ನವದೆಹಲಿ: ತೈಲ ಕಂಪನಿಗಳು ಜೂನ್ 1 ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹ 69.50 ಹಾಗೂ ಜೆಟ್ ಇಂಧನ(ಎಟಿಎಫ್) ದರವನ್ನು ಶೇ 6.5ರಷ್ಟು ಕಡಿತಗೊಳಿಸಿವೆ.
ನವದೆಹಲಿ: ತೈಲ ಕಂಪನಿಗಳು ಜೂನ್ 1 ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹ 69.50 ಹಾಗೂ ಜೆಟ್ ಇಂಧನ(ಎಟಿಎಫ್) ದರವನ್ನು ಶೇ 6.5ರಷ್ಟು ಕಡಿತಗೊಳಿಸಿವೆ.
ಇದರೊಂದಿಗೆ ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ₹1,676 ಇದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್‌ಗೆ ಶೇ 6.5 ರಷ್ಟು ಕಡಿತಗೊಳಿಸಲಾಗಿದೆ. ಇದರೊಂದಿಗೆ ಮುಂಬೈನಲ್ಲಿ ಎಟಿಎಫ್ ದರ ಪ್ರತಿ ಲೀಟರ್‌ಗೆ ₹95,173.70 ರಿಂದ ₹ 88,834.27ಕ್ಕೆ ಇಳಿಕೆಯಾಗಿದೆ.
ಈ ವರ್ಷದಲ್ಲಿ 3ನೇ ಬಾರಿಗೆ ಇಂಧನ ದರವನ್ನು ಕಡಿತಗೊಳಿಸಲಾಗಿದೆ. ಮಾರ್ಚ್ 1 ರಂದು 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ₹19 ಮತ್ತು ಏಪ್ರಿಲ್‌ನಲ್ಲಿ ₹30.50 ರಷ್ಟು ಕಡಿತಗೊಳಿಸಲಾಗಿತ್ತು.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಬೆಂಚ್‌ಮಾರ್ಕ್ ಅಂತರರಾಷ್ಟ್ರೀಯ ಇಂಧನ ಮತ್ತು ವಿದೇಶಿ ವಿನಿಮಯದ ಸರಾಸರಿ ಬೆಲೆಯನ್ನು ಆಧರಿಸಿ ಪ್ರತಿ ತಿಂಗಳ 1 ರಂದು ಎಟಿಎಫ್ ಮತ್ತು ಅಡುಗೆ ಅನಿಲದ ಬೆಲೆಗಳನ್ನು ಪರಿಷ್ಕರಿಸುತ್ತವೆ.