ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 100 ಅಭ್ಯರ್ಥಿಗಳ ಪೈಕಿ ಶೇಕಡ 68ರಷ್ಟು ಅಭ್ಯರ್ಥಿಗಳಿಗೆ ನೋಟಾಗಿಂತ ಕಡಿಮೆ ಮತಗಳು ಬಂದಿದೆ ಎಂದು ಚುನಾವಣಾ ಆಯೋಗ ಅಂಕಿ ಅಂಶದಿಂದ ತಿಳಿದುಬಂದಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 100 ಅಭ್ಯರ್ಥಿಗಳ ಪೈಕಿ ಶೇಕಡ 68ರಷ್ಟು ಅಭ್ಯರ್ಥಿಗಳಿಗೆ ನೋಟಾಗಿಂತ ಕಡಿಮೆ ಮತಗಳು ಬಂದಿದೆ ಎಂದು ಚುನಾವಣಾ ಆಯೋಗ ಅಂಕಿ ಅಂಶದಿಂದ ತಿಳಿದುಬಂದಿದೆ.
ಐದು ಕ್ಷೇತ್ರಗಳಲ್ಲಿ ಒಟ್ಟು 34,788 ಮತದಾರರು ನೋಟಾ ಪ್ರಯೋಗಿಸಿದ್ದಾರೆ.
ಜಮ್ಮು ವಲಯದ ಉಧಮ್‌ಪುರ ಕ್ಷೇತ್ರದಲ್ಲಿ ಗರಿಷ್ಠ 12,938 ನೋಟಾ ಮತಗಳ ಚಲಾವಣೆಯಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿತೇಂದ್ರ ಸಿಂಗ್ ಮರು ಆಯ್ಕೆಯಾಗಿದ್ದಾರೆ. 11 ಅಭ್ಯರ್ಥಿಗಳು ಕಣದಲ್ಲಿದ್ದ ಈ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳಿಗೆ ನೋಟಾಗಿಂತ ಕಡಿಮೆ ಮತ ಬಂದಿವೆ.
ಜಮ್ಮುವಿನಲ್ಲಿ 4,645 ಮತದಾರರು ನೋಟಾ ಬಟನ್ ಒತ್ತಿದ್ದಾರೆ. ಇದು ಉಳಿದ 18 ಅಭ್ಯರ್ಥಿಗಳು ಗಳಿಸಿದ ಮತಕ್ಕಿಂತ ಹೆಚ್ಚಾಗಿದೆ. 22 ಅಭ್ಯರ್ಥಿಗಳು ಕಣದಲ್ಲಿದ್ದ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜುಗಲ್ ಕಿಶೋರ್ ಮರು ಆಯ್ಕೆಯಾಗಿದ್ದಾರೆ.
ಶ್ರೀನಗರ ಕ್ಷೇತ್ರದಲ್ಲಿ 5,998 ನೋಟಾ ಮತ ಚಲಾವಣೆಯಾಗಿವೆ. ಇಲ್ಲಿದ್ದ 24 ಅಭ್ಯರ್ಥಿಗಳ ಪೈಕಿ 18 ಮಂದಿಗೆ ನೋಟಾಗಿಂತ ಕಡಿಮೆ ಮತಗಳು ಸಿಕ್ಕಿವೆ.
ಅನಂತ್‌ನಾಗ್-ರಾಜೌರಿಯಲ್ಲಿ ನೋಟಾಗೆ 6,223 ಮತ ಬಿದ್ದಿವೆ. 20 ಅಭ್ಯರ್ಥಿಗಳಿದ್ದ ಈ ಕ್ಷೇತ್ರದಲ್ಲಿ 9 ಮಂದಿಗೆ ನೋಟಾಗಿಂತ ಕಡಿಮೆ ಮತಗಳು ಸಿಕ್ಕಿವೆ.
22 ಅಭ್ಯರ್ಥಿಗಳಿದ್ದ ಬಾರಾಮುಲ್ಲಾದಲ್ಲಿ 4,984 ಮತದಾರರು ನೋಟಾ ಪ್ರಯೋಗಿಸಿದ್ದು, 14 ಅಭ್ಯರ್ಥಿಗಳಿಗೆ ನೋಟಾಗಿಂತ ಕಡಿಮೆ ಮತಗಳು ಬಂದಿವೆ.