ಆಂಧ್ರಪ್ರದೇಶ: ಎನ್‌ಡಿಎ 127 ಕ್ಷೇತ್ರಗಳಲ್ಲಿ ಮುನ್ನಡೆ
ಬೆಳಿಗ್ಗೆ 11.30 ರವರೆಗಿನ ಟ್ರೆಂಡ್ ಪ್ರಕಾರ ಆಂಧ್ರಪ್ರದೇಶದಲ್ಲಿ ಎನ್‌ಡಿಎ 127 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಟಿಡಿಪಿ 98 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಆಂಧ್ರಪ್ರದೇಶ ಸಿಎಂ ಜಗನ್‌ಗೆ ಮುನ್ನಡೆ
ವೈಎಸ್‌ಆರ್‌ಸಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪುಲಿವೆಂದುಲಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಈಗಿನ ಟ್ರೆಂಡ್ ಪ್ರಕಾರ ರೆಡ್ಡಿ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.
ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪುತ್ರ ಮುನ್ನಡೆ
ಮಂಗಳಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪುತ್ರ ಹಾಗೂ ಟಿಡಿಪಿ ನಾಯಕ ನಾರಾ ಲೋಕೇಶ್ ಅವರು ವೈಎಸ್‌ಆರ್‌ಸಿಪಿ ಪ್ರತಿಸ್ಪರ್ಧಿ ಎಂ. ಲಾವಣ್ಯ ವಿರುದ್ಧ ಮತಗಳ ಮುನ್ನಡೆ ಸಾಧಿಸಿದ್ದಾರೆ.
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಂದು ಹೊರಬೀಳಲಿದೆ. ರಾಜ್ಯದ 175 ಕ್ಷೇತ್ರಗಳಿಗೆ ಮೇ 13ರಂದು ಲೋಕಸಭೆ ಚುನಾವನೆ ಜೊತೆ ಜೊತೆಗೆ ಮತದಾನ ನಡೆದಿತ್ತು. ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿಪಿ ವರಿಷ್ಠ ವೈ.ಎಸ್. ಜಗನ್ ಮೋಹನ ರೆಡ್ಡಿ, ಟಿಡಿಪಿ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ವರಿಷ್ಠ ಪಪವನ್ ಕಲ್ಯಾಣ್ ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ. ಇಲ್ಲಿಯೂ ಸಹ ಅತಂತ್ರ ವಿಧಾನಸಭೆಯ ಭವಿಷ್ಯವನ್ನು ಕೆಲ ಮತಗಟ್ಟೆ ಸಮೀಕ್ಷೆಗಳು ನುಡಿದಿವೆ.
ವೈಎಸ್‌ಆರ್‌ಸಿಪಿಯು 175 ಕ್ಷೇತ್ರಗಳಲ್ಲಿ ಟಿಡಿಪಿ 144, ಜನಸೇನಾ 21 ಮತ್ತು ಬಿಜೆಪಿ 10 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ.