ಪೆರ್ಲ: ಪೆರ್ಲದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಅಭಿಮಾನಿ ಬಳಗ ಮತ್ತು ಶ್ರೀ ಸತ್ಯಸಾಯಿ ಸೇವಾ ಸಮಿತಿ ಪೆರ್ಲ ವತಿಯಿಂದ ಆಯುರ್ವೇದ ಉಚಿತ ವೈದ್ಯಕೀಯ ಶಿಬಿರ ಜೂ. 9ರಂದು ಮಧ್ಯಾಹ್ನ 2.30ರಿಂದ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಠಾರದಲ್ಲಿ ಜರುಗಲಿದೆ. ಖ್ಯಾತ ವಾಯುರ್ವೇದ ವೈದ್ಯರು ಭಾಗವಹಿಸಲಿದ್ದು, ಉಚಿತ ತಪಾಸಣೆಯೊಂದಿಗೆ ಔಷಧ ವಿತರಣೆ ನಡೆಯಲಿದೆ. ವಿವಿಧ ಆಯುರ್ವೇದ ಔಷಧ ವಿತರಣಾ ಏಜನ್ಸಿಗಳ ಸಹಕಾರದೊಂದಿಗೆ ಶಿಬಿರ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.