HEALTH TIPS

Assembly Result 2024: ಅರುಣಾಚಲದಲ್ಲಿ BJP, ಸಿಕ್ಕಿಂನಲ್ಲಿ SKM ಭರ್ಜರಿ ಗೆಲುವು

 ಸಿಕ್ಕಿಂ ರಾಜ್ಯದಲ್ಲಿ ಎಸ್‌ಕೆಎಂ ಎರಡನೇ ಸಲ ಅಧಿಕಾರದ ಗದ್ದುಗೆ ಹಿಡಿದಿದೆ

ಸಿಕ್ಕಿಂ ರಾಜ್ಯದ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು ಪಕ್ಷಗಳ ಬಲಾಬಲ ಇಂತಿದೆ...

ಎಸ್‌ಕೆಎಂ- 31
ಎಸ್‌ಡಿಪಿ- 01

ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 32

ಬಹುಮತಕ್ಕೆ ಬೇಕಾದ ಸ್ಥಾನಗಳು: 17


ಅರುಣಾಚಲದಲ್ಲಿ ಬಿಜೆಪಿ ಹ್ಯಾಟ್ರಿಕ್‌ ಗೆಲುವು

ಅರುಣಾಚಲ ಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು ಪಕ್ಷಗಳ ಬಲಾಬಲ ಇಂತಿದೆ...

ಬಿಜೆಪಿ- 46

ಎನ್‌ಪಿಇಪಿ- 05

ಎನ್‌ಸಿಪಿ- 03

ಪಿಪಿಎ-02

ಪಕ್ಷೇತರ-03

ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 60

ಬಹುಮತಕ್ಕೆ ಬೇಕಾದ ಸ್ಥಾನಗಳು: 31

ಅರುಣಾಚಲದಲ್ಲಿ BJP, ಸಿಕ್ಕಿಂನಲ್ಲಿ SKM ಗೆಲುವು

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯದ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಅರುಣಾಚಲದಲ್ಲಿ ಬಿಜೆಪಿ ಹಾಗೂ ಸಿಕ್ಕಿಂನಲ್ಲಿ ಎಸ್‌ಕೆಎಂ ಅಧಿಕಾರ ಹಿಡಿದಿದೆ.‌ ಅರುಣಾಚಲದಲ್ಲಿ ಬಿಜೆಪಿ ಮೂರನೇ ಸಲ ಗೆಲುವು ದಾಖಲಿಸಿದೆ. ಸಿಕ್ಕಿಂನಲ್ಲಿ ಎಸ್‌ಕೆಎಂ ಎರಡನೇ ಸಲ ಅಧಿಕಾರದ ಚುಕ್ಕಾಣಿ ಹಿಡಿದೆ.

ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪತ್ನಿ ಕೃಷ್ಣ ಕುಮಾರಿ ರಾಯ್ ಗೆಲುವು

ಸಿಕ್ಕಿಂ ರಾಜ್ಯದ ಎಸ್‌ಕೆಎಂ ಪಕ್ಷದ ಮುಖಂಡ ಹಾಗೂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪತ್ನಿ ಕೃಷ್ಣ ಕುಮಾರಿ ರಾಯ್ ಅವರು ನಾಮ್ಚಿ-ಸಿಂಗಿತಾಂಗ್ ವಿಧಾನಸಭಾ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದಾರೆ. ಇವರು ಎಸ್‌ಕೆಎಂ ಪಕ್ಷದ ಅಭ್ಯರ್ಥಿಯಾಗಿದ್ದರು.

ಕೃಷ್ಣ ಕುಮಾರಿ ರಾಯ್ ಅವರು 5,302 ಮತಗಳಿಂದ ಎಸ್‌ಡಿಎಫ್‌ ಅಭ್ಯರ್ಥಿಯನ್ನು ಸೋಲಿಸಿದರು.

ಬಿಜೆಪಿಗೆ ಅರುಣಾಚಲ, ಎಸ್‌ಕೆಎಂಗೆ ಸಿಕ್ಕಿಂ

60 ಸದಸ್ಯ ಬಲದ ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 41 ಸ್ಥಾನಗಳನ್ನು ಗೆದ್ದಿದೆ. ಉಳಿದಂತೆ ಎನ್‌ಪಿಪಿ 4 ಮತ್ತು ಇತರರು 5 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.

ಉಳಿದ 10 ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

31 ಸದಸ್ಯ ಬಲದ ಸಿಕ್ಕಿಂನಲ್ಲಿ ಎಸ್‌ಕೆಎಂ 23 ಸ್ಥಾನ ಗೆದ್ದಿದೆ. ಒಂದು ಕಡೆ ಎಸ್‌ಡಿಎಫ್‌ ಜಯ ಸಾಧಿಸಿದೆ. ಉಳಿದಿರುವ 8 ಕ್ಷೇತ್ರಗಳಲ್ಲಿ ಎಸ್‌ಕೆಎಂ ಮುನ್ನಡೆ ಕಾಯ್ದುಕೊಂಡಿದೆ.

ಬಹುಮತದತ್ತ ಎಸ್‌ಕೆಎಂ, ಬಿಜೆಪಿ

32 ಸದಸ್ಯ ಬಲದ ಸಿಕ್ಕಿಂ ವಿಧಾನಸಭೆಯ 17 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಎಸ್‌ಕೆಎಂ 16 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. 15 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಹುಮತಕ್ಕೆ ಇನ್ನು ಒಂದು ಸ್ಥಾನವಷ್ಟೇ ಬೇಕಿದೆ.

ಉಳಿದ ಒಂದು ಕ್ಷೇತ್ರದಲ್ಲಿ ಎಸ್‌ಡಿಎಫ್‌ ಅಭ್ಯರ್ಥಿ ಜಯ ಸಾಧಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 27 ಕ್ಷೇತ್ರಗಳಲ್ಲಿ ಗೆದ್ದಿದೆ. 'ಮ್ಯಾಜಿಕ್‌ ನಂಬರ್‌' ತಲುಪಲು ಇನ್ನು 4 ಕ್ಷೇತ್ರಗಳನ್ನು ಗೆಲ್ಲಬೇಕಿದೆ.

ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ, ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 27, ಎನ್‌ಪಿಪಿ 2 ಹಾಗೂ ಇತರರು 2 ಕಡೆ ಜಯ ಸಾಧಿಸಿದ್ದಾರೆ.

ಉಳಿದ ಕ್ಷೇತ್ರಗಳ ಪೈಕಿ 19ರಲ್ಲಿ ಬಿಜೆಪಿ, 3ರಲ್ಲಿ ಎನ್‌ಪಿಪಿ ಮತ್ತು 5 ಕಡೆ ಇತರರು ಮುನ್ನಡೆಯಲ್ಲಿದ್ದಾರೆ.

ಇನ್ನೆರಡು ಕ್ಷೇತ್ರ ಎಸ್‌ಕೆಎಂ ತೆಕ್ಕೆಗೆ

ಸಿಕ್ಕಿಂನಲ್ಲಿ ಭಾರಿ ಬಹುಮತ ಸಾಧಿಸುವತ್ತ ಮುನ್ನುಗ್ಗುತ್ತಿರುವ ಎಸ್‌ಕೆಎಂ, ಚುಜಾಛೆನ್‌ ಮತ್ತು ಡಿಜೊಂಗು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 28 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಪ್ರಮುಖ ವಿರೋಧ ಪಕ್ಷ ಎಸ್‌ಡಿಎಫ್‌ ಒಂದು ಕಡೆ ಮುನ್ನಡೆಯಲ್ಲಿದೆ.

ಅರಣಾಚಲಯದಲ್ಲಿ 15ಕ್ಕೇರಿದ ಬಿಜೆಪಿ

ಪಾಲಿನ್‌, ಚಾಂಗ್ಲಾಂಗ್‌ (ಉತ್ತರ) ಮತ್ತು ನಮ್ಸಾಂಗ್‌ ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಜಯ

ಎಸ್‌ಕೆಎಂಗೆ 2 ಕಡೆ ಗೆಲುವು

ಪ್ರಮುಖ ವಿರೋಧ ಪಕ್ಷ ಎಸ್‌ಡಿಎಫ್‌ ಒಂದು ಕಡೆ ಮುನ್ನಡೆಯಲ್ಲಿದೆ.

12 ಸ್ಥಾನಗಳಲ್ಲಿ ಬಿಜೆಪಿಗೆ ಜಯ

ಅರುಣಾಚಲ ಪ್ರದೇಶದ 12 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಜಯದ ನಗೆ ಬೀರಿದೆ. ಮುಕ್ಟೊ, ಬೊಂಬಿಲಾ, ಇಟಾನಗರ, ಸಗಲೀ, ಜಿರೊ-ಹಪೋಲಿ, ತಾಲಿ, ತಲಿಹಾ, ರೋಯಿಂಗ್‌, ಹಯುಲಿಯಾಂಗ್‌, ಚೌಕಮ್‌, ಚಾಂಗ್ಲಾಂಗ್‌ (ದಕ್ಷಿಣ) ಮತ್ತು ಬೊರ್ದುರಿಯಾ - ಬೊಗಪಾನಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಖೋನ್ಸಾ ಪೂರ್ವ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಎಸ್‌ಡಿಎಫ್‌ಗೆ ಭಾರಿ ಹಿನ್ನಡೆ

ಮತ ಎಣಿಕೆ ಪ್ರಕ್ರಿಯೆಯ ಆರಂಭಿಕ ಟ್ರೆಂಡ್‌ ಗಮನಿಸಿದರೆ, ಪ್ರಮುಖ ವಿರೋಧ ಪಕ್ಷವಾಗಿರುವ ಎಸ್‌ಡಿಎಫ್‌ ಕೇವಲ ಒಂದು ಕಡೆಯಷ್ಟೇ ಮುನ್ನಡೆ ಕಾಯ್ದುಕೊಂಡಿದೆ.

ಭಾರತ ಫುಟ್‌ಬಾಲ್‌ ತಂಡದ ಮಾಜಿ ನಾಯಕ ಭೈಚುಂಗ್‌ ಭುಟಿಯಾ ಅವರು ತಮ್ಮ 'ಹಮಾರೊ ಸಿಕ್ಕಿಂ ಪಕ್ಷ'ವನ್ನು ಕಳೆದ ವರ್ಷ ಎಸ್‌ಡಿಎಫ್‌ ಜೊತೆ ವಿಲೀನ ಮಾಡಿದ್ದರು. ಆದಾಗ್ಯೂ, ಕೇವಲ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿರುವುದು ಭಾರಿ ಹಿನ್ನಡೆ ಎಂದು ಪರಿಗಣಿಸಲಾಗಿದೆ.

ಬಿಜೆಪಿ, ಎಸ್‌ಕೆಎಂಗೆ ಭಾರಿ ಮುನ್ನಡೆ

ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಭಾರಿ ಮುನ್ನಡೆಯತ್ತ ಸಾಗಿದೆ. ಈಗಾಗಲೇ 10 ಸ್ಥಾನಗಳನ್ನು ಅವಿರೋಧವಾಗಿ ಗೆದ್ದುಕೊಂಡಿರುವ ಬಿಜೆಪಿ, ಉಳಿದ 50 ಕ್ಷೇತ್ರಗಳ ಪೈಕಿ 34ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದಂತೆ ಎನ್‌ಪಿಇಪಿ 6ರಲ್ಲಿ ಹಾಗೂ ಇತರೆ ಪಕ್ಷಗಳು 8 ಕಡೆ ಮುನ್ನಡೆಯಲ್ಲಿವೆ.

ಸಿಕ್ಕಿಂನಲ್ಲಿಯೂ ಎಸ್‌ಕೆಎಂ ಭಾರಿ ಬಹುಮತ ಸಾಧಿಸುವ ಲಕ್ಷಣಗಳು ಕಂಡುಬಂದಿವೆ. ಇಲ್ಲಿನ 32 ವಿಧಾನಸಭಾ ಸ್ಥಾನಗಳ ಪೈಕಿ 31ರಲ್ಲಿ ಮುನ್ನಡೆ ಸಾಧಿಸಿದೆ. ಪ್ರಮುಖ ವಿರೋಧ ಪಕ್ಷ ಎಸ್‌ಡಿಎಫ್‌ ಒಂದು ಕಡೆಯಷ್ಟೇ ಮುನ್ನಡೆಯಲ್ಲಿದೆ.

ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 36 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದಂತೆ ಎನ್‌ಪಿಇಪಿ 9ರಲ್ಲಿ ಹಾಗೂ ಇತರೆ ಪಕ್ಷಗಳು 7 ಕಡೆ ಮುನ್ನಡೆಯಲ್ಲಿವೆ.

ಸಿಕ್ಕಿಂನಲ್ಲಿ ಎಸ್‌ಕೆಎಂ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಸ್‌ಡಿಎಫ್‌ ಒಂದು ಕಡೆಯಷ್ಟೇ ಮುನ್ನಡೆಯಲ್ಲಿದೆ.

ಯಾವುದೇ ಪಕ್ಷ ಬಹುಮತ ಸಾಬೀತು ಮಾಡಲು ಅರುಣಾಚಲ ಪ್ರದೇಶದಲ್ಲಿ 31 ಸ್ಥಾನಗಳನ್ನು ಹಾಗೂ ಸಿಕ್ಕಿಂನಲ್ಲಿ 17 ಕ್ಷೇತ್ರಗಳನ್ನು ಗೆಲ್ಲಬೇಕಿದೆ.

ಸಿಕ್ಕಿಂನಲ್ಲಿರುವ 32 ಸ್ಥಾನಗಳ ಪೈಕಿ 24 ಕಡೆ ಎಸ್‌ಕೆಎಂ ಆರಂಭಿಕ ಮುನ್ನಡೆ ಸಾಧಿಸಿದೆ.

ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 24 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಇಪಿ) 4 ಕಡೆ ಹಾಗೂ ಇತರೆ ಅಭ್ಯರ್ಥಿಗಳು 6 ಕಡೆ ಮುನ್ನಡೆಯಲ್ಲಿದ್ದಾರೆ.

ಬಿಜೆಪಿ ತೆಕ್ಕೆಗೆ ಅರುಣಾಚಲ ಪ್ರದೇಶ: ಸಮೀಕ್ಷೆ

ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಭವಿಷ್ಯ ನುಡಿದಿದೆ. 44 ರಿಂದ 51 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಉಳಿದಂತೆ 1 ರಿಂ 4 ಸ್ಥಾನಗಳು ಕಾಂಗ್ರೆಸ್‌ಗೆ, ತಲಾ 2 ರಿಂದ 6 ಕ್ಷೇತ್ರಗಳು ಕ್ರಮವಾಗಿ ಎನ್‌ಪಿಪಿ ಮತ್ತು ಇತರರ ಪಾಲಾಗಲಿವೆ ಎಂದು ಹೇಳಿದೆ.

ಬಿಜೆಪಿಗೆ, ಎಸ್‌ಕೆಎಂಗೆ ಮುನ್ನಡೆ

ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) 4 ಕಡೆ ಹಾಗೂ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 8 ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.

ಸಿಕ್ಕಿಂನ 32 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. 2019ರಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 17 ಹಾಗೂ ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್‌ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.

60 ಕ್ಷೇತ್ರಗಳನ್ನು ಒಳಗೊಂಡಿರುವ ಅರುಣಾಚಲ ಪ್ರದೇಶ ವಿಧಾನಸಭೆಯ 50 ಸ್ಥಾನಗಳಿಗೆ ಮತದಾನ ನಡೆದಿತ್ತು. ಆಡಳಿತಾರೂಢ ಬಿಜೆಪಿಯು 10 ಕ್ಷೇತ್ರಗಳನ್ನು ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 60 ರಲ್ಲಿ 41 ಸ್ಥಾನಗಳನ್ನು ಜಯಿಸಿತ್ತು. ಜೆಡಿಯು 7, ಎನ್‌ಪಿಪಿ 5, ಕಾಂಗ್ರೆಸ್‌ 4 ಮತ್ತು ಪಿಪಿಎ 1 ಸ್ಥಾನ ಗೆದ್ದುಕೊಂಡಿದ್ದರೆ, ಎರಡು ಸ್ಥಾನಗಳಲ್ಲಿ ಪಕ್ಷೇತರರು ಜಯಿಸಿದ್ದರು.

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಿದೆ.

ಈ ಎರಡೂ ರಾಜ್ಯಗಳಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಮತದಾನ ಏಪ್ರಿಲ್‌ 19 ರಂದು ಏಕಕಾಲದಲ್ಲಿ ನಡೆದಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries