ನವದೆಹಲಿ: ವಾರ್ಷಿಕ ಹಜ್ ಯಾತ್ರೆಗೆಂದು ಮೆಕ್ಕಾಗೆ ತೆರಳಿದ್ದ 98 ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.
ನವದೆಹಲಿ: ವಾರ್ಷಿಕ ಹಜ್ ಯಾತ್ರೆಗೆಂದು ಮೆಕ್ಕಾಗೆ ತೆರಳಿದ್ದ 98 ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.
ಸಚಿವಾಲಯ ವಕ್ತಾರ ರಣದೀಪ್ ಜೈಸ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಾರಿ 1,75,000 ಭಾರತೀಯರು ಮೆಕ್ಕಾಗೆ ತೆರಳಿದ್ದಾರೆ.
ಕಳೆದ ವರ್ಷ 187 ಜನ ಮೃತಪಟ್ಟಿದ್ದರು ಎಂದೂ ಅವರು ತಿಳಿಸಿದ್ದಾರೆ.
ಮೆಕ್ಕಾದ ಬೃಹತ್ ಮಸೀದಿ ಆವರಣದಲ್ಲಿ ಸರಾಸರಿ ತಾಪಮಾನ 51.8 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ ಎಂದು ಸೌದಿಯ ಸರ್ಕಾರಿ ಸುದ್ದಿವಾಹಿನಿ ವರದಿ ಮಾಡಿದೆ. ಜಾಗತಿಕ ತಾಪಮಾನದಿಂದ ಸೌದಿ ಅರೇಬಿಯಾದಲ್ಲಿ ತಾಪಮಾನ ತೀವ್ರ ಏರಿಕೆಯಾಗಲಿದೆ ಎಂದು 'ಟ್ರಾವೆಲ್ ಆಯಂಡ್ ಮೆಡಿಸಿನ್' ನಿಯತಕಾಲಿಕೆಯು 2024ರಲ್ಲಿ ನಡೆಸಿದ ಅಧ್ಯಯನದಲ್ಲಿ ತಿಳಿಸಿತ್ತು.