ಕುಂಬಳೆ: ಜಿಲ್ಲೆಯ ಮೀನುಗಾರಿಕಾ ವಲಯಕ್ಕೆ ಉತ್ತೇಜನ ನೀಡಲು ಶಿರಿಯ ಕೇಂದ್ರೀಕರಿಸಿ ಮಾದರಿ ಮೀನು ಕಾರ್ಮಿಕ ಗ್ರಾಮ ನಿರ್ಮಾಣವಾಗುತ್ತಿದೆ.
ಶಿರಿಯ, ಮಂಗಲ್ಪಾಡಿ, ಮಂಜೇಶ್ವರ ಭಾಗಗಳು ಇದರಲ್ಲಿ ಒಳಪಡಲಿವೆ. ಮೀನುಗಾರಿಕಾ ವಲಯದ ಮೂಲಸೌಕರ್ಯಗಳ ಕೊರತೆಯನ್ನು ಭರಿಸಿ ಸಮಗ್ರ ಅಭಿವೃದ್ಧಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ ವೈ) ಯಲ್ಲಿ ಒಳಪಡಿಸಿ ಕೇಂದ್ರ-ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಮೀನು ಕಾರ್ಮಿಕ ಗ್ರಾಮ ನಿರ್ಮಾಣವಾಗಲಿದೆ. ಇದಕ್ಕಾಗಿ 7.04 ಕೋಟಿ ರೂ. ಮಂಜೂರುಗೊಳಿಸಲಾಗಿದೆ.
ಇದರಲ್ಲಿ 3.73' ಕೋಟಿ ರೂ. ಕೇಂದ್ರದ ಅನುದಾನವಾದರೆ, 3.31 ಕೋಟಿ ರೂ. ರಾಜ್ಯದ ಅನುದಾನವಾಗಿದೆ. ಕರಾವಳಿ ಅಭಿವೃದ್ಧಿ ನಿಗಮವು ಯೋಜನೆಯನ್ನು ಜಾರಿಗೊಳಿಸುತ್ತಿದೆ. ಆಧುನಿಕ ಸೌಕರ್ಯಗಳು, ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ.ಆಮೂಲಕ ನೇರವಾಗಿ ಅಥವಾ ಪರೋಕ್ಷವಾಗಿ ಮೀನುವಲಯವನ್ನು ಆಶ್ರಯಿಸಿರುವವರಿಗೆ ಉತ್ತಮ ಜೀವನಗುಣಮಟ್ಟ,ಆರ್ಥಿಕ ಭದ್ರತೆಯನ್ನು ಯೋಜನೆ ಖಾತರಿಪಡಿಸುತ್ತದೆ.
ಶಿರಿಯ ಹೊರತು ಕೇರಳ ರಾಜ್ಯದಲ್ಲಿ ಎಂಟು ಪ್ರದೇಶಗಳಲ್ಲಿ ಮಾದರಿ ಮೀನುಕಾರ್ಮಿಕ ಗ್ರಾಮಗಳು ಬರಲಿವೆ.
ಮಂಜೇಶ್ವರ ಮೀನುಗಾರಿಕಾ ಬಂದರಿನಲ್ಲಿ ಮೀನನು ತಿನಿಸುಗಳ ಭೋಜನಾಲಯ, ಮಲಿನ ಜಲ ಶುದ್ದೀಕರಣ ಪ್ಲಾಂಟ್, ಮೀನು ಸಂಸ್ಕರಣಾ ಘಟಕ ಸಜ್ಜುಗೊಳಿಸಲಾಗುವುದು. ಶೌಚಾಲಯ ಸಂಕೀರ್ಣ, ಮಂಗಲ್ಪಾಡಿಯಲ್ಲಿ ಮಲ್ಟಿಲೆವೆಲ್ ಲರ್ನಿಂಗ್ ಸೆಂಟರ್, ಮುಸೋಡಿಯಲ್ಲಿ ಕಮ್ಯೂನಿಟಿ ಸೆಂಟರ್. ರೆಸ್ಕ್ಯೂ ಶೆಲ್ಟರ್ ನಿರ್ಮಿಸಲಾಗುವುದು. ಕಡಲ್ಕೊರೆತ ಸಂದರ್ಭದಲ್ಲಿ ಕರಾವಳಿಯ ಕುಟುಂಬಗಳನ್ನು ರಕ್ಷಿಸಲು ಇವು ನೆರವಾಗಲಿವೆ. ಶಿರಿಯದಲ್ಲಿ ಮೀನುಮಾರಾಟ ಘಟಕಗಳನ್ನು ಸಜ್ಜುಗೊಳಿಸಲಾಗುವುದು.
ಸಮುದ್ರ ಜೀವಿಗಳಿಗೆ ಸುಸ್ಥಿರ ಆವಾಸ ಕೇಂದ್ರ ಕಲ್ಪಿಸಲು ಆರ್ಟಿಫಿಶಿಯಲ್ ರೀಫ್ ಗಳನ್ನೂ ನಿರ್ಮಿಸಲಾಗುವುದು. ತೀರ ಸಂರಕ್ಷಣೆಗಾಗಿ ಗಾಳಿ ಮರಗಳನ್ನು ನೆಟ್ಟು ಬೆಳೆಸಿ ‘ಕೋಸ್ಟಲ್ ಬಯೋಶೀಲ್ಡ್’ ನಿರ್ಮಿಸಲಾಗುವುದು. ಔಟ್ ಬೋರ್ಡ್ ಎಂಜಿನ್ ಗಳ ದುರಸ್ಥಿ ಕಾಮಗಾರಿಗಿರುವ ಸೌಕರ್ಯಗಳನ್ನು ಶಿರಿಯಲ್ಲಿ ಸಜ್ಜುಗೊಳಿಸಲಾಗುವುದು.
ಅಭಿಮತ:
ಜಿಲ್ಲೆಯ ಮೀನುಗಾರಿಕಾ ವಲಯದ ಸುಸ್ಥಿರ ಅಭಿವೃದ್ದಿಯನ್ನು ಸಾಕಾರಗೊಳಿಸಲು ಜಾರಿಗೊಳಿಸುವ ಪ್ರಧಾನ ಯೋಜನೆಯಾಗಿದೆ ಮಾದರಿ ಮತ್ಸ್ಯಗ್ರಾಮ. ಮೀನು ಕಾರ್ಮಿಕರ ಸಾಮಾಜಿಕ ಹಾಗೂ ಆರ್ಥಿಕ ಸುರಕ್ಷೆ, ಹೆಚ್ಚಿನ ಉದ್ಯೋಗವಕಾಶಗಳ ಸೃಷ್ಟಿ, ಮತ್ಸ್ಯಗ್ರಾಮದ ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಸುಸ್ಥಿರ ಮೀನುಗಾರಿಕೆಯನ್ನು ಪ್ರೋತ್ಸಾಹಿಸುವುದು, ಕಡಲತೀದ ಸಂರಕ್ಷಣೆ ಮೊದಲಾದವುಗಳನ್ನು ಯೋಜನೆಯ ಮೂಲಕ ಉದ್ದೇಶಿಸಲಾಗಿದೆ.
-ಕೆ.ಎ.ಲಬೀಬ್
ಮೀನುಗಾರಿಕಾ ಸಹಾಯಕ ನಿರ್ದೇಶಕ.