HEALTH TIPS

ಅಸ್ಸಾಂ | ₹9 ಕೋಟಿ ಮೌಲ್ಯದ ಡ್ರಗ್ಸ್ ವಶ, ಇಬ್ಬರ ಬಂಧನ

         ಗುವಾಹಟಿ: 'ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯಲ್ಲಿ ಸುಮಾರು ₹9 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಇಂದು (ಭಾನುವಾರ) ತಿಳಿಸಿದ್ದಾರೆ.

          ಕರೀಮ್‌ಗಂಜ್ ಪೊಲೀಸರು ಹಾಗೂ ಬಿಎಸ್‌ಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ವಾಹನದಿಂದ ₹9 ಕೋಟಿ ಮೌಲ್ಯದ ಯಾಬಾ ಮಾತ್ರೆಗಳನ್ನು (YABA Tablets) ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.


             ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಹಿಮಂತ, ಕಳ್ಳಸಾಗಣೆ ಯತ್ನವನ್ನು ಬೇಧಿಸಿರುವ ರಾಜ್ಯ ಪೊಲೀಸ್ ಹಾಗೂ ಬಿಎಸ್‌ಎಫ್‌ ಜಂಟಿ ಭದ್ರತಾ ಪಡೆಯನ್ನು ಶ್ಲಾಘಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries