ಜಮ್ಮು: ಪವಿತ್ರ ಹಿಮಲಿಂಗ ಅಮರನಾಥ ಮಂದಿರಕ್ಕೆ ಇಲ್ಲಿನ ಭಾಗವತಿ ನಗರದ ಮೂಲ ಶಿಬಿರದಿಂದ ಯಾತ್ರಿಗಳ ಮೂರನೇ ತಂಡ ಭದ್ರತೆಯೂಂದಿಗೆ ಇಂದು (ಭಾನುವಾರ) ಮುಂಜಾನೆ ಪ್ರಯಾಣ ಬೆಳೆಸಿತು.
ಜಮ್ಮು: ಪವಿತ್ರ ಹಿಮಲಿಂಗ ಅಮರನಾಥ ಮಂದಿರಕ್ಕೆ ಇಲ್ಲಿನ ಭಾಗವತಿ ನಗರದ ಮೂಲ ಶಿಬಿರದಿಂದ ಯಾತ್ರಿಗಳ ಮೂರನೇ ತಂಡ ಭದ್ರತೆಯೂಂದಿಗೆ ಇಂದು (ಭಾನುವಾರ) ಮುಂಜಾನೆ ಪ್ರಯಾಣ ಬೆಳೆಸಿತು.
ಎರಡು ಪ್ರತ್ಯೇಕ ಬೆಂಗಾವಲು ಪಡೆಗಳ ಭದ್ರತೆಯೊಂದಿಗೆ 6,619 ಯಾತ್ರಿಕರನ್ನು ಒಳಗೊಂಡ ತಂಡವು ಪ್ರಯಾಣ ಬೆಳೆಸಿತು.
ಯಾತ್ರೆಯ ಮೊದಲ ದಿನವಾದ ಶನಿವಾರ (ಜೂನ್ 19) ಹಿಮಾಲಯದ ಶ್ರೇಣಿಯಲ್ಲಿರುವ ಪವಿತ್ರ ಅಮರನಾಥ ಗುಹೆಗೆ ಇಲ್ಲಿನ ಭಾಗವತಿ ನಗರದ ಮೂಲ ಶಿಬಿರದಿಂದ ಸುಮಾರು 14 ಸಾವಿರ ಯಾತ್ರಾರ್ಥಿಗಳು ಪ್ರಯಾಣ ಬೆಳೆಸಿದ್ದರು.
52 ದಿನಗಳ ಪರ್ಯಂತದ ಅಮರನಾಥ ವಾರ್ಷಿಕ ಯಾತ್ರೆಯು ಆಗಸ್ಟ್ 19ರಂದು ಕೊನೆಗೊಳ್ಳಲಿದೆ. ಕಳೆದ ವರ್ಷ 4.5 ಲಕ್ಷಕ್ಕೂ ಹೆಚ್ಚು ಯಾತ್ರಿಗಳು ಹಿಮಲಿಂಗ ದರ್ಶನ ಪಡೆದಿದ್ದರು.