ಲಾತೂರ್: ಮಹಾರಾಷ್ಟ್ರದ ಬೀಡ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಂಕಜಾ ಮುಂಡೆ ಅವರು ಸೋತರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೊ ಮಾಡಿದ್ದ ಟ್ರಕ್ ಚಾಲಕನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಲಾತೂರ್: ಮಹಾರಾಷ್ಟ್ರದ ಬೀಡ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಂಕಜಾ ಮುಂಡೆ ಅವರು ಸೋತರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೊ ಮಾಡಿದ್ದ ಟ್ರಕ್ ಚಾಲಕನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಲಾತೂರ್‌ನ ಅಹ್ಮದ್‌ಪುರದ ನಿವಾಸಿ 38 ವರ್ಷದ ಸಚಿನ್ ಕೊಂಡಿಬಾ ಮುಂಡೆ ಎಂದು ಗುರುತಿಸಲಾಗಿದೆ.
'ಬಸ್ ಅನ್ನು ವಶಕ್ಕೆ ಪಡೆದು ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ' ಎಂದು ಅವರು ಹೇಳಿದ್ದಾರೆ.
ಬೀಡ್ ಲೋಕಸಭಾ ಕ್ಷೇತ್ರದಲ್ಲಿ ಪಂಕಜಾ ಮುಂಡೆ ಅವರು ಸೋತರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೊ ಮಾಡಿದ್ದ ಸಚಿನ್, ಬಸ್‌ನಡಿ ಸಿಲುಕಿ ಮೃತಪಟ್ಟಿದ್ದಾನೆ. ಆದರೆ, ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪಂಕಜಾ ಮುಂಡೆ ಅವರು 'ಇಂಡಿಯಾ' ಬಣದ ಅಭ್ಯರ್ಥಿ ಭಜರಂಗ್ ಮನೋಹರ್ ಸೋನವಣೆ ವಿರುದ್ಧ 6,553 ಮತಗಳಿಂದ ಸೋಲು ಕಂಡಿದ್ದಾರೆ.