HEALTH TIPS

ಭಾರತ ಸೇರಿ 9 ರಾಷ್ಟ್ರಗಳ ಅಣ್ವಸ್ತ್ರ ಶಕ್ತಿ ಮತ್ತಷ್ಟು ಹೆಚ್ಚಳ

 ವದೆಹಲಿ: ಭಾರತ ಸೇರಿದಂತೆ ಅಣ್ವಸ್ತ್ರಗಳನ್ನು ಹೊಂದಿರುವ ಜಗತ್ತಿನ ಒಂಬತ್ತು ರಾಷ್ಟ್ರಗಳು 2023ರಲ್ಲಿ ಅಣ್ವಸ್ತ್ರಗಳನ್ನು ‍ಆಧುನೀಕರಣಗೊಳಿಸುವುದರ ಜೊತೆಗೆ ಹೊಸ ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ನಿಯೋಜಿಸಿವೆ ಎಂದು ಸ್ವೀಡನ್‌ನ ಚಿಂತಕರ ಚಾವಡಿ ಸಂಸ್ಥೆ 'ಸಿ‍ಪ್ರಿ' (ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್ ಪೀಸ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌) ಸೋಮವಾರ ಹೇಳಿದೆ.

ಭಾರತ ಮಾತ್ರವಲ್ಲದೆ, ಅಮೆರಿಕ, ರಷ್ಯಾ, ಫ್ರಾನ್ಸ್‌, ಚೀನಾ ಮತ್ತು ಪಾಕಿಸ್ತಾನ, ದಕ್ಷಿಣ ಕೊರಿಯಾ ಮತ್ತು ಇಸ್ರೇಲ್‌ ದೇಶಗಳನ್ನು 'ಸಿ‍ಪ್ರಿ' ಹೆಸರಿಸಿದೆ.

'2023ರ ಜನವರಿಯಲ್ಲಿ ಚೀನಾವು 410 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿತ್ತು. 2024ರ ಜನವರಿ ವೇಳೆಗೆ ಇದು 500ಕ್ಕೆ ಹೆಚ್ಚಾಗಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ' ಎಂದು ಸಂಸ್ಥೆಯು ತನ್ನ ವಿಶ್ಲೇಷಣಾತ್ಮಕ ವರದಿಯಲ್ಲಿ ಹೇಳಿದೆ.

ಜಗತ್ತಿನಾದ್ಯಂತ ಸುಮಾರು 2,100ರಷ್ಟು ಅಣ್ವಸ್ತ್ರ ಸಿಡಿತಲೆಗಳನ್ನು ಗುರಿ ನಿರ್ದೇಶಿತ (ಬ್ಯಾಲಿಸ್ಟಿಕ್‌) ಕ್ಷಿಪಣಿಗಳಲ್ಲಿ ಅಳವಡಿಸಿ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಈ ಪೈಕಿ ಬಹುತೇಕ ಎಲ್ಲ ಅಣ್ವಸ್ತ್ರಗಳು ರಷ್ಯಾ ಅಥವಾ ಅಮೆರಿಕಕ್ಕೆ ಸೇರಿವೆ ಎಂದು 'ಸಿಪ್ರಿ' ಹೇಳಿದೆ.

'ಇದೇ ಮೊದಲ ಬಾರಿಗೆ ಚೀನಾವು ಪರಮಾಣು ಅಸ್ತ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ ಎಂದು ನಂಬಲಾಗಿದೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

'ಈ ವರ್ಷದ ಜನವರಿ ವೇಳೆಗೆ ಜಗತ್ತಿನ ಶಸ್ತ್ರಾಸ್ತ್ರಗಳ ಕೋಠಿಯಲ್ಲಿ 12,121 ‍ಪರಮಾಣು ಸಿಡಿತಲೆಗಳಿವೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 9,585 ಅಣ್ವಸ್ತ್ರಗಳು ಸೇನಾ ಸಂಗ್ರಹಾಗಾರಗಳಲ್ಲಿವೆ' ಎಂದು ವರದಿ ಹೇಳಿದೆ.

ಅಂದಾಜು 3,904 ಸಿಡಿತಲೆಗಳನ್ನು ಗುರಿ ನಿರ್ದೇಶಿತ ಕ್ಷಿಪಣಿಗಳು ಮತ್ತು ಯುದ್ಧವಿಮಾನಗಳಲ್ಲಿ ಅಳವಡಿಸಲಾಗಿದೆ. ಉಳಿದವುಗಳು ಕೇಂದ್ರ ಸಂಗ್ರಹಾಗಾರಗಳಲ್ಲಿವೆ. 2023ರ ಜನವರಿಗೆ ಹೋಲಿಸಿದರೆ, ವರ್ಷದ ಅವಧಿಯಲ್ಲಿ ಕ್ಷಿಪಣಿ ಮತ್ತು ವಿಮಾನಗಳಲ್ಲಿ ಅಳವಡಿಸಿರುವ ಪರಮಾಣು ಬಾಂಬುಗಳ ಸಂಖ್ಯೆ 60 ಜಾಸ್ತಿಯಾಗಿದೆ.

'ಭಾರತ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾಗಳು ಗುರಿನಿರ್ದೇಶಿತ ಕ್ಷಿಪಣಿಗಳಲ್ಲಿ ಒಂದಕ್ಕಿಂತ ಹೆಚ್ಚು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಲು ಪ್ರಯತ್ನಿಸುತ್ತಿವೆ. ರಷ್ಯಾ, ಫ್ರಾನ್ಸ್‌, ಇಂಗ್ಲೆಂಡ್‌, ಅಮೆರಿಕ ದೇಶಗಳು ಈಗಾಗಲೇ ಈ ತಂತ್ರಜ್ಞಾನ ಹೊಂದಿವೆ. ಚೀನಾ ಇತ್ತೀಚೆಗೆ ಈ ಸಾಮರ್ಥ್ಯವನ್ನು ತನ್ನದಾಗಿಸಿಕೊಂಡಿದೆ' ಎಂದು 'ಸಿಪ್ರಿ' ಹೇಳಿದೆ.

ಜಗತ್ತಿನಲ್ಲಿರುವ ಒಟ್ಟು ಅಣ್ವಸ್ತ್ರಗಳಲ್ಲಿ ರಷ್ಯಾ ಮತ್ತು ಅಮೆರಿಕಗಳು ಶೇ 90ರಷ್ಟು ಅಸ್ತ್ರಗಳನ್ನು ಹೊಂದಿವೆ.

'2023ರಲ್ಲಿ ಎರಡೂ ರಾಷ್ಟ್ರಗಳ ಸೇನಾ ಸಂಗ್ರಹದಲ್ಲಿರುವ ಅಣ್ವಸ್ತ್ರಗಳ ಸಂಖ್ಯೆ ಸ್ಥಿರವಾಗಿದ್ದಂತೆ ಕಾಣುತ್ತಿದೆ. ಹಾಗಿದ್ದರೂ, 2023ರ ಜನವರಿಗೆ ಹೋಲಿಸಿದರೆ, ವರ್ಷದ ಅವಧಿಯಲ್ಲಿ ರಷ್ಯಾವು 36 ಹೆಚ್ಚು ಸಿಡಿತಲೆಗಳನ್ನು ಕಾರ್ಯಾಚರಣೆ ನಡೆಸುವ ‍ಪಡೆಗಳಿಗೆ ಒದಗಿಸಿದೆ ಎಂದು ಅಂದಾಜಿಸಲಾಗಿದೆ' ಎಂದು ವರದಿ ಹೇಳಿದೆ.

ಭಾರತದ ಬಳಿ 172 ಅಣ್ವಸ್ತ್ರ

ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಬಳಿ ಎರಡು ಪರಮಾಣು ಬಾಂಬ್‌ಗಳು ಹೆಚ್ಚಿವೆ. ಭಾರತದ ಬಳಿ 172 ಅಣ್ವಸ್ತ್ರ ಸಿಡಿತಲೆಗಳಿದ್ದರೆ ಪಾಕಿಸ್ತಾನವು 170 ಸಿಡಿತಲೆಗಳನ್ನು ಹೊಂದಿದೆ ಎಂದು 'ಸಿಪ್ರಿ' ಹೇಳಿದೆ.

2023ರಲ್ಲಿ ಭಾರತವು ತನ್ನ ‍ಅಣ್ವಸ್ತ್ರ ಸಾಮರ್ಥ್ಯವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಿದೆ. ಈ ವರ್ಷ ಭಾರತ ಮತ್ತು ಪಾಕಿಸ್ತಾನ ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಹೊಸ ಕ್ಷಿಪಣಿ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಮುಂದುವರಿಸಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

'ಭಾರತವು ಪಾಕಿಸ್ತಾನವನ್ನು ಕೇಂದ್ರವಾಗಿಸಿಕೊಂಡು ಅಣ್ವಸ್ತ್ರ ನಿರೋಧಕ ವ್ಯವಸ್ಥೆ ಅಭಿವೃದ್ಧಿ ಪಡಿಸಿರುವುದರ ಜೊತೆಗೆ ಚೀನಾದಾದ್ಯಂತ ಇರುವ ಗುರಿಗಳನ್ನು ತಲುಪುವುದೂ ಸೇರಿದಂತೆ ದೂರಗಾಮಿ ಸಾಮರ್ಥ್ಯದ ಅಣ್ವಸ್ತ್ರ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡುತ್ತಿದೆ' ಎಂದು 'ಸಿಪ್ರಿ' ವಿಶ್ಲೇಷಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries