ಚೆನ್ನೈ: ಮದ್ರಾಸ್ ಐಐಟಿ Artificial Intelligence and Data Analytics ವಿಷಯದಲ್ಲಿ ಬಿ.ಟೆಕ್ ಪದವಿಯನ್ನು ಆರಂಭಿಸುತ್ತಿದೆ. ಇದೇ 2024-25 ನೇ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್ ಲಭ್ಯವಿರಲಿದೆ.
ಚೆನ್ನೈ: ಮದ್ರಾಸ್ ಐಐಟಿ Artificial Intelligence and Data Analytics ವಿಷಯದಲ್ಲಿ ಬಿ.ಟೆಕ್ ಪದವಿಯನ್ನು ಆರಂಭಿಸುತ್ತಿದೆ. ಇದೇ 2024-25 ನೇ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್ ಲಭ್ಯವಿರಲಿದೆ.
ಈ ಕೋರ್ಸ್‌ಗೆ ಜೆಇಇ ಪ್ರವೇಶ ಪರೀಕ್ಷೆ ಮೂಲಕ 50 ಸೀಟುಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಮದ್ರಾಸ್ ಐಐಟಿ ನಿರ್ದೇಶಕ ವಿ. ಕಾಮಕೋಟಿ ತಿಳಿಸಿದ್ದಾರೆ.
ಎಐ ಮತ್ತು ಡೇಟಾ ವಿಶ್ಲೇಷಣೆ ಉದ್ಯಮದಲ್ಲಿ ಅತ್ಯಂತ ಪ್ರತಿಭಾವಂತರನ್ನು ತಯಾರು ಮಾಡುವುದು ಈ ಕೋರ್ಸ್‌ನ ಉದ್ದೇಶ ಎಂದು ಅವರು ಹೇಳಿದ್ದಾರೆ.
ಇಂದು ಎಲ್ಲ ರಂಗಗಳಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ದತ್ತಾಂಶ ವಿಶ್ಲೇಷಣೆ ಕಾಲಿಟ್ಟಿದೆ. ಈ ವಿಷಯದಲ್ಲಿ ಬಿ.ಟೆಕ್ ಪದವಿ ಆರಂಭಿಸುತ್ತಿರುವುದು ಜಗತ್ತಿನಲ್ಲೇ ಮೊದಲು ಎಂದು ಅವರು ಮಾಹಿತಿ ನೀಡಿದ್ದಾರೆ.