HEALTH TIPS

Air India flight 20 ಗಂಟೆ ತಡ: ಎಸಿ ಇಲ್ಲದೇ ವಿಮಾನದೊಳಗೆ ಮೂರ್ಛೆ ಹೋದ ಪ್ರಯಾಣಿಕರು, ತನಿಖೆಗೆ ಡಿಜಿಸಿಎ ಆದೇಶ

       ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣ ಬೆಳೆಸಬೇಕಿದ್ದ ಏರ್ ಇಂಡಿಯಾ ವಿಮಾನ 20 ಗಂಟೆಗಳಿಗೂ ಹೆಚ್ಚು ಕಾಲ ವಿಳಂಬವಾಗಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು.

         ವಿಮಾನವು  ಗುರುವಾರ ಅಪರಾಹ್ನ 3.30ಕ್ಕೆ ಟೇಕ್ ಆಫ್ ಮಾಡಲು ನಿರ್ಧರಿಸಲಾಗಿತ್ತು ಆದರೆ  ಶುಕ್ರವಾರಕ್ಕೆ ರಿಶೆಡ್ಯೂಲ್ ಮಾಡುವ ಮೊದಲು ಸುಮಾರು ಆರು ಗಂಟೆಗಳ ಕಾಲ ವಿಳಂಬವಾಯಿತು.

          ವಿಮಾನವು ಇಂದು ಸುಮಾರು 3 ಗಂಟೆಗೆ ಟೇಕ್ ಆಫ್ ಆಗಲಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಳಂಬಕ್ಕೆ ಕಾರ್ಯಾಚರಣೆ ಸಮಸ್ಯೆಗಳು ಕಾರಣವೆಂದು ಹೇಳಲಾಗಿದೆ.


     ಈ ಅಡಚಣೆ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯನ್ನುಂಟುಮಾಡಿತು. ಹವಾನಿಯಂತ್ರಣದ ಕೊರತೆಯಿಂದಾಗಿ ಕೆಲವರು ವಿಮಾನದೊಳಗೆ ಮೂರ್ಛೆ ಹೋದ ಘಟನೆಯೂ ನಡೆಯಿತು. ಒಂದು ವಾರದಲ್ಲಿ ಇದು ಎರಡನೇ ಬಾರಿಗೆ ಸ್ಯಾನ್ ಫ್ರಾನ್ಸಿಸ್ಕೋ ವಿಮಾನದಲ್ಲಿನ ಏರ್ ಇಂಡಿಯಾ ಪ್ರಯಾಣಿಕರು ಅತಿಯಾದ ವಿಳಂಬದಿಂದಾಗಿ ಸಮಸ್ಯೆ ಅನುಭವಿಸುತ್ತಿರುವುದಾಗಿದೆ. ಕೆಲವು ಪ್ರಯಾಣಿಕರು X ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

            ನಮ್ಮ ತಂಡವು ಸಮಸ್ಯೆ ಬಗೆಹರಿಸಲು ಸಾಕಷ್ಟು ಪ್ರಯತ್ನಿಸುತ್ತಿದೆ. ನಿಮ್ಮ ನಿರಂತರ ಬೆಂಬಲ ಬೇಕಾಗಿದೆ. ಪ್ರಯಾಣಿಕರಿಗೆ ಅಗತ್ಯ ನೆರವು ನೀಡಲು ನಾವು ನಮ್ಮ ತಂಡಕ್ಕೆ ಸೂಚಿಸಿದ್ದೇವೆ ಎಂದು ಏರ್ ಇಂಡಿಯಾ ಹೇಳಿದೆ.

        ಘಟನೆಯ ಹಿನ್ನೆಲೆಯಲ್ಲಿ ಏವಿಯೇಷನ್ ​​ಕಾವಲು ಸಂಸ್ಥೆ ಡಿಜಿಸಿಎ ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ನೀಡಿದೆ. ಮೇ 30 ರಂದು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ AI 183 ಮೇ 24 ರಂದು ಮುಂಬೈನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ AI 179 ಎಂಬ ಎರಡು ಅಂತಾರಾಷ್ಟ್ರೀಯ ವಿಮಾನಗಳ ಅತಿಯಾದ ವಿಳಂಬದ ಬಗ್ಗೆ ನಿಯಂತ್ರಕರು ಉಲ್ಲೇಖಿಸಿದ್ದಾರೆ.

          ಕ್ಯಾಬಿನ್‌ನಲ್ಲಿ ಸಾಕಷ್ಟು ಕೂಲಿಂಗ್ ಇಲ್ಲದ ಕಾರಣ ಎರಡೂ ವಿಮಾನಗಳು ವಿಳಂಬವಾಗಿ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಅನುಭವಿಸುವಂತಾಯಿತು. ಏರ್ ಇಂಡಿಯಾ ಪ್ರಯಾಣಿಕರ ಸರಿಯಾದ ಕಾಳಜಿ ವಹಿಸುವಲ್ಲಿ ಪದೇ ಪದೇ ವಿಫಲವಾಗುತ್ತಿದೆ. ವಿಮಾನಗಳ ವಿಳಂಬದಿಂದಾಗಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯಗಳಿಗೆ ಸಂಬಂಧಿಸಿದ ತನ್ನ ನಿಬಂಧನೆಗಳನ್ನು ಅನುಸರಿಸುತ್ತಿಲ್ಲ ಎಂಬ ಆರೋಪವನ್ನು ನಿಯಂತ್ರಕ ಗಂಭೀರವಾಗಿ ಪರಿಗಣಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries