ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಒಟ್ಟು ಏಳು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಬಿಹಾರದ ಪೂರ್ಣಿಯಾ ಕ್ಷೇತ್ರದಿಂದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಗೆಲುವು ಸಾಧಿಸಿದ್ದಾರೆ. ಅವರು ಜೆಡಿಯುನ ಸಂತೋಷ್ ಕುಮಾರ್ ಅವರನ್ನು 23,847 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಪಪ್ಪು ಯಾದವ್
ಮಹಾರಾಷ್ಟ್ರದ ಸಾಂಗ್ಲಿಯಿಂದ ವಿಶಾಲ್ (ದಾದಾ) ಪಾಟೀಲ್ ಗೆಲುವು ಸಾಧಿಸಿದ್ದಾರೆ. ಅವರು ಬಿಜೆಪಿಯ ಸಂಜಯ್ ಪಾಟೀಲ್ ವಿರುದ್ಧ 1,00,053 ಮತಗಳ ಅಂತರದಿಂದ ಗೆದ್ದಿದ್ದಾರೆ.
ವಿಶಾಲ್
ಪಂಜಾಬ್‌ನ ಖಾದೂರ್ ಸಾಹೀಬ್ ಕ್ಷೇತ್ರದಿಂದ ಖಾಲಿಸ್ತಾನ್ ಪ್ರತ್ಯೇಕವಾದಿ ಅಸ್ಸಾಂ ದಿಬ್ರೂಗಡ್ ಜೈಲಿನಲ್ಲಿರುವ ಅಮೃತ್‌ಪಾಲ್ ಸಿಂಗ್ ಜಯ ಸಾಧಿಸಿದ್ದಾರೆ. ಅವರು ಕಾಂಗ್ರೆಸ್‌ನ ಕುಲಬೀರ್ ಸಿಂಗ್ ಜೀರಾ ವಿರುದ್ಧ 1,97,120 ಮತಗಳ ಅಂತರದ ಭಾರಿ ವಿಜಯ ಸಾಧಿಸಿದ್ದಾರೆ.
ಅಮೃತ್‌ಪಾಲ್ ಸಿಂಗ್
ಪಂಜಾಬ್‌ನ ಫರೀದ್‌ಕೋಟ್‌ನಿಂದ ಸರಬ್ಜಿತ್ ಸಿಂಗ್ ಖಾಲ್ಸಾ ಅವರು ಎಎಪಿಯ ಕರಮ್‌ಜಿತ್ ಸಿಂಗ್ ಅನಮೋಲ್ ಅವರನ್ನು 70,053 ಮತಗಳ ಅಂತರದಿಂದ ಮಣಿಸಿದ್ದಾರೆ.
ಸರಬ್ಜಿತ್ ಸಿಂಗ್ ಖಾಲ್ಸಾ
ದಿಯು ಮತ್ತು ದಮನ್‌ನ ಪಕ್ಷೇತರ ಅಭ್ಯರ್ಥಿ ಪಟೇಲ್ ಉಮೇಶ್‌ಬಾಯಿ ಬಾಬುಬಾಯಿ ಅವರು ಗೆದ್ದಿದ್ದಾರೆ. ಅವರು ಬಿಜೆಪಿಯ ಲಾಲುಬಾಯಿ ಪಟೇಲ್ ಅವರನ್ನು 6,225 ಮತಗಳಿಂದ ಸೋಲಿಸಿದ್ದಾರೆ.
ಪಟೇಲ್ ಉಮೇಶ್‌ಬಾಯಿ ಬಾಬುಬಾಯಿ
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭೆಯಿಂದ ಅಬ್ದುಲ್ ರಶೀದ್ ಶೇಕ್ ಎನ್ನುವರು ಗೆದ್ದಿದ್ದಾರೆ. ಅವರು ಜಮ್ಮು ಕಾಶ್ಮೀರದ ಪ್ರಮುಖ ರಾಜಕಾರಣಿ ನ್ಯಾಷನಲ್ ಕಾನ್ಪರೆನ್ಸ್‌ನ ಓಮರ್ ಅಬ್ದುಲ್ಲಾ ಅವರನ್ನು 2,04,142 ಮತಗಳಿಂದ ಸೋಲಿಸಿದ್ದಾರೆ. ಎಂಜಿನಿಯರ್ ರಶೀದ್ ಎಂದು ಹೆಸರಾಗಿರುವ ಅವರು ಭಯೋತ್ಪಾದನೆಗೆ ಹಣ ಒದಗಿಸಿದ ಆರೋಪದ ಮೇಲೆ ಅವರು ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ.
ಅಬ್ದುಲ್ ರಶೀದ್ ಶೇಕ್
ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನಿಂದ ಮೊಹಮ್ಮದ್ ಹನೀಫ್ ಎನ್ನುವರು ಗೆದ್ದಿದ್ದಾರೆ. ಅವರು ಕಾಂಗ್ರೆಸ್‌ನ ತ್ರೇಸಿಂಗ್ ನಾಮಗ್ಯಾಲ್ ಅವರನ್ನು 27,862 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮೊಹಮ್ಮದ್ ಹನೀಫ್