ನವದೆಹಲಿ: ತನ್ನ ಸಮೂಹದ ಕಂಪನಿಯಾದ ಹಿಂದೂಸ್ತಾನ್ ಜಿಂಕ್ ಉದ್ಯೋಗಿಗಳಲ್ಲಿ 600ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಇದ್ದು, ಇವರು ಪ್ರಮುಖ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಸೋಮವಾರ ವೇದಾಂತ ಸಮೂಹ ಸಂಸ್ಥೆ ಹೇಳಿದೆ.
ನವದೆಹಲಿ: ತನ್ನ ಸಮೂಹದ ಕಂಪನಿಯಾದ ಹಿಂದೂಸ್ತಾನ್ ಜಿಂಕ್ ಉದ್ಯೋಗಿಗಳಲ್ಲಿ 600ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಇದ್ದು, ಇವರು ಪ್ರಮುಖ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಸೋಮವಾರ ವೇದಾಂತ ಸಮೂಹ ಸಂಸ್ಥೆ ಹೇಳಿದೆ.
200ಕ್ಕೂ ಹೆಚ್ಚು ಮಹಿಳಾ ಗಣಿಗಾರಿಕೆ ಇಂಜಿನಿಯರ್‌ಗಳ ಮೂಲಕ ತನ್ನ ಗಣಿಗಾರಿಕೆ ಕಾರ್ಯಾಚರಣೆಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಪನಿ ತಂದಿದೆ.
'ವಿಭಿನ್ನ ಸಾಮರ್ಥ್ಯಗಳೊಂದಿಗೆ ಉದ್ಯಮದ ವಿಕಾಸವನ್ನು ವೇಗಗೊಳಿಸಲು ಹಾಗೂ ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಯ ದೃಢವಾದ ಪ್ರಯಾಣಕ್ಕಾಗಿ ದೃಷ್ಟಿಕೋನಗಳನ್ನು ಹೆಚ್ಚಿಸಲು ಮಹಿಳಾ ವೃತ್ತಿಪರರಲ್ಲಿ ಹೂಡಿಕೆ ಮಾಡುವುದು ಪ್ರಮುಖವಾಗಿದೆ' ಎಂದು ಹಿಂದೂಸ್ತಾನ್ ಜಿಂಕ್ ಸಿಇಒ ಅರುಣ್ ಮಿಶ್ರಾ ಹೇಳಿದ್ದಾರೆ.
ಕಂಪನಿಯು ಎಲ್ಲಾ ಕಾರ್ಯನಿರ್ವಾಹಕ ಮತ್ತು ನಿರ್ವಹಣಾ ಹುದ್ದೆಗಳಲ್ಲಿ ಶೇಕಡಾ 30 ರಷ್ಟು ವೈವಿಧ್ಯತೆಯನ್ನು ಸಾಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.