಮತ್ತು ಮೆದುಳಿನ ಆರೋಗ್ಯವನ್ನು ಉತ್ತಮವಾಗಿಡುವಂತಹ ಆಹಾರ ಪದಾರ್ಥಗಳನ್ನು ಅವರಿಗೆ ನೀಡಿ. ಹಾಗೇ ಮೊಬೈಲ್ ಬಿಟ್ಟು ಹೊರಗಡೆ ಸ್ನೇಹಿತರೊಂದಿಗೆ ಆಟವಾಡಲು ಪ್ರಚೋದಿಸಿ.

3. ಆರೋಗ್ಯಕರ ನಿದ್ರೆ

ಮಕ್ಕಳಿಗೆ ಪ್ರತಿದಿನ ಉತ್ತಮ ನಿದ್ರಾ ಕ್ರಮವನ್ನು ಅನುಸರಿಸಿ. ಅವರು ನಿದ್ರೆಯ ಸಮಯದಲ್ಲಿ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದರೆ ಅವರಿಗೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿಸಿ. ಮೊಬೈಲ್‌ನಿಂದ ಕಣ್ಣುಗಳ ಮೇಲೆ ಯಾವ ರೀತಿ ಹಾನಿಯಾಗುತ್ತದೆ ಎಂಬುದನ್ನು ತಿಳಿಸಿ. ನಿದ್ರೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ವಿವರಿಸಿ. ನಿದ್ರೆಗೂ ಮುನ್ನ 2 ಗಂಟೆಗಳ ಮೊದಲೇ ಮೊಬೈಲ್ ಪಕ್ಕಕ್ಕಿಡುವಂತೆ ತಿಳಿಸಿ.

4. ಅವರ ಸ್ನೇಹಿತರಾಗಿ

ನಿಮ್ಮ ಮಕ್ಕಳಿಗೆ ಉತ್ತಮ ಜೀವನಶೈಲಿಯನ್ನು ಅನುಸರಿಸಲು ಕಲಿಸುವುದಾದರೆ ಮೊದಲು ನೀವು ಅವರ ಸ್ನೇಹಿತರಾಗಿ. ಆಗ ಅವರು ತಮ್ಮ ಸುಖ, ದುಃಖಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಹಾಗಾಗಿ ದಿನದಲ್ಲಿ ನಿಮ್ಮ ಕೆಲಸಗಳಿಗೆ ಸ್ವಲ್ಪ ಹೊತ್ತು ಗುಡ್ ಬಾಯ್ ಹೇಳಿ ನಿಮ್ಮ ಮಕ್ಕಳ ಜೊತೆ ಸಮಯ ಕಳೆಯಿರಿ. ಇದರಿಂದ ಅವರು ಮೊಬೈಲ್ ಹೆಚ್ಚು ಬಳಸುವುದಿಲ್ಲ.

5. ಮೊಬೈಲ್‌ನಿಂದಾಗುವ ಹಾನಿಗಳ ಬಗ್ಗೆ ತಿಳಿಸಿ

ಮಕ್ಕಳಿಗೆ ಮೊಬೈಲ್, ಟಿವಿ ಬಳಸುವುದರಿಂದಾಗಿ ಆಗುವ ಹಾನಿಗಳ ಬಗ್ಗೆ ಮನದಟ್ಟು ಮಾಡಿ. ಇದರ ನೀಲಿ ಬೆಳಕು ಕಣ್ಣುಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ವಿವರಿಸಿ. ಇದರಿಂದ ಮೆದುಳು ಹೇಗೆ ಹಾನಿಗೊಳಗಾಗುತ್ತದೆ ಎಂಬುದನ್ನು ತಿಳಿಸಿ. ಆಗ ಮಕ್ಕಳು ಅದರಿಂದ ದೂರವಿರುತ್ತಾರೆ.

ಈ ರೀತಿಯಲ್ಲಿ ನಿಮ್ಮ ಮಕ್ಕಳನ್ನು ಮೊಬೈಲ್ , ಟಿವಿ ಮುಂತಾದವುಗಳಿಂದ ದೂರವಿರಿಸಿ. ಅವರ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚು ಗಮನ ನೀಡಿ. ಇದರಿಂದ ಅವರಿಗೆ ಮುಂದಿನ ಭವಿಷ್ಯದಲ್ಲಾಗುವ ಹಾನಿಯನ್ನು ತಡೆಯಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries