ನವದೆಹಲಿ: ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡುವ ನ್ಯೂಕ್ಲಿಯರ್ ಸಾಫ್ಟ್‌ವೇರ್ ಎಕ್ಸ್‌ಪೋರ್ಟ್ಸ್ ಷೇರುಗಳ ಬೆಲೆ 7 ರಿಂದ 1305 ರೂ. ಮುಟ್ಟಿವೆ. ನ್ಯೂಕ್ಲಿಯಸ್ ಸಾಫ್ಟ್‌ವೇರ್‌ನ ಷೇರುಗಳ ಬೆಲೆ ನವೆಂಬರ್ 10, 1995 ರಂದು ರೂ 7.21 ರ ಮಟ್ಟದಲ್ಲಿತ್ತು.
ನ್ಯೂಕ್ಲಿಯಸ್ ಸಾಫ್ಟ್‌ವೇರ್ ಎಕ್ಸ್‌ಪೋರ್ಟ್ಸ್ ಕಂಪನಿಯು ಐಟಿ ವ್ಯವಹಾರದಲ್ಲಿ ಇರುವ ಸ್ಮಾಲ್ ಕ್ಯಾಪ್ ಕಂಪನಿಯಾಗಿದೆ. ವಿಶ್ವಾಸಾರ್ಹ ಡಿಜಿಟಲ್ ಸಾಲ ಮತ್ತು ವಹಿವಾಟು ಬ್ಯಾಂಕಿಂಗ್ ಪರಿಹಾರ ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ವಲಯದಲ್ಲಿ 200 ಕ್ಕೂ ಹೆಚ್ಚು ಗ್ರಾಹಕರಿಗೆ ತನ್ನ ಸೇವೆಗಳನ್ನು ಒದಗಿಸುತ್ತದೆ.
ಈ ಭಾರತೀಯ ಐಟಿ ಕಂಪನಿಯು ಸಾಲ ಮತ್ತು ವಹಿವಾಟು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವಲ್ಲಿ ದೈತ್ಯನಾಗಿ ಹೊರಹೊಮ್ಮಿದೆ. ಅಂದಾಜು 50 ದೇಶಗಳ 200ಕ್ಕೂ ಹೆಚ್ಚು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸೇವೆ ಒದಗಿಸುತ್ತಿರುವ ನ್ಯೂಕ್ಲಿಯಸ್ ಸಾಫ್ಟ್‌ವೇರ್ ಷೇರುಗಳು ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡುವ ಮೂಲಕ ಶ್ರೀಮಂತರನ್ನಾಗಿಸಿದೆ.
ಈ ಮಲ್ಟಿಬ್ಯಾಗರ್ ಐಟಿ ಷೇರು ಇತ್ತೀಚೆಗೆ ಪ್ರತಿ ಷೇರಿಗೆ 12.5 ರೂಪಾಯಿಗಳ ಲಾಭಾಂಶವನ್ನು ಘೋಷಿಸಿದೆ. ಕಂಪನಿಯು ರೂ. 10 ರ ಮುಖಬೆಲೆಯ ಷೇರುಗಳಿಗೆ ಶೇಕಡಾ 125 ರಷ್ಟು ಲಾಭಾಂಶ ನೀಡಿದೆ. ನ್ಯೂಕ್ಲಿಯಸ್ ಸಾಫ್ಟ್‌ವೇರ್‌ನ ಷೇರುಗಳ ಬೆಲೆ ಜುಲೈ 7, 2023 ರಂದು ರೂ. 10 ಲಾಭಾಂಶವನ್ನು ನೀಡಿವೆ. ಈ ಹಿಂದೆ, ಕಂಪನಿಯು 30 ಜೂನ್ 2022 ರಂದು ರೂ 7; 15 ಜುಲೈ 2021 ರಂದು ರೂ. 6 ಹಾಗೂ 11 ಆಗಸ್ಟ್ 2020 ರಂದು ರೂ. 3 ಮತ್ತು 24 ಮಾರ್ಚ್ 2020 ರಂದು ರೂ. 9 ಲಾಭಾಂಶವನ್ನು ನೀಡಿತ್ತು.
ನ್ಯೂಕ್ಲಿಯಸ್ ಸಾಫ್ಟ್‌ವೇರ್ ಅತ್ಯುತ್ತಮ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ವರ್ಷದಿಂದ ವರ್ಷಕ್ಕೆ, ಕಂಪನಿಯ ಆದಾಯವು ಅಂದಾಜು 30 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ತೆರಿಗೆ ಪಾವತಿಸಿದ ನಂತರದ ಲಾಭವು 50 ಪ್ರತಿಶತದಷ್ಟು ಹೆಚ್ಚಾಗಿದೆ. ನ್ಯೂಕ್ಲಿಯಸ್ ಸಾಫ್ಟ್‌ವೇರ್ ಷೇರುಗಳ ಬೆಲೆ ಶುಕ್ರವಾರ 1304.75 ರೂ. ಆಗಿದೆ. ಈ ಐಟಿ ಕಂಪನಿಯ ಮಾರುಕಟ್ಟೆ ಮೌಲ್ಯ ಅಂದಾಜು 3500 ಕೋಟಿ ರೂ. ಇದೆ. ನ್ಯೂಕ್ಲಿಯಸ್ ಸಾಫ್ಟ್‌ವೇರ್ ಷೇರುಗಳ ಬೆಲೆ 52 ವಾರಗಳ ಗರಿಷ್ಠ ಬೆಲೆ ರೂ 1823 ಹಾಗೂ ಕನಿಷ್ಠ ಬೆಲೆ ರೂ 945 ಆಗಿದೆ.
ಡಿಸೆಂಬರ್ 20, 2022 ರಂದು ರೂ 29.60 ರ ಕಡಿಮೆ ಮಟ್ಟದಿಂದ, ಈ ಷೇರುಗಳು ಹೂಡಿಕೆದಾರರಿಗೆ 4320% ರಷ್ಟು ಬಂಪರ್ ಲಾಭವನ್ನು ನೀಡಿವೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ 27 ಮಾರ್ಚ್ 2020 ರಂದು ಈ ಷೇರುಗಳ ಬೆಲೆ 3 ಏಪ್ರಿಲ್ 2020 ರಂದು ರೂ. 180 ಕ್ಕೆ ಇಳಿದವು, ಹೂಡಿಕೆದಾರರು 600 ಪ್ರತಿಶತಕ್ಕಿಂತ ಹೆಚ್ಚಿನ ಆದಾಯ ಪಡೆದಿದ್ದಾರೆ. ಈ ಷೇರುಗಳ ಬೆಲೆ ನವೆಂಬರ್ 10, 1995 ರಂದು ರೂ 7.21 ರ ಮಟ್ಟದಲ್ಲಿತ್ತು, ಹೂಡಿಕೆದಾರರು ಶೇ. 18102ರಷ್ಟು ಬಂಪರ್ ಲಾಭ ಪಡೆದಿದ್ದಾರೆ.